ETV Bharat / briefs

ಮಗಳಿಗಾಗಿ ರಾತ್ರಿಯಿಡೀ ಆಸ್ಪತ್ರೆಯಲ್ಲಿ ಕಳೆದು ಶತಕ ಸಿಡಿಸಿ ತಂಡ ಗೆಲ್ಲಿಸಿದ ಜೇಸನ್​ ರಾಯ್​! - ಜೇಸನ್​ ರಾಯ್

ಪಾಕ್​ ನೀಡಿದ್ದ 341 ರನ್ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡಕ್ಕೆ ಆರಂಭಿಕ ಜೇಸನ್​ ರಾಯ್​ ಭರ್ಜರಿ ಶತಕ(114ರನ್​​) ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಜೇಸನ್​ ರಾಯ್
author img

By

Published : May 18, 2019, 6:48 PM IST

ನಾಟಿಂಗ್​ಹ್ಯಾಮ್​: ನಿನ್ನೆ ಪಾಕಿಸ್ತಾನದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಮೂರು ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿದ್ದು, ಸರಣಿಯಲ್ಲಿ 3-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಪಾಕ್​ ನೀಡಿದ್ದ 341ರನ್​ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡಕ್ಕೆ ಆರಂಭಿಕ ಜೇಸನ್​ ರಾಯ್​ ಭರ್ಜರಿ ಶತಕ(114ರನ್​​) ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದರಲ್ಲೇನು ವಿಶೇಷ ಎಂದು ನೀವೂ ಅಂದುಕೊಳ್ತಿರಬಹುದು.ಪಂದ್ಯ ಆರಂಭಗೊಳ್ಳುವುದಕ್ಕೂ ಮೊದಲು ಇಂಗ್ಲೆಂಡ್​ ತಂಡದ ಆರಂಭಿಕ ಬರೋಬ್ಬರಿ 7ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ.

ಮಗಳು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಪತ್ನಿ ಜತೆ ಸೇರಿ ಮಗಳನ್ನ ಮಧ್ಯರಾತ್ರಿ 1:30ಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋದ ರಾಯ್​ ಬೆಳಗ್ಗೆ 8:30ರವರೆಗೂ ಆಕೆಯೊಂದಿಗೆ ಆಸ್ಪತ್ರೆಯಲ್ಲೇ ಕಾಲ ಕಳೆದಿದ್ದಾರೆ. ತದನಂತರ ತಂಡ ಸೇರಿಕೊಂಡ ರಾಯ್​ ಕೇವಲ ಕೆಲ ನಿಮಿಷಗಳ ಕಾಲ ಅಭ್ಯಾಸದಲ್ಲಿ ಭಾಗಿಯಾಗಿ ನೇರವಾಗಿ ಮೈದಾನಕ್ಕಿಳಿದಿದ್ದರು. ಜತೆಗೆ ಈ ಪಂದ್ಯದಲ್ಲಿ ಬರೋಬ್ಬರಿ 114ರನ್​ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದೇ ವಿಷಯವನ್ನ ರಾಯ್​ ಪಂದ್ಯ ಗೆದ್ದ ಬಳಿಕ ಬಿಬಿಸಿ ರೆಡಿಯೋ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮಗಳಿಗೆ ಏಕಾಏಕಿ ಜ್ವರ ಕಾಣಿಸಿಕೊಂಡ ಕಾರಣ ರಾತ್ರಿ 1:30ರ ವೇಳೆಗೆ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಅಲ್ಲಿ ಬೆಳಗ್ಗೆ 8:30ವರೆಗೆ ಕಾಲ ಕಳೆದೆವು. ಆ ಮೇಲೆ ಮೈದಾನಕ್ಕೆ ಬಂದು ತಂಡ ಸೇರಿಕೊಂಡಿರುವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಈ ಪಂದ್ಯ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ವಿಶೇಷವಾಗಿತ್ತು ಎಂದೂ ಅವರು ಹೇಳಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ರಾಯ್​ 'ಮ್ಯಾನ್​ ಆಫ್​ ದಿ ಮ್ಯಾಚ್'​ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Intro:Body:

ಮಗಳಿಗಾಗಿ ರಾತ್ರಿಯಿಡಿ ಆಸ್ಪತ್ರೆಯಲ್ಲಿ ಕಳೆದ್ರೂ ಶತಕ ಗಳಿಸಿ ತಂಡ ಗೆಲ್ಲಿಸಿದ ಜೇಸನ್​ ರಾಯ್​! 

ನ್ಯಾಟಿಂಗ್​ಹ್ಯಾಮ್​: ನಿನ್ನೆ ಪಾಕಿಸ್ತಾನದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಮೂರು ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿದ್ದು, ಸರಣಿಯಲ್ಲಿ 3-0 ಅಂತರದ ಮುನ್ನಡೆ ಪಡೆದುಕೊಂಡಿದೆ. 

ಪಾಕ್​ ನೀಡಿದ್ದ 341ರನ್​ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡಕ್ಕೆ ಆರಂಭಿಕ ಜೇಸನ್​ ರಾಯ್​ ಭರ್ಜರಿ ಶತಕ(114ರನ್​​) ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದರಲ್ಲೇನು ವಿಶೇಷ ಎಂದು ನೀವೂ ಅಂದುಕೊಳ್ಳುತ್ತಿರಬಹುದು. ಪಂದ್ಯ ಆರಂಭಗೊಳ್ಳುವುದಕ್ಕೂ ಮೊದಲು ಇಂಗ್ಲೆಂಡ್​ ತಂಡದ ಆರಂಭಿಕ ಬರೋಬ್ಬರಿ 7ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. 

ಮಗಳು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಪತ್ನಿ ಜತೆ ಸೇರಿ ಮಗಳನ್ನ ಮಧ್ಯರಾತ್ರಿ 1:30ಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋದ ರಾಯ್​ ಬೆಳಗ್ಗೆ 8:30ರವರೆಗೂ ಆಕೆಯೊಂದಿಗೆ ಆಸ್ಪತ್ರೆಯಲ್ಲೇ ಕಾಲಕಳೆದಿದ್ದಾರೆ. ತದನಂತರ ತಂಡ ಸೇರಿಕೊಂಡ ರಾಯ್​ ಕೇವಲ ಕೆಲ ನಿಮಿಷಗಳ ಕಾಲ ಅಭ್ಯಾಸದಲ್ಲಿ ಭಾಗಿಯಾಗಿ ನೇರವಾಗಿ ಮೈದಾನಕ್ಕಿಳಿದಿದ್ದರು. ಜತೆಗೆ ಈ ಪಂದ್ಯದಲ್ಲಿ ಬರೋಬ್ಬರಿ 114ರನ್​ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 

ಇದೇ ವಿಷಯವನ್ನ ರಾಯ್​ ಪಂದ್ಯ ಗೆದ್ದ ಬಳಿಕ ಬಿಬಿಸಿ ರೆಡಿಯೋ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮಗಳಿಗೆ ಏಕಾಏಕಿ ಜ್ವರ ಕಾಣಿಸಿಕೊಂಡ ಕಾರಣ ಮಧ್ಯರಾತ್ರಿ 1:30ರ ವೇಳೆಗೆ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಅಲ್ಲಿ ಬೆಳಗ್ಗೆ 8:30ವರೆಗೆ ಕಾಲ ಕಳೆದ್ದೇವು.  ಆ ಮೇಲೆ ಮೈದಾನಕ್ಕೆ ಬಂದು ತಂಡ ಕೂಡಿಕೊಡಿರುವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಈ ಪಂದ್ಯ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ವಿಶೇಷವಾಗಿತ್ತು ಎಂದು ಅವರು ಹೇಳಿದ್ದಾರೆ. ನಿನ್ನೆ ಪಂದ್ಯದಲ್ಲಿ ರಾಯ್​ ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.