ಮುಂಬೈ: ಮೂರು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ವಾಂಖೆಡೆಯಲ್ಲಿ ಮುಖಾಮುಖಿಯಾಗುತ್ತಿವೆ.
ಕಳೆದ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಹಾಗೂ ಎಸ್ಆರ್ಹೆಚ್ಗೆ ಶಾಕ್ ನೀಡಿರುವ ಮುಂಬೈ 3 ಗೆಲುವು ಹಾಗೂ 2 ಸೋಲಿನೊಂದಿಗೆ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈಗಾಗಲೆ ಒಂದು ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋಲನುಭವಿಸಿರುವ ಮುಂಬೈ ತನ್ನ ಎರಡನೇ ಮುಖಾಮುಖಿಯಲ್ಲಿ ತವರಿನ ಬೆಂಬಲದೊಂದಿಗೆ ಪಂಜಾಬ್ ತಂಡವನ್ನು ಎದುರಿಸಲು ಸಿದ್ದವಾಗುತ್ತಿದೆ.
ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಫಾರ್ಮ್ ಕೈಕೊಡುತ್ತಿದೆ. ಆದರೆ ಪಾಂಡ್ಯ ಬ್ರದರ್ಸ್, ಪೊಲಾರ್ಡ್, ಸೂರ್ಯಕುಮಾರ್ ಯಾದವ್, ಡಿಕಾಕ್ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆದರೆ ಯಾರೊಬ್ಬರು ಕನ್ಸಿಸ್ಟೆನ್ಸಿ ಇಲ್ಲದಿರುವುದರಿಂದ ತವರಿನ ಪಂದ್ಯದಲ್ಲಿ ಕಳೆದ ಪಂದ್ಯಗಳ ತಪ್ಪುಗಳನ್ನು ತಿದ್ದಿಕೊಂಡು ಕಣಕ್ಕಳಿಯುತ್ತಿದೆ.
ಬೌಲಿಂಗ್ನಲ್ಲಿ ಮಾತ್ರ ಮುಂಬೈ ಐಪಿಎಲ್ನಲ್ಲೇ ಟಾಪ್ ರ್ಯಾಂಕ್ನಲ್ಲಿದೆ. ಬುಮ್ರಾ, ಜೋಸೆಫ್, ಬೆಹ್ರನ್ಡ್ರಾಫ್ ಸ್ಪಿನ್ ಬೌಲಿಂಗ್ನಲ್ಲಿ ಕೃನಾಲ್ ಪಾಂಡ್ಯ ಹಾಗೂ ರಾಹುಲ್ ಚಹಾರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಪಂಜಾಬ್ ತಂಡ ಕೂಡ ತವರಿನಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆಲುವು ಪಡೆದಿರುವ ಕಿಂಗ್ಸ್ಗೆ ಮುಂಬೈ ಬೌಲಿಂಗ್ ಎದುರಿಸುವುದು ಸವಾಲಾಗಲಿದೆ.
ರಾಹುಲ್,ಮಯಾಂಕ್ ಉತ್ತಮ ಪಾರ್ಮ್ನಲ್ಲಿದ್ದಾರೆ. ಇನ್ನು ಗೇಲ್ ಯಾವುದೆ ಸಂದರ್ಭದಲ್ಲಿ ಸ್ಫೋಟಿಸುವ ತಾಕತ್ತಿದೆ. ಡೇವಿಡ್ ಮಿಲ್ಲರ್ ಫಾರ್ಮ್ ಪಂಜಾಬ್ಗೆ ತಲೆನೋವಾಗಿದೆ. ಬೌಲಿಂಗ್ನಲ್ಲಿ ಪಂಜಾಬ್ ಬಲಿಷ್ಟವಾಗಿದೆ. ಅಶ್ವಿನ್, ಸ್ಯಾಮ್ ಕರ್ರನ್, ಶಮಿ ಮುಂಬೈಗೆ ಫೈಟ್ ನೀಡಲು ತಯಾರಾಗಿದ್ದಾರೆ.
ಮುಖಾಮುಖಿ
ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು 12 ಪಂದ್ಯಗಳಲ್ಲಿ ಗೆಲುವು ಸಾದಿಸಿದ್ದರೆ 11 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆಯಲ್ಲಿ ನಡೆದಿರುವ 8 ಪಂದ್ಯಗಳಲ್ಲಿ ಎರಡು ತಂಡಗಳು ತಲಾ 4 ಬಾರಿ ಗೆಲುವು ಸಾಧಿಸಿವೆ.
ಸಾಂಭಾವ್ಯ ತಂಡ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾಧವ್, ಯುವರಾಜ್ ಸಿಂಗ್/ಇಶಾನ್ ಕಿಶನ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅಲ್ಝಾರಿ ಜೋಸೆಫ್, ರಾಹುಲ್ ಚಹಾರ್, ಬುಮ್ರಾ, ಜಾಸನ್ ಬೆಹ್ರೆನ್ಡ್ರಾಫ್
ಕಿಂಗ್ಸ್ ಇಲೆವೆನ್ ಪಂಜಾಬ್
ಆರ್ ಅಶ್ವಿನ್ (ನಾಯಕ), ಕೆಎಲ್ ರಾಹುಲ್ , ಕ್ರಿಸ್ ಗೇಲ್ , ಮಯಾಂಕ್ ಅಗರವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮಂದೀಪ್ ಸಿಂಗ್/ಕರುಣ್ ನಾಯರ್, ಅಂಕಿತ್ ಚೌದರಿ, ಸ್ಯಾಮ್ ಕರ್ರನ್ ಮಹಮ್ಮದ್ ಶಮಿ, ಮುಜೀಬ್ ಉರ್ ರೆಹಮಾನ್