ETV Bharat / briefs

ಇಂದಿರಾ ಕ್ಯಾಂಟೀನ್​ಗೆ ಹಣವಿಲ್ಲ... ನಿರ್ಲಕ್ಷ್ಯಕ್ಕೊಳಗಾಯ್ತಾ ಸಿದ್ದು ಮಹತ್ವಾಕಾಂಕ್ಷಿ ಯೋಜನೆ!? - undefined

ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್​ ಯೋಜನೆಗೆ ಹಣದ ಸಂಕಷ್ಟ ಎದುರಾಗಿದ್ದು, ಅರ್ಧಕ್ಕೆ ನಿಲ್ಲುವ ಅಪಾಯ ಎದುರಾಗಿದೆ.

ಇಂದಿರಾ ಕ್ಯಾಂಟೀನ್
author img

By

Published : May 18, 2019, 12:03 PM IST

Updated : May 18, 2019, 1:05 PM IST

ಬೆಂಗಳೂರು: ಇಂದಿರಾ ಕ್ಯಾಂಟೀನ್​ಗೆ ಹಣದ ಸಂಕಷ್ಟ ಎದುರಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹಣ ನೀಡಬೇಕಾದ ಸರ್ಕಾರವೂ ಮೌನವಾಗಿದ್ದು, ಬಿಬಿಎಂಪಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಇಂದಿರಾ ಕ್ಯಾಂಟೀನ್​ಗೆ ಆಹಾರ ಪೂರೈಸುವ ರಿವಾರ್ಡ್ಸ್ ಹಾಗೂ ಶೆಫ್ ಟಾಕ್ ಗುತ್ತಿಗೆ ಸಂಸ್ಥೆಗಳಿಗೆ ಫೆಬ್ರವರಿ ತಿಂಗಳಲ್ಲೇ ಪೇಮೆಂಟ್ ಸ್ಥಗಿತವಾಗಿದೆ. ಕಳೆದ ವರ್ಷದ ನವೆಂಬರ್​ನಿಂದಲೇ ಅರ್ಧ ಪೇಮೆಂಟ್ ಆಗುತ್ತಿದ್ದು, ಕೋಟಿಗಟ್ಟಲೆ ಹಣ ಪಾವತಿಸಲು ಬಾಕಿ ಇದೆ.

inidra-canteen-money-problem
ಈಟಿವಿ ಭಾರತ್​ಗೆ ಲಭ್ಯವಾದ ದಾಖಲೆ

ಶೆಫ್ ಟಾಕ್ ಗುತ್ತಿಗೆ ಸಂಸ್ಥೆಗೆ ಪಾವತಿಸಬೇಕಾದ ಬರೋಬ್ಬರಿ 18,19,07,811 ರೂ. ಬಾಕಿ ಇದ್ದು, ಇದರ ದಾಖಲೆಗಳು ಈಟಿವಿ ಭಾರತ್​ಗೆ ಲಭ್ಯವಾಗಿವೆ. ಇನ್ನು ರಿವಾರ್ಡ್ಸ್ ಗುತ್ತಿಗೆ ಸಂಸ್ಥೆಗೂ 12 ಕೋಟಿ ಬಾಕಿ ಇದೆ. ಶೆಫ್ ಟಾಕ್ ಸಂಸ್ಥೆಯ 800 ಸಿಬ್ಬಂದಿಗಳಿಗೆ ಹಾಗೂ ರಿವಾರ್ಡ್ ಸಂಸ್ಥೆಯ 600 ಸಿಬ್ಬಂದಿಗಳಿಗೆ 2 ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದಾಗಿ ಸಿಬ್ಬಂದಿಗಳು ಕೆಲಸ ಬಿಟ್ಟು ಹೋಗ್ತಿದ್ದಾರೆ. ಹೀಗಾಗಿ ಕ್ಯಾಂಟೀನ್ ನಡೆಸಲು ಕಷ್ಟವಾಗ್ತಿದೆ ಎಂದು ಗುತ್ತಿಗೆದಾರ ತಮ್ಮ ಅಳಲು ತೋಡಿಕೊಂಡಿದ್ದಾರೆ.

inidra-canteen-money-problem
ಕೋಟಿಗಟ್ಟಲೆ ಹಣ ಪಾವತಿ ಬಾಕಿ

ಇಂದಿರಾ ಕ್ಯಾಂಟೀನ್ ಕಿಚನ್​ಗೆ ಗ್ಯಾಸ್, ರೇಷನ್ ತರಲು ದುಡ್ಡಿಲ್ಲ. ಬಿಬಿಎಂಪಿ ಆಯುಕ್ತರಿಗೆ ಎಷ್ಟೇ ಬಾರಿ ಪತ್ರ ಬರೆದ್ರೂ ಬಜೆಟ್​ ಇಲ್ಲ ಎಂದೇ ಉತ್ತರ ಸಿಗುತ್ತಿದೆ. ಬೇಸಿಗೆಯಲ್ಲಿ ಕಿಚನ್ ಒಂದಕ್ಕೆ 2 ಲಕ್ಷ ರೂ. ಟ್ಯಾಂಕರ್ ನೀರು ಪೂರೈಕೆ ಮಾಡಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದ ಬಿಲ್, ಪೌರಕಾರ್ಮಿಕರ ಊಟದ 6 ತಿಂಗಳ ಬಿಲ್ ಬಾಕಿ ಇದೆ. ಜನರ ತೆರಿಗೆ ಹಣದಲ್ಲಿ ಕಟ್ಟಿದ ಇಂದಿರಾ ಕ್ಯಾಂಟೀನ್​ ಅರ್ಧಕ್ಕೆ ಸ್ಥಗಿತಗೊಳ್ಳಬಾರದು ಅನ್ನೋದು ನಮ್ಮ ಕಾಳಜಿ. ಹೀಗಾಗಿ ಬೇರೆ ಉದ್ಯಮದಿಂದ ಹೇಗೋ ಹಣ ಹೊಂದಿಸಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಕಷ್ಟದಲ್ಲಿ ಮುಂದುವರಿಸ್ತಾ ಇದ್ದೀವಿ. ಸರ್ಕಾರ, ಬಿಬಿಎಂಪಿ ಇನ್ನೂ ಬಿಲ್ ನೀಡದೇ ಹೋದರೆ ಕ್ಯಾಂಟೀನ್ ನಡೆಸಲು ಕಷ್ಟವಿದೆ ಎಂದು ರಿವಾರ್ಡ್​ ಸಂಸ್ಥೆಯ ಗುತ್ತಿಗೆದಾರ ತಿಳಿಸಿದ್ದಾರೆ.

Intro:ವರ್ಷಗಳಿಂದ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹಣವಿಲ್ಲ- ಸಂಕಷ್ಟದಲ್ಲಿ ಗುತ್ತಿಗೆದಾರರು

ಬೆಂಗಳೂರು- ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀಮ್ ಯೋಜನೆಗೆ ಹಣದ ಸಂಕಷ್ಟ ಎದುರಾಗಿದ್ದು, ಅರ್ಧಕ್ಕೇ ನಿಲ್ಲುವ ಅಪಾಯ ಎದುರಾಗಿದೆ.
ಹೌದು ಇಂದಿರಾ ಕ್ಯಾಂಟೀನ್ ಗೆ ಹಣದ ಸಂಕಷ್ಟ ಎದುರಾಗಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಹಣ ನೀಡಬೇಕಾದ ಸರ್ಕಾರವೂ ಮೌನವಾಗಿದ್ದು ಬಿಬಿಎಂಪಿಗೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಇಂದಿರಾ ಕ್ಯಾಂಟೀನ್ ಗೆ ಆಹಾರ ಪೂರೈಸುವ ರಿವಾರ್ಡ್ಸ್ ಹಾಗೂ ಶೆಫ್ ಟಾಕ್ ಗುತ್ತಿಗೆ ಸಂಸ್ಥೆಗಳಿಗೆ ಪೆಬ್ರವರಿ ತಿಂಗಳಲ್ಲೇ ಪೇಮೆಂಟ್ ಸ್ಥಗಿತವಾಗಿದೆ. ಕಳೆದ ವರ್ಷದ ನವೆಂಬರ್ ನಿಂದಲೇ ಅರ್ಧ ಪೇಮೆಂಟ್ ಆಗುತ್ತಿದ್ದು, ಕೋಟಿಗಟ್ಟಲೆ ಹಣ ಪಾವತಿಸಲು ಬಾಕಿ ಇದೆ.
ಶೆಫ್ ಟಾಕ್ ಗುತ್ತಿಗೆ ಸಂಸ್ಥೆಗೆ ಬರೋಬ್ಬರಿ 18,19,07,811 ರೂಪಾಯಿ ಬಾಕಿ ಇದ್ದು, ಇದರ ದಾಖಲೆಗಳು ಈಟಿವಿ ಭಾರತ್ ಗೆ ಲಭ್ಯವಾಗಿದೆ. ಇನ್ನು ರಿವಾರ್ಡ್ಸ್ ಗುತ್ತಿಗೆ ಸಂಸ್ಥೆಗೂ ಹನ್ನೆರಡು ಕೋಟಿ ಬಾಕಿ ಇದೆ.
ಶೆಫ್ ಟಾಕ್ ಸಂಸ್ಥೆಯ ಎಂಟುನೂರ ಸಿಬ್ಬಂದಿಗಳಿಗೆ ಹಾಗೂ ರಿವಾರ್ಡ್ ಸಂಸ್ಥೆಯ ಆರುನೂರು ಸಿಬ್ಬಂದಿಗಳಿಗೆ ಎರಡು ತಿಂಗಳಿಂದ ಸಂಬಳ ಆಗಿಲ್ಲ. ಸಿಬ್ಬಂದಿಗಳು ಕೆಲಸ ಬಿಟ್ಟು ಹೋಗ್ತಿದಾರೆ ಇದರಿಂದ, ಕ್ಯಾಂಟೀನ್ ನಡೆಸಲು ಕಷ್ಟವಾಗ್ತಿದೆದು ಗುತ್ತಿಗೆದಾರರು ಈಟಿವಿ ಭಾರತ್ ಗೆ ತಿಳಸಿದರು.
ಇಂದಿರಾ ಕ್ಯಾಂಟೀನ್ ಕಿಚನ್ ಗೆ ಗ್ಯಾಸ್, ರೇಷನ್ ತರಲು ದುಡ್ಡಿಲ್ಲ. ಬಿಬಿಎಂಪಿ ಆಯುಕ್ತರಿಗೆ ಎಷ್ಟೇ ಬಾರಿ ಪತ್ರ ಬರೆದ್ರೂ ಬಜೆಟಿಲ್ಲ ಎಂದೇ ಉತ್ತರ ಸಿಗುತ್ತಿದೆ. ಬೇಸಿಗೆಯಲ್ಲಿ ಕಿಚನ್ ಒಂದಕ್ಕೆ ಎರಡು ಲಕ್ಷ ರೂ ಟ್ಯಾಂಕರ್ ನೀರು ಪೂರೈಕೆ ಮಾಡಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದ ಬಿಲ್ ,ಪೌರಕಾರ್ಮಿಕರ ಊಟದ ಆರು ತಿಂಗಳ ಬಿಲ್ ಬಾಕಿ ಇದೆ.
ಜನರ ತೆರಿಗೆ ಹಣದಲ್ಲಿ ಕಟ್ಟಿದ ಇಂದಿರಾ ಕ್ಯಾಂಟೀಮ್ ಅರ್ಧಕ್ಕೇ ಸ್ಥಗಿತ ಆಗ್ಬಾರ್ದು ಅನ್ನೋದು ನಮ್ಮ ಕಾಳಜಿ. ಹೀಗಾಗಿ ಬೇರೆ ಉದ್ಯಮದಿಂದ ಹೇಗೋ ಹಣ ಹೊಂದಿಸೊ, ಇಂದಿರಾ ಕ್ಯಾಂಟೀನ್ ಯೋಜನೆ ಕಷ್ಟದಲ್ಲಿ ಮುಂದುವರಿಸ್ತಾ ಇದೇವೆ. ಸರ್ಕಾರ, ಬಿಬಿಎಂಪಿ ಇನ್ನೂ ಬಿಲ್ ನೀಡದೇ ಹೋದರೆ ಕ್ಯಾಂಟೀನ್ ನಡೆಸಲು ಕಷ್ಟವಿದೆ ಎಂದು ಗುತ್ತಿಗೆದಾರರು ತಿಳಿಸಿದ್ರು.

ಸೌಮ್ಯಶ್ರೀ

Body:KN_BNG_18_01_INDHIRA_CANTEEN_SOWMYA_7202707Conclusion:KN_BNG_18_01_INDHIRA_CANTEEN_SOWMYA_7202707
Last Updated : May 18, 2019, 1:05 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.