ಮುಂಬೈ: ಮುಂಬೈ ತಂಡದ ಪರ ಮಿಂಚುತ್ತಿರುವ ಯುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಖಂಡಿತ ಭಾರತ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂದು ವಿಂಡೀಸ್ ದಿಗ್ಗಜ ಕೀರನ್ ಪೊಲಾರ್ಡ್ ಅಭಿಪ್ರಾಯ ಪಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ ಸಪೂರವಾಗಿದ್ದರು ದೊಡ್ಡ ಸಿಕ್ಸರ್ ಬಾರಿಸುವಲ್ಲಿ ನೈಪುಣ್ಯತೆ ಪಡೆದುಕೊಂಡಿದ್ದಾರೆ. ಅವರೂ ಕೂಡ ಎಲ್ಲರಂತೆ ಅಭ್ಯಾಸ ಮಾಡಿದರೂ ತನ್ನ ಮೇಲೆ ಹೆಚ್ಚಿನ ಆತ್ಮ ವಿಶ್ವಾಸ ಹೊಂದಿರುವುದರಿಂದ ತಮ್ಮ ಕೌಶಲ್ಯಗಳನ್ನು ಮೈದಾನದಲ್ಲಿ ಕಾರ್ಯರೂಪಕ್ಕೆ ತರುತ್ತಾರೆ. ಇದು ಮುಂಬೈ ಇಂಡಿಯನ್ಸ್ಗೆ ಮಾತ್ರವಲ್ಲ, ಭಾರತ ತಂಡದಲ್ಲೂ ಮುಂದುವರಿಸಲಿದ್ದಾರೆ ಎಂದು ಪೊಲಾರ್ಡ್, ಪಾಂಡ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Two dangerous hitters merged into one face - Hardik Pandya and Kieron Pollard. How many of you got it right? #MIBuddies pic.twitter.com/yUTF4ndi9r
— Mumbai Indians (@mipaltan) August 6, 2017 " class="align-text-top noRightClick twitterSection" data="
">Two dangerous hitters merged into one face - Hardik Pandya and Kieron Pollard. How many of you got it right? #MIBuddies pic.twitter.com/yUTF4ndi9r
— Mumbai Indians (@mipaltan) August 6, 2017Two dangerous hitters merged into one face - Hardik Pandya and Kieron Pollard. How many of you got it right? #MIBuddies pic.twitter.com/yUTF4ndi9r
— Mumbai Indians (@mipaltan) August 6, 2017
ತಂಡದ ಪರಿಸ್ಥಿತಿಗೆ ತಕ್ಕಂತ ಆಟ ಆಡುವುದನ್ನು ಪಂದ್ಯ ರೂಡಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಪಾಂಡ್ಯ ಬ್ಯಾಟಿಂಗ್ ನೋಡಿದರೆ ತಿಳಿಯುತ್ತದೆ. ತಂಡ ಸಂಕಷ್ಟದಲ್ಲಿ ಹಾರ್ದಿಕ್ ಪಾಂಡ್ಯ ಯಾವ ರೀತಿ ತಮ್ಮ ಜವಾಬ್ದಾರಿ ನಿರ್ಧರಿಸುತ್ತಾರೆ ಎಂಬುದನ್ನ ಮೊನ್ನೆ ನಡೆದ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಸಾಭೀತಾಗಿದೆ ಎಂದರು.
233 ರನ್ಗಳ ಬೃಹತ್ ಮೊತ್ತ ಬೆನ್ನೆತ್ತಿದ ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರರೆಲ್ಲಾ ವಿಕೆಟ್ ಒಪ್ಪಿಸಿದರೂ ಪಾಂಡ್ಯ ಏಕಾಂಗಿಯಾಗಿ ಹೋರಾಡಿ ಕೇವಲ 34 ಎಸೆತಗಳಲ್ಲಿ 81 ರನ್ ಸಿಡಿಸಿದ್ದರು. ಇದರಲ್ಲಿ ಬರೋಬ್ಬರಿ 9 ಸಿಕ್ಸರ್ ಕೂಡ ಸೇರಿತ್ತು. ಈ ಪಂದ್ಯ ಮಾತ್ರವಲ್ಲದೆ ಪಾಂಡ್ಯ ಟೂರ್ನಿಯಲ್ಲಿ 6ನೇ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುತ್ತಿದ್ದು, 198.32 ರ ಸ್ಟ್ರೈಕ್ರೇಟ್ನಲ್ಲಿ 355 ರನ್ಗಳಿಸಿದ್ದಾರೆ.
ಇನ್ನು ಇಂದು ನಡೆಯಲಿರುವ ಎಸ್ಆರ್ಹೆಚ್ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಪೊಲಾರ್ಡ್, ವಾರ್ನರ್ ಅನುಪಸ್ಥಿತಿ ಖಂಡಿತ ನಮಗೆ ಅನುಕೂಲವಾಗಿದೆ. ಟೂರ್ನಿಯುದ್ದಕ್ಕೂ ವಾರ್ನರ್ ಸನ್ರೈಸರ್ಸ್ ತಂಡಕ್ಕೆ ಯಾವರೀತಿ ನೆರವಾಗಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಹೀಗಾಗಿ ಅವರ ಅನುಪಸ್ಥಿತಿ ಎದುರಾಳಿಗಳಿ ತಂಡಕ್ಕೆ ಖಂಡಿತ ಲಾಭವಾಗಲಿದೆ. ಆದರೆ ಇವರ ಜಾಗದಲ್ಲಿ ಆಡಲಿರುವ ಗಪ್ಟಿಲ್ರನ್ನು ಸಹಾ ಕಡೆಗಣಿಸುವ ಆಗಿಲ್ಲ ಎಂದಿದ್ದಾರೆ.