ನೆಲ್ಲೂರು: ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಪತ್ತೆಯಾಗಿರುವ ಮೀನುಗಾರಿಕಾ ದೋಣಿಯೊಂದು ಸುತ್ತಮುತ್ತಲಿನವರಲ್ಲಿ ಆತಂಕ ಉಂಟುಮಾಡಿದ್ದು, ಆಂಧ್ರ ಪ್ರದೇಶಕ್ಕೆ ಶ್ರೀಲಂಕಾ ಉಗ್ರರು ಎಂಟ್ರಿ ಕೊಟ್ಟಿದ್ದಾರಾ ಎಂಬ ಅನುಮಾನ ಹುಟ್ಟಿಹಾಕಿದೆ.
ನೆಲ್ಲೂರಿನ ವಿದವಲೂರ್ ಕರಾವಳಿ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು ಅನುಮಾನಾಸ್ಪದವಾಗಿ ಕಂಡುಬಂದಿದೆ. ಸ್ಥಳೀಯ ಮೀನುಗಾರರು ಇದನ್ನು ಪತ್ತೆ ಮಾಡಿ ಪೊಲೀಸರ ಗಮನಕ್ಕೆ ತಂದರು. ಬುಧವಾರ ಬೆಳಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಪಗ್ರಹ ಉಡಾವಣೆ ಹಮ್ಮಿಕೊಂಡಿದ್ದರಿಂದ ಅದನ್ನು ತಡೆಯಲು ಉಗ್ರರು ಬಂದಿದ್ದರೇ ಎಂಬ ಅನುಮಾನ ವ್ಯಕ್ತವಾಯಿತು.
- " class="align-text-top noRightClick twitterSection" data="">
ಈ ಬೋಟ್ ಎಲ್ಲಿಂದ ಬಂತು ಎಂಬುದನ್ನು ಪರಿಶೀಲಿಸಲಾಗಿದೆ. ನೋಂದಣಿ ಸಂಖ್ಯೆ ಎಲ್ಲವನ್ನೂ ನೋಡಿದಾಗ ಬೋಟ್ ಲಂಕಾದಿಂದ ಬಂದಿದೆ ಎನ್ನುವುದು ಖಚಿತವಾಗಿದೆ.
ಬೋಟ್ ದೊರೆತ ಪೊನ್ನಪುಡಿ ಪಥುರು ಗ್ರಾಮದಲ್ಲಿ ಈಗ ಆತಂಕ ಎದುರಾಗಿದ್ದು, ಪೊಲೀಸರು ಸುತ್ತಮುತ್ತಲ ಪ್ರದೇಶಗಳಲ್ಲಿ ಇನ್ನಷ್ಟು ಸಾಕ್ಷಿಗಳು ಸಿಗಬಹುದೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.
-
Andhra Pradesh: Police seized a suspicious boat at Pannapudi Patooru village in Nellore district yesterday. Case registered under Sec 102 of Cr.P.C (Unclaimed property). pic.twitter.com/8rFFjs7oJJ
— ANI (@ANI) May 22, 2019 " class="align-text-top noRightClick twitterSection" data="
">Andhra Pradesh: Police seized a suspicious boat at Pannapudi Patooru village in Nellore district yesterday. Case registered under Sec 102 of Cr.P.C (Unclaimed property). pic.twitter.com/8rFFjs7oJJ
— ANI (@ANI) May 22, 2019Andhra Pradesh: Police seized a suspicious boat at Pannapudi Patooru village in Nellore district yesterday. Case registered under Sec 102 of Cr.P.C (Unclaimed property). pic.twitter.com/8rFFjs7oJJ
— ANI (@ANI) May 22, 2019
ಲಂಕಾದಿಂದ ಪ್ರಯಾಣ ಮಾಡಲು ಅಥವಾ ಆಂಧ್ರ ಕರಾವಳಿ ತಲುಪಿದ ನಂತರ ಅವಿತುಕೊಳ್ಳಲು ಈ ಬೋಟ್ ಬಳಸಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.