ETV Bharat / briefs

ಕೊನೆಯ ಪಂದ್ಯದಲ್ಲಿ ಸನ್​ರೈಸರ್ಸ್​ನ ಪ್ಲೆ ಅಫ್​ ಕನಸನ್ನು ನುಚ್ಚುನೂರು ಮಾಡಲಿದೆಯೇ ಆರ್​ಸಿಬಿ?

ಪ್ಲೇ ಆಫ್​ ತಲುಪಲು ಆರ್​ಸಿಬಿ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಸನ್​ರೈಸರ್ಸ್ ಇದ್ದರೆ, ತನ್ನ ಕೊನೆಯ ಪಂದ್ಯವನ್ನು ಗೆದ್ದು ತವರಿನ ಅಭಿಮಾನಿಗಳಿಗೆ ಗೆಲುವನ್ನು ಉಡುಗೊರೆಯಾಗಿ ನೀಡುವ ಆಲೋಚನೆಯಲ್ಲಿ ಆರ್​ಸಿಬಿ ಇದೆ.

rcb
author img

By

Published : May 4, 2019, 6:02 PM IST

ಬೆಂಗಳೂರು: ಪ್ಲೆ ಆಫ್​ನಿಂದ ಹೊರಬಿದ್ದಿರುವ ಆರ್​ಸಿಬಿ ಇಂದು ತನ್ನ ಕೊನೆಯ ಪಂದ್ಯದಲ್ಲಿ ಪ್ಲೇ ಆಫ್​ ನಿರೀಕ್ಷೆಯಲ್ಲಿರುವ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಸೆಣಸಾಡಲಿದೆ.

ಪ್ಲೇ ಆಫ್​ ತಲುಪಲು ಸನ್​ರೈಸರ್ಸ್​ಗೆ ಆರ್​ಸಿಬಿ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಿದೆ. ಇಂದು ಗೆದ್ದರೆ ಪ್ಲೇ ಆಫ್​ಗೆ 4 ನೇ ತಂಡವಾಗಿ ಎಂಟ್ರಿ ಕೊಡಲಿದೆ. ಇನ್ನು ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದಿರುವ ಆರ್​ಸಿಬಿ ಇಂದು ನಡೆಯುವ ತನ್ನ ಕೊನೆಯ ಪಂದ್ಯವನ್ನು ತವರಿನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆಯಾಗಿ ನೀಡಲು ಕಾತುರದಿಂದ ಕಾಯುತ್ತಿದೆ. ಜೊತೆಗೆ ಸನ್​ರೈಸರ್ಸ್​ ಪ್ಲೆ ಆಫ್​ ಕನಸನ್ನು ನುಚ್ಚುನೂರು ಮಾಡುವ ಆಲೋಚನೆಯಲ್ಲಿದೆ.

ಜೊತೆಗೆ ತನ್ನ ಮೊದಲ ಪಂದ್ಯದಲ್ಲಿ 118 ರನ್​ಗಳಿಂದ ಹೀನಾಯವಾಗಿ ಸೋಲನುಭಸಿರುವ ಕೊಹ್ಲಿ ಪಡೆ ತನ್ನ ತವರಿನಲ್ಲಿ ಸನ್​ರೈಸರ್ಸ್​ಗೆ ಸೋಲುಣಿಸಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಕಳೆದ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಪಂದ್ಯವನ್ನು ಗೆದ್ದು ಟೂರ್ನಿಯನ್ನು ಗೆಲುವಿನೊಂದಿಗೆ ಅಂತ್ಯ ಮಾಡುವ ಚಿಂತನೆಯಲ್ಲಿದೆ.

ಇತ್ತ ವಾರ್ನರ್​ ಇರುವವರೆಗು ಕಠಿಣ ಪೈಪೋಟಿ ನೀಡುತ್ತಿದ್ದ ಸನ್​ರೈಸರ್ಸ್​ ಇದೀಗ ತನ್ನ ಬಲವನ್ನು ಕಳೆದುಕೊಂಡಿದೆ. ತಂಡದಲ್ಲಿ ಮನೀಷ್​ ಪಾಂಡೆ ಹೊರೆತುಪಡಿಸಿದರೆ ಬೇರೆ ಯಾವ ಆಟಗಾರ ಉತ್ತಮ ಪ್ರದರ್ಶನ ತೋರುತ್ತಿಲ್ಲ. ತನ್ನ ಮೊದಲ ಪಂದ್ಯವಾಡಿದ ಗುಪ್ಟಿಲ್​ ಉತ್ತಮ ಆರಂಭ ಪಡೆದರು ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾದರು. ಬೌಲಿಂಗ್​ ವಿಭಾಗದಲ್ಲಿ ಪ್ರಬಲವಾಗಿರುವ ಸನ್​ರೈಸರ್ಸ್​ ಯಾವ ರೀತಿ ಪ್ರದರ್ಶನ ನೀಡಲಿದೆ ಎಂದು ಕಾದು ನೋಡಬೇಕಿದೆ.

ಮುಖಾಮುಖಿ:

ಎರಡು ತಂಡಗಳು ಐಪಿಎಲ್​ನಲ್ಲಿ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 5ರಲ್ಲಿ ಆರ್​ಸಿಬಿ, 8 ಪಂದ್ಯಗಳಲ್ಲಿ ಸನ್​ರೈರ್ಸ್​ ಗೆಲುವು ಸಾಧಿಸಿದೆ. ಬೆಂಗಳೂರಿನಲ್ಲಿ ನಡೆದಿರುವ 7 ಪಂದ್ಯಗಳಲ್ಲಿ 4ರಲ್ಲಿ ಆರ್​ಸಿಬಿ, 2 ರಲ್ಲಿ ಸನ್​ರೈಸರ್ಸ್​ ಗೆಲುವು ಸಾಧಿಸಿದೆ. ಇದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್​ 118 ರನ್​ಗಳಿಂದ ಗೆಲುವು ಸಾಧಿಸಿತ್ತು.

ಕಳೆದ ಆವೃತ್ತಿಯಲ್ಲಿ ನಡೆದಿದ್ದ 2 ಪಂದ್ಯಗಳಲ್ಲಿ ಎರಡು ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದವು.

ಸಂಭಾವ್ಯ ತಂಡಗಳು:

ಆರ್​ಸಿಬಿ:

ಪಾರ್ಥಿವ್​ ಪಟೇಲ್​(ವಿಕೆಟ್‌ ಕೀಪರ್‌), ವಿರಾಟ್​​ ಕೊಹ್ಲಿ(ಕ್ಯಾಪ್ಟನ್​), ಎಬಿಡಿ ವಿಲಿಯರ್ಸ್​​, ಸೌಥಿ, ಮೊಹಮ್ಮದ್​ ಸಿರಾಜ್/, ಗುರುಕಿರಾತ್​ ಸಿಂಗ್​ ಮನ್​, ಯಜುವೇಂದ್ರ ಚಹಾಲ್​, ಹೆಟ್ಮೈರ್/ಗ್ರ್ಯಾಂಡ್​ಹೋಮ್​​, ನವದೀಪ್​ ಸೈನಿ, ಪವನ್​ ನೇಗಿ/ವಾಷಿಂಗ್ಟನ್​ ಸುಂದರ್, ಹೆನ್ರಿಚ್​ ಕ್ಲಾಸೆನ್​

ಸನ್​ರೈಸರ್ಸ್​ ಹೈದರಾಬಾದ್​:

ಮಾರ್ಟಿನ್​ ಗಪ್ಟಿಲ್​, ಕೇನ್​ ವಿಲಿಯಮ್ಸನ್(ನಾಯಕ), ವಿಜಯ್​ ಶಂಕರ್​, ಮನೀಷ್​ ಪಾಂಡೆ, ಶಕಿಭ್​ ಅಲ್​ ಹಸನ್​/ ಮಹಮ್ಮದ್​ ನಬಿ, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಅಭಿಷೇಕ್​ ಶರ್ಮಾ, ಬಾಸಿಲ್​ ತಂಪಿ, ವೃದ್ಧಿಮಾನ್​ ಸಹಾ, ಖಲೀಲ್​ ಅಹ್ಮದ್​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.