ಹೈದರಾಬಾದ್: ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಧನುಷ್ ನಟನೆಯ ತಮಿಳಿನ ‘ಜಗಮೆ ತಂಧಿರಾಮ್’ ಚಿತ್ರದ ಟ್ರೈಲರ್ ಹೊರಬಿದ್ದಿದೆ. ಜಾಗತಿಕವಾಗಿ ಪ್ರಚಲಿತದಲ್ಲಿರುವ ಸಾಮಾಜಿಕ ವಿಷಯದ ಬಗ್ಗೆ ಹಿಡಿತ ಹೊಂದಿರುವ ಕಥೆ ಇದಾಗಿದ್ದು, ಧನುಷ್ ಅಭಿಮಾನಿಗಳಿಗೆ ಕಿಕ್ಕೇರಿಸುವಂತೆ ಮಾಡಿದೆ. ಈ ಸಿನಿಮಾ ಜೂನ್ 18 ರಂದು ವಿಶ್ವದಾದ್ಯಂತ ಒಟಿಟಿ ಮೂಲಕ ಬಿಡುಗಡೆ ಮಾಡಲಿದ್ದಾರೆ.
ಈ ಚಿತ್ರದಲ್ಲಿ ಐಶ್ವರ್ಯಾ ಲಕ್ಷ್ಮಿ, ಕಲೈರಸನ್ ಮತ್ತು ಜೊಜು ಜಾರ್ಜ್ ನಟಿಸಿದ್ದಾರೆ. ಸ್ಕಾಟಿಷ್ ನಟ ಜೇಮ್ಸ್ ಕಾಸ್ಮೊ ಅವರು ಮೊದಲ ಬಾರಿ ಭಾರತೀಯ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದಾರೆ. ಈ ಚಿತ್ರ ಒಳ್ಳೆಯ ಮತ್ತು ಕೆಟ್ಟದ್ದರ ನಡುವೆ ಆರಿಸಬೇಕಾದ ಅಲೆಮಾರಿ ದರೋಡೆಕೋರನ ಕಥೆಯನ್ನು ಹೇಳುತ್ತದೆ.
- " class="align-text-top noRightClick twitterSection" data="">
ಜಗಮೆ ತಂಧಿರಾಮ್ ಟ್ರೈಲರ್ನಲ್ಲಿ ಧನುಷ್ ದರೋಡೆಕೋರನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಲಂಡನ್ ಮೂಲದ ರಾಜಕೀಯ - ಶ್ರೀಮಂತ ಗ್ಯಾಂಗ್ ನಾಯಕ ಪೀಟರ್ ಆಗಿ ಜೇಮ್ಸ್ ಕಾಸ್ಮೊ ಬಣ್ಣ ಹಚ್ಚಿದ್ದಾರೆ. ಸಿವಾಡಾಸ್ ಆಗಿ ಜೋಸೆಫ್ ಜೊಜು ಜಾರ್ಜ್ ಮೋಡಿ ಮಾಡಲಿದ್ದಾರೆ.
ಸುರುಲಿ ಎಂಬ ಪಾತ್ರದಲ್ಲಿ ಧನುಷ್ ಅಭಿಮಾನಿಗಳಿಗೆ ಮೋಡಿ ಮಾಡಲಿದ್ದಾರೆ. ಇನ್ನು YNOT ಸ್ಟುಡಿಯೋಸ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಜಗಮೆ ತಂಧಿರಾಮ್ 190 ದೇಶಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 18 ರಂದು ಬಿಡುಗಡೆಯಾಗಲಿದೆ.