ಹೈದರಾಬಾದ್: 12ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ನಿನ್ನೆ ಹೈದರಾಬಾದ್ನ ರಾಜೀವ್ ಗಾಂಧಿ ಮೈದಾನದಲ್ಲಿ ವರ್ಣರಂಜಿತ ತೆರೆ ಬಿದ್ದಿದೆ. ರೋಹಿತ್ ಶರ್ಮಾ ನೇತೃತ್ವದ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೆ, ವಿವಿಧ ತಂಡದ ಕೆಲ ಪ್ಲೇಯರ್ಸ್ ಬೇರೆ ಬೇರೆ ಅವಾರ್ಡ್ಗೆ ಭಾಜನರಾಗಿದ್ದಾರೆ.
ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ವೇಳೆ ವಿವಿಧ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಪ್ಲೇಯರ್ಸ್ ಕೆಲ ಅವಾರ್ಡ್ ತಮ್ಮ ಪಾಲಾಗಿಸಿಕೊಂಡಿದ್ದಾರೆ.
ಯಾವ ಪ್ರಶಸ್ತಿ ಯಾರ ಪಾಲು!?
- ಆರೆಂಜ್ ಕ್ಯಾಪ್ ( ಅತೀ ಹೆಚ್ಚು ರನ್): ಡೇವಿಡ್ ವಾರ್ನರ್ – ಸನ್ ರೈಸರ್ಸ್ ಹೈದರಾಬಾದ್ ( 692 ರನ್- 12 ಪಂದ್ಯ).
- ಪರ್ಪಲ್ ಕ್ಯಾಪ್ ( ಅತೀ ಹೆಚ್ಚು ವಿಕೆಟ್) : ಇಮ್ರಾನ್ ತಾಹೀರ್ – ಚೆನ್ನೈ ಸೂಪರ್ ಕಿಂಗ್ಸ್ (26 ವಿಕೆಟ್- 17 ಪಂದ್ಯ)
- ಗೇಮ್ ಚೇಂಜರ್ ಆಫ್ ದಿ ಸೀಸನ್: ರಾಹುಲ್ ಚಹರ್ ಮುಂಬೈ ಇಂಡಿಯನ್ಸ್
- ಸ್ಟೈಲಿಶ್ ಪ್ಲೇಯರ್: ಕೆ.ಎಲ್. ರಾಹುಲ್ – ಕಿಂಗ್ಸ್ ಇಲವೆನ್ ಪಂಜಾಬ್
- ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: ಆಂಡ್ರೋ ರಸ್ಸೆಲ್ – ಕೊಲ್ಕತ್ತಾ ನೈಟ್ ರೈಡರ್ಸ್ ( 204.81 ಸ್ಟ್ರೈಕ್ ರೇಟ್)
- ಅತುತ್ತಮ ಕ್ಯಾಚ್: ಕಿರನ್ ಪೊಲಾರ್ಡ್ – ಮುಂಬೈ ಇಂಡಿಯನ್ಸ್
- ವೇಗದ ಅರ್ಧ ಶತಕ: ಹಾರ್ದಿಕ್ ಪಾಂಡ್ಯ – ಮುಂಬೈ ಇಂಡಿಯನ್ಸ್ ( ಕೊಲ್ಕತ್ತಾ ವಿರುದ್ಧ 17 ಎಸೆತಗಳಲ್ಲಿ ಅರ್ಧಶತಕ)
- ಮೋಸ್ಟ್ ವ್ಯಾಲ್ಯೂವೇಬಲ್ ಪ್ಲೇಯರ್: ಆಂಡ್ರೆ ರಸ್ಸೆಲ್ – ಕೊಲ್ಕತ್ತಾ ನೈಟ್ ರೈಡರ್ಸ್
- ಫೇರ್ ಪ್ಲೇ ಅವಾರ್ಡ್: ಸನ್ ರೈಸರ್ಸ್ ಹೈದರಾಬಾದ್ ತಂಡ
- ಉದಯೋನ್ಮುಖ ಆಟಗಾರ: ಶುಭಮನ್ಗಿಲ್ – ಕೊಲ್ಕತ್ತಾ ನೈಟ್ ರೈಡರ್ಸ್
- ಅತ್ಯುತ್ತಮ ಪಿಚ್ ಮತ್ತು ಗ್ರೌಂಡ್: ಮೊಹಾಲಿ ಮತ್ತು ಹೈದರಾಬಾದ್