ETV Bharat / briefs

ಇಂದು ಹೈದರಾಬಾದ್​-ಪಂಜಾಬ್​ ಪೈಪೋಟಿ.... ಗೆದ್ದವರಿಗೆ ಪ್ಲೇ ಆಫ್​ ಹಾದಿ ಸುಗಮ, ಸೋತವರಿಗೆ ದುರ್ಗಮ!

ಪ್ಲೇ ಆಫ್​ ಮೇಲೆ ಕಣ್ಣಿಟ್ಟಿರುವ ಪಂಜಾಬ್​ ಹಾಗೂ ಹೈದರಾಬಾದ್​ ತಂಡಗಳು ಇಂದು ಹೈದರಾಬಾದ್​ ನಲ್ಲಿ ಮುಖಾಮುಖಿಯಾಗುತ್ತಿವೆ. ಎರಡು ತಂಡಗಳ ಬಳಿ 10 ಅಂಕಗಳಿದ್ದು ಈ ಪಂದ್ಯ ಗೆದ್ದವರಿಗೆ ಪ್ಲೇ ಆಫ್​ ಹಾದಿ ಸರಳವಾಗಲಿದೆ.

ಎಸ್​ಆರ್​ಹೆಚ್​
author img

By

Published : Apr 29, 2019, 6:05 PM IST

Updated : Apr 29, 2019, 6:11 PM IST

ಹೈದರಾಬಾದ್​: ಪ್ಲೆ ಆಫ್​ ಮೇಲೆ ಕಣ್ಣಿಟ್ಟಿರುವ ತಂಡಗಳಾದ ಸನ್​ರೈರ್ಸ್​ ಹೈದರಾಬಾದ್​ ಹಾಗೂ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಗಳು ಇಂದು ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಮುಖಾಮುಖಿಯಾಗುತ್ತಿವೆ.

12ನೇ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ 5 ಗೆಲುವು ಹಾಗೂ 6 ಸೋಲು ಕಂಡಿರುವ ಸನ್​ರೈಸರ್​ ಹಾಗೂ ಪಂಜಾಬ್​ ತಂಡಗಳಿಗೆ ಈ ಪಂದ್ಯ ಪ್ಲೇ ಆಫ್​ ದೃಷ್ಟಿಯಿಂದ ಪ್ರಮುಖವಾಗಿದೆ. ಈಗಾಗಲೆ ಡೆಲ್ಲಿ ಹಾಗೂ ಚೆನ್ನೈ ಪ್ಲೇ ಆಫ್​ ಸ್ಥಾನ ಖಚಿತಪಡಿಸಿಕೊಂಡಿವೆ. ಮೂರನೇ ತಂಡಕ್ಕೆ ಮುಂಬೈ ತುಂಬಾ ಹತ್ತಿರದಲ್ಲಿದೆ. ನಾಲ್ಕನೇ ಸ್ಥಾನಕ್ಕೆ ಪಂಜಾಬ್​, ಹೈದರಾಬಾದ್​, ಕೆಕೆಆರ್​ ಹಾಗೂ ರಾಜಸ್ಥಾನ್​ ರಾಯಲ್ಸ್​ ತಂಡಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ.

IPL 2019
ಕ್ರಿಸ್​ ಗೇಲ್​

ಕಾಡುತ್ತಿರುವ ಬೈರ್ಸ್ಟೋವ್​ ಅನುಪಸ್ಥಿತಿ

ಸನ್​ರೈಸರ್ಸ್​ ತಂಡ ಬ್ಯಾರ್ಸ್ಟೋವ್​ ಇಲ್ಲದೆ ಉತ್ತಮ ಆರಂಭ ಪಡೆಯಲು ಕಷ್ಟಪಡುತ್ತಿದೆ. ನಾಯಕ ವಿಲಿಯಮ್ಸನ್​ ವಾರ್ನರ್​ ಜೊತೆ ಇನ್ನಿಂಗ್ಸ್​​ ಆರಂಭಿಸುತ್ತಿದ್ದು ದೊಡ್ಡ ಜೊತೆಯಾಟ ಬರುತ್ತಿಲ್ಲ. ಆದರೆ, ಮನೀಷ್​ ಪಾಂಡೆ ಅದ್ಭುತ ಫಾರ್ಮ್​ನಲ್ಲಿರುವುದು ತಂಡಕ್ಕೆ ಸಮಾಧಾನ ತಂದಿದೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ಭುವಿ, ರಶೀದ್​, ಖಲೀಲ್​ ಅಹ್ಮದ್​ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಉಳಿದ ಬೌಲರ್​ಗಳು ಲಯ ಕಳೆದುಕೊಳ್ಳುತ್ತಿರುವುದು ಹೈದರಾಬಾದ್​ ಸಂಕಟಕ್ಕೆ ಕಾರಣವಾಗಿದೆ.

IPL 2019
ಡೇವಿಡ್​ ವಾರ್ನರ್​

ಮಧ್ಯಮ ಕ್ರಮಾಂಕದ ಕಳಪೆ ಬ್ಯಾಟಿಂಗ್​

ಇತ್ತ ಪಂಜಾಬ್​ ಬಲಿಷ್ಠ ಬ್ಯಾಟಿಂಗ್​ ಪಡೆ ಹೊಂದಿದೆ. ಆದರೆ ಗೇಲ್​, ರಾಹುಲ್​, ಮಯಾಂಕ್​ ಹೊರತುಪಡಿಸಿದರೆ ಮಧ್ಯಮ ಕ್ರಮಾಂಕ ತೀರಾ ಕಳಪೆ ಪ್ರದರ್ಶನ ತೋರುತ್ತಿರುವುದರಿಂದ ಪ್ಲೇ ಆಫ್​ ರೇಸ್​ನಲ್ಲಿ ಮುಂದಿದ್ದ ತಂಡ ಇದೀಗ 4 ತಂಡಗಳ ಜೊತೆ ಪೈಪೋಟಿ ಎದುರಿಸುವಂತಾಗಿದೆ.

ಸನ್​ರೈಸರ್ಸ್​ ಹೈದರಾಬಾದ್​:

ಡೇವಿಡ್​ ವಾರ್ನರ್​, ಕೇನ್​ ವಿಲಿಯಮ್ಸನ್(ನಾಯಕ) , ವಿಜಯ್​ ಶಂಕರ್​, ಯೂಸಫ್​ ಪಠಾಣ್​, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಮನೀಷ್​ ಪಾಂಡೆ, ಸಿದ್ದಾರ್ಥ್​​ ಕೌಲ್/ಸಂದೀಪ್​ ಶರ್ಮಾ, /ದೀಪಕ್​ ಹೂಡ, ಶಹ್ಬಾಜ್​ ನದೀಮ್​,ಖಲೀಲ್​ ಅಹ್ಮದ್,ಮಾರ್ಟಿನ್​ ಗಪ್ಟಿಲ್​​/ಶಕಿಬ್​ ಅಲ್​ ಹಸನ್​,ವೃದ್ಧಿಮಾನ್​ ಸಹಾ

ಕಿಂಗ್ಸ್​ ಇಲೆವೆನ್​ ಪಂಜಾಬ್​:

ಆರ್ ಅಶ್ವಿನ್ (ನಾಯಕ), ಕೆಎಲ್ ರಾಹುಲ್ , ಕ್ರಿಸ್ ಗೇಲ್ , ಮಯಾಂಕ್ ಅಗರವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಕರುಣ್ ನಾಯರ್/ಮಂದೀಪ್​ ಸಿಂಗ್​, ಮುರುಗನ್ ಅಶ್ವಿನ್, ,ಮಹಮ್ಮದ್ ಶಮಿ, ಹಾರ್ಡಸ್​ ವಿಜೋನ್​,ಮುರುಗನ್​ ಅಶ್ವಿನ್​,ನಿಕೋಲಸ್​ ಪೂರನ್/ಮುಜೀಬ್​ ಉರ್​ ರೆಹಮಾನ್​​

Intro:Body:Conclusion:
Last Updated : Apr 29, 2019, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.