ಮ್ಯಾಂಚೆಸ್ಟರ್: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ಪರ ಅತಿ ಹೆಚ್ಚು ಪಂದ್ಯವಾಡಿದ ಎರಡನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.
ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 341 ನೇ ಪಂದ್ಯವಾಡುತ್ತಿರುವ ಧೋನಿ ಕನ್ನಡಿಗ ರಾಹುಲ್ ದ್ರಾವಿಡ್(340) ದಾಖಲೆ ಬ್ರೇಕ್ ಮಾಡಿದರು. ಧೋನಿಯನ್ನು ಹೊರೆತುಪಡಿಸಿದರೆ ಭಾರತ ತಂಡದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಸಚಿನ್ ತೆಂಡೂಲ್ಕರ್ 463 ಪಂದ್ಯಗಳನ್ನಾಡಿದ್ದಾರೆ.
2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಧೋನಿ 2007 ರಲ್ಲಿ ಟಿ20 ತಂಡದ ನಾಯಕನಾಗಿ ಮೊದಲ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ದೊರೆಕಿಸಿಕೊಟ್ಟಿದ್ದರು. 2011 ರಲ್ಲಿ ಕೂಡ ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು.
ಭಾರತ ತಂಡದ ಪರ ಹೆಚ್ಚು ಪಂದ್ಯವಾಡಿರುವ ಆಟಗಾರರು:
ಸಚಿನ್ ತೆಂಡೂಲ್ಕರ್ 461
ಮಹೇಂದ್ರ ಸಿಂಗ್ ಧೋನಿ 341
ರಾಹುಲ್ ದ್ರಾವಿಡ್ 340
ಮೊಹಮ್ಮದ್ ಅಜರುದ್ದೀನ್ 334
ಸೌರವ್ ಗಂಗೂಲಿ 311
ಯುವರಾಜ್ ಸಿಂಗ್ 304