ETV Bharat / briefs

ಆರ್​ಸಿಬಿಗೆ ರಾಜಸ್ಥಾನ ಮಣಿಸಿ ಹಳೇ ಸೇಡು ತೀರಿಸಿಕೊಳ್ಳುವ ತವಕ..

ಪ್ಲೇಆಫ್​ ರೇಸ್​ನಲ್ಲಿರುವ ರಾಜಸ್ಥಾನಕ್ಕೆ ಇವತ್ತಿನ ಪಂದ್ಯ ಅತೀ ಪ್ರಮುಖ. ಡೆಲ್ಲಿ ವಿರುದ್ಧ ಸೋತು ಪ್ಲೇಆಫ್​ನಿಂದ ಹೊರಬಿದ್ದಿರುವ ಆರ್​ಸಿಬಿ, ಈ ಪಂದ್ಯ ಗೆದ್ದು ಕೊನೆಯಿಂದ ಮೊದಲಿಗ ಸ್ಥಾನ ಪಡೆದ ಹಣೆಪಟ್ಟಿ ತಪ್ಪಿಸಿಕೊಳ್ಳಬಹುದಷ್ಟೇ..

rcb
author img

By

Published : Apr 30, 2019, 5:10 PM IST

ಬೆಂಗಳೂರು: ಕೊನೆಯ ಎರಡು ಸ್ಥಾನದಲ್ಲಿರುವ ಆರ್​ಸಿಬಿ ಹಾಗೂ ರಾಜಸ್ಥಾನ್​ ರಾಯಲ್ಸ್​ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಪ್ಲೇಆಫ್​ ರೇಸ್​ನಲ್ಲಿರುವ ರಾಜಸ್ಥಾನಕ್ಕೆ ಈ ಪಂದ್ಯ ಮುಖ್ಯ. ಡೆಲ್ಲಿ ವಿರುದ್ಧ ಸೋತು ಪ್ಲೇಆಫ್​ನಿಂದ ಹೊರಬಿದ್ದಿರುವ ಆರ್​ಸಿಬಿಗೆ ಈ ಪಂದ್ಯ ಸೋತರೂ ಗೆದ್ದರೂ ಏನೂ ಆಗಬೇಕಿಲ್ಲ. ಆದರೆ, ಕೊನೆಯ ಸ್ಥಾನ ಹೊಂದಿದ ತಂಡ ಎಂಬ ಪಟ್ಟದಿಂದ ತಪ್ಪಿಸಿಕೊಳ್ಳಲು ಮಾತ್ರ ಈ ಪಂದ್ಯ ಗೆಲ್ಲಬೇಕಿದೆ.

12 ಪಂದ್ಯಗಳಿಂದ 10 ಅಂಕ ಪಡೆದಿರುವ ರಾಜಸ್ಥಾನ ತಂಡಕ್ಕೆ ಇಂದಿನದೂ ಸೇರಿ 2 ಪಂದ್ಯ ಬಾಕಿ ಉಳಿದಿವೆ. ಪ್ಲೇಆಫ್​ಗೆ ಪ್ರವೇಶ ಪಡೆಯಲು ಎರಡೂ ಪಂದ್ಯಗಳನ್ನು ಉತ್ತಮ ರನ್​ರೇಟ್​ನಿಂದ ಗೆಲ್ಲಬೇಕಿದೆ. ರಾಜಸ್ಥಾನಕ್ಕೆ ಕೆಕೆಆರ್ (10), ಸನ್​ರೈಸರ್ಸ್​ (12), ಕಿಂಗ್ಸ್​ ಇಲೆವೆನ್​ ಪಂಜಾಬ್​(10) ತಂಡಗಳು ಪೈಪೋಟಿ ನೀಡುತ್ತಿವೆ. ರಾಜಸ್ಥಾನಕ್ಕೆ ಈ ಪಂದ್ಯ ಗೆಲ್ಲುವುದಲ್ಲದೆ ರನ್​ರೇಟ್​ ಕೂಡ ಕಾಪಾಡಿಕೊಳ್ಳಬೇಕಿದೆ. ಆದರೆ, ಆರ್​ಸಿಬಿ ವಿರುದ್ಧ ಹೆಚ್ಚಿನ ರನ್​ರೇಟ್​ನಿಂದ ಗೆಲುವು ಕಾಣುವುದು ನಿಜಕ್ಕೂ ಸವಾಲಿನ ವಿಚಾರವಾಗಿದೆ.

ಆರ್​ಸಿಬಿ ಕಳೆದ ಬಾರಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ, ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್​ ತಂಡ ಆರ್​ಸಿಬಿ ಪ್ರಮುಖವಾಗಿದ್ದ ಪಂದ್ಯದಲ್ಲಿ 30 ರನ್​ಗಳಿಂದ ಮಣಿಸಿ ಪ್ಲೇಆಫ್ ಕನಸಿಗೆ ಎಳ್ಳುನೀರು ಬಿಟ್ಟಿತ್ತು. ಇದೀಗ ಆರ್​ಸಿಬಿ ರಾಜಸ್ಥಾನ ತಂಡದ ಪ್ಲೇಆಫ್​ ಕನಸನ್ನು ನುಚ್ಚುನೂರು ಮಾಡಿ ಕಳೆದ ವರ್ಷದ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ಯಾವ ರೀತಿ ಪ್ರದರ್ಶನ ನೀಡಲಿದೆ ಎಂದು ಕಾದು ನೋಡಬೇಕಿದೆ.

ಮುಖಾಮುಖಿ:

ಐಪಿಎಲ್​ನಲ್ಲಿ ಈವರೆಗೂ ಎರಡು ತಂಡಗಳು 20 ಬಾರಿ ಮುಖಾಮುಖಿಯಾಗಿವೆ. ರಾಜಸ್ಥಾನ್​ ರಾಯಲ್ಸ್​ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್​ಸಿಬಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯದಲ್ಲಿ ಫಲಿತಾಂಶ ಹೊರಬಂದಿಲ್ಲ.

ಮೂರು ಸಾರಿ ಮುಖಾಮುಖಿಯಾಗಿದ್ದರೂ ಆರ್​ಸಿಬಿ ರಾಜಸ್ಥಾನದ ವಿರುದ್ಧ ಸೋಲನುಭವಿಸಿದೆ. ಮೂರು ಪಂದ್ಯದ ಸೋಲಿಗೂ ಕಾರಣ ಕನ್ನಡಿಗ ಶ್ರೇಯಸ್​ ಗೋಪಾಲ್​ ಎಂಬುದೇ ವಿಶೇಷ.

ಆರ್​ಸಿಬಿ :

ಪಾರ್ಥಿವ್​ ಪಟೇಲ್​(ವಿಕೆಟ್‌ ಕೀಪರ್‌), ವಿರಾಟ್​​ ಕೊಹ್ಲಿ(ಕ್ಯಾಪ್ಟನ್​), ಎಬಿಡಿ ವಿಲಿಯರ್ಸ್​​, ಸ್ಟೋನಿಸ್​, ಆಕಾಶ್​ದೀಪ್​ ನಾಥ್​, ಸೌಥಿ, ಮೊಹಮ್ಮದ್​ ಸಿರಾಜ್​, ಯಜುವೇಂದ್ರ ಚಹಾಲ್​,ಹೆಟ್ಮೈರ್​,ನವದೀಪ್​ ಸೈನಿ,ಪವನ್​ ನೇಗಿ/ವಾಷಿಂಗ್ಟನ್​ ಸುಂದರ್​.

ರಾಜಸ್ಥಾನ್​ ರಾಯಲ್ಸ್​:

ಅಜಿಂಕ್ಯ ರಹಾನೆ, ಸ್ಟಿವ್​ ಸ್ಮಿತ್(ನಾಯಕ), ಆಶ್ಟನ್​ ಟರ್ನರ್​​, ಸಂಜು ಸ್ಯಾಮ್ಸನ್​, ಶ್ರೇಯಸ್​ ಗೋಪಾಲ್​, ಜಯದೇವ್​ ಉನಾದ್ಕಟ್​, ದವಳ್​ ಕುಲಕರ್ಣಿ/ವರುಣ್​ ಆ್ಯರೋನ್​, ಸ್ಟುವರ್ಟ್​ ಬಿನ್ನಿ​, ರಿಯಾನ್​ ಪರಾಗ್​, ಒಸಾನೆ ಥಾಮಸ್​/ಇಶ್​ ಸೋಧಿ, ಲೈಮ್​ ಲಿವಿಂಗ್​ ಸ್ಟೋನ್.

Intro:Body:

ರಾಜಸ್ಥಾನವನ್ನು ಮಣಿಸಿ ಕಳೆದ ವರ್ಷದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಆರ್​ಸಿಬಿ

ಬೆಂಗಳೂರು: ಕೊನೆಯ ಎರಡು ಸ್ಥಾನದಲ್ಲಿರುವ ಆರ್​ಸಿಬಿ ಹಾಗೂ ರಾಜಸ್ಥಾನ್​ ರಾಯಲ್ಸ್​ ಇಂದು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಎದುರಾಗುತ್ತಿವೆ.

ಪ್ಲೆ ಆಫ್​ ರೇಸ್​ನಲ್ಲಿರುವ ರಾಜಸ್ಥಾನಕ್ಕೆ ಈ ಪಂದ್ಯ ಪ್ರಮುಖವಾದರೆ ಡೆಲ್ಲಿ ವಿರುದ್ಧ ಸೋತು ಪ್ಲೇ ಆಫ್​ನಿಂದ ಹೊರಬಿದ್ದಿರುವ ಆರ್​ಸಿಬಿಗೆ ಈ ಪಂದ್ಯ ಕೇವಲ ಕೊನೆಯ ಸ್ಥಾನಿ ಎಂಬ ಪಟ್ಟವನ್ನು ತಪ್ಪಿಸಿಕೊಳ್ಳಲು ಮಾತ್ರ ಗೆಲ್ಲಬೇಕಿದೆ. 

12 ಪಂದ್ಯಗಳಿಂದ 10 ಅಂಕ ಪಡೆದುಕೊಂಡಿರುವ ರಾಜಸ್ಥಾನ ಇಂದಿನ ಪಂದ್ಯ ಸೇರಿದಂತೆ 2 ಪಂದ್ಯಗಳು ಬಾಕಿ ಉಳಿದುಕೊಂಡಿವೆ. ಪ್ಲೇ ಆಫ್​ಗೆ ಪ್ರವೇಶ ಪಡೆಯಲು ಎರಡು ಪಂದ್ಯಗಳನ್ನು ಉತ್ತಮ ರನ್​ರೇಟ್​ನಿಂದ ಗೆಲ್ಲಬೇಕಿದೆ.

ರಾಜಸ್ಥಾನಕ್ಕೆ ಕೆಕೆಆರ್ (10), ಸನ್​ರೈಸರ್ಸ್​ (12), ಕಿಂಗ್ಸ್​ ಇಲೆವೆನ್​ ಪಂಜಾಬ್​(10) ತಂಡಗಳು ಪೈಪೋಟಿ ನೀಡುತ್ತಿವೆ. ರಾಜಸ್ಥಾನಕ್ಕೆ ಈ ಪಂದ್ಯ ಗೆಲ್ಲುವುದಲ್ಲದೆ ರನ್​ರೇಟ್​ ಕೂಡ ಕಾಪಾಡಿಕೊಳ್ಳಬೇಕಿದೆ. ಆದರೆ ಆರ್​ಸಿಬಿ ವಿರುದ್ಧ ಹೆಚ್ಚಿನ ರನ್​ರೇಟ್​ನಿಂದ ಗೆಲುವು ಕಾಣುವುದು ನಿಜಕ್ಕೂ ಸವಾಲಿನ ವಿಚಾರವಾಗಿದೆ.

ಇನ್ನು ಆರ್​ಸಿಬಿ ಕಳೆದ ಬಾರಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್​ ತಂಡ ಆರ್​ಸಿಬಿ ಪ್ರಮುಖವಾಗಿದ್ದ ಪಂದ್ಯದಲ್ಲಿ 30 ರನ್​ಗಳಿಂದ ಮಣಿಸಿ ಪ್ಲೇ ಆಫ್ ಕನಸಿಗೆ ಎಳ್ಳುನೀರು ಬಿಟ್ಟಿತ್ತು, ಇದೀಗ ಆರ್​ಸಿಬಿ ರಾಜಸ್ಥಾನ ತಂಡದ ಪ್ಲೇ ಆಫ್​ ಕನಸನ್ನು ನುಚ್ಚುನೂರು ಮಾಡಿ ಕಳೆದ ವರ್ಷದ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ಯಾವ ರೀತಿ ಪ್ರದರ್ಶನ ನೀಡಲಿದೆ ಎಂದು ಕಾದು ನೋಡಬೇಕಿದೆ. 

ಮುಖಾಮುಖಿ:

ಆರ್​ಸಿಬಿ:ಪಾರ್ಥಿವ್​ ಪಟೇಲ್​(ವಿಕೆಟ್‌ ಕೀಪರ್‌), ವಿರಾಟ್​​ ಕೊಹ್ಲಿ(ಕ್ಯಾಪ್ಟನ್​), ಎಬಿಡಿ ವಿಲಿಯರ್ಸ್​​, ಸ್ಟೋನಿಸ್​, ಆಕಾಶ್​ದೀಪ್​ ನಾಥ್​, ಸೌಥಿ, ಮೊಹಮ್ಮದ್​ ಸಿರಾಜ್​, ಯಜುವೇಂದ್ರ ಚಹಾಲ್​,ಹೆಟ್ಮೈರ್​,ನವದೀಪ್​ ಸೈನಿ,ಪವನ್​ ನೇಗಿ/ವಾಷಿಂಗ್ಟನ್​ ಸುಂದರ್​

ರಾಜಸ್ಥಾನ್​ ರಾಯಲ್ಸ್​:ಅಜಿಂಕ್ಯ ರಹಾನೆ, ಸ್ಟಿವ್​ ಸ್ಮಿತ್(ನಾಯಕ), ಆಶ್ಟನ್​ ಟರ್ನರ್​​, ​​, ಸಂಜು ಸ್ಯಾಮ್ಸನ್​, ಶ್ರೇಯಸ್​ ಗೋಪಾಲ್​, ಜಯದೇವ್​ ಉನಾದ್ಕಟ್​, ದವಳ್​ ಕುಲಕರ್ಣಿ/ವರುಣ್​ ಆ್ಯರೋನ್​, ಸ್ಟುವರ್ಟ್​ ಬಿನ್ನಿ​, ರಿಯಾನ್​ ಪರಾಗ್​, ಒಸಾನೆ ಥಾಮಸ್​/ಇಶ್​ ಸೋಧಿ, ಲೈಮ್​ ಲಿವಿಂಗ್​ಸ್ಟೋನ್

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.