ಲಂಡನ್: ಚಾಂಪಿಯನ್ ಟ್ರೋಫಿ ವೇಳೆ ಲಂಡನ್‌ನ ದಿ ಓವೆಲ್ ಕ್ರೀಡಾಂಗಣಕ್ಕೆ ಆಗಮಿಸಿದ್ದ ವೇಳೆ ನೆರೆದಿದ್ದ ಪ್ರೇಕ್ಷಕರು ಮಲ್ಯರನ್ನು ಕಳ್ಳ, ಕಳ್ಳ ಎಂದು ಚೀರಿ ಅವಮಾನಿಸಿದ್ದರು. ಆದರೆ ಇಂದು ಅದೇ ಕ್ರೀಡಾಂಗಣಕ್ಕೆ ಆಗಮಿಸಿರುವ ಅವರು ಭಾರತ v/s ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸುತ್ತಿದ್ದಾರೆ. ಈ ಮೂಲಕ ವಂಚನೆಯ ಕಳಂಕದ ಮಧ್ಯೆಯೂ ಕ್ರಿಕೆಟ್ ಪ್ರೇಮ ತೋರಿಸಿದ್ರು.
ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಸಾಲ ಮರುಪಾವತಿ ಮಾಡದೆ ಲಂಡನ್ನಲ್ಲೇ ಬೀಡುಬಿಟ್ಟಿರುವ ಮಲ್ಯ, ಜೂನ್ 11, 2017ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವಿನ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು. ಆ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ಭಾರತೀಯರು ಕಳ್ಳ ಕಳ್ಳ ಎಂದು ಕೂಗಿ ಮಲ್ಯರನ್ನು ಹೀಯಾಳಿಸಿದ ಘಟನೆ ನಡೆದಿತ್ತು.
-
#WATCH London: Vijay Mallya arrives at The Oval cricket ground to watch #IndvsAus match; says, "I am here to watch the game." #WorldCup2019 pic.twitter.com/RSEoJwsUr9
— ANI (@ANI) June 9, 2019 " class="align-text-top noRightClick twitterSection" data="
">#WATCH London: Vijay Mallya arrives at The Oval cricket ground to watch #IndvsAus match; says, "I am here to watch the game." #WorldCup2019 pic.twitter.com/RSEoJwsUr9
— ANI (@ANI) June 9, 2019#WATCH London: Vijay Mallya arrives at The Oval cricket ground to watch #IndvsAus match; says, "I am here to watch the game." #WorldCup2019 pic.twitter.com/RSEoJwsUr9
— ANI (@ANI) June 9, 2019
ಅಂತಹ ಅವಮಾನಕಾರಿ ಘಟನೆಯನ್ನು ಪಕ್ಕಕ್ಕಿಟ್ಟ ಮಲ್ಯ, ಇಂದು ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಹಾಜರಾಗುವ ಮೂಲಕ ಕ್ರಿಕೆಟ್ ಮೇಲಿರುವ ಪ್ರೀತಿ ತೋರಿಸಿದ್ದಾರೆ. ಕ್ರಿಕೆಟ್ ಎಂದರೆ ಅತೀವ ಅಭಿಮಾನ ಇಟ್ಟುಕೊಂಡಿರುವ ಮದ್ಯದ ದೊರೆ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಮಾಲೀಕರೂ ಆಗಿದ್ದಾರೆ.
ಸ್ಟೇಡಿಯಂ ಹೊರಗಡೆ ಪತ್ರಕರ್ತರೊಂದಿಗೆ ಮಾತನಾಡಿದ ಮಲ್ಯ, ನಾನು ನಾನು ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲು ಬಂದಿದ್ದೇನೆ ಎಂದರು.