ETV Bharat / briefs

ಯುವಿ​ ಐಪಿಎಲ್​ನಲ್ಲಿ ಆಡಲ್ಲ! ಆದ್ರೆ, ಕ್ರಿಕೆಟ್​ ಮಾತ್ರ ನಿಲ್ಸಲ್ವಂತೆ!

ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಕ್ರಿಕೆಟಿಗ ಯುವರಾಜ್ ಸಿಂಗ್ ಬಿಸಿಸಿಐನಿಂದ ಸಂಪೂರ್ಣವಾಗಿ ಹೊರಬಂದು ಬೇರೆ ದೇಶಗಳ ಟಿ20 ಲೀಗ್​ಗಳಲ್ಲಿ ಆಡುವ ಬಯಕೆ ಇಟ್ಟುಕೊಂಡಿದ್ದಾರೆ.

ಯುವಿ
author img

By

Published : Jun 11, 2019, 4:23 PM IST

ಮುಂಬೈ: ಭಾರತದ ಖ್ಯಾತ ಆಲ್​ರೌಂಡರ್ ಯುವರಾಜ್​ ಸಿಂಗ್​​ ನಿನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಇದೇ ವೇದಿಕೆಯಲ್ಲಿ 2019ರ ಐಪಿಎಲ್​ ನನ್ನ ಕೊನೆಯ ಐಪಿಎಲ್ ಎಂದು ಹೇಳುವ ಮೂಲಕ ಅವರು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಹುಟ್ಟಿಸಿದ್ದರು.

ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದಾರೆ. ಆದರೆ, ಅವರ ಆಟವನ್ನು ಐಪಿಎಲ್​ನಲ್ಲಾದರೂ ಕಣ್ತುಂಬಿಕೊಳ್ಳಬಹುದೆಂಬ ನಿರೀಕ್ಷೆ ಇಟ್ಟಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. 2019ರ ಐಪಿಎಲ್​ ನನ್ನ ಕೊನೆಯ ಲೀಗ್​ ಎಂದು ಕಳೆದ ವರ್ಷವೇ ನಿರ್ಧರಿಸಿದ್ದೇ ಎಂದು ಅವರು ಹೇಳಿದ್ದು ಇದಕ್ಕೆ ಕಾರಣ.

ಸಿಕ್ಸರ್​ ಸರದಾರನ ಮುಂದಿನ ಪ್ಲಾನ್​ ಏನು?

ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದಂತಿರುವ ಯುವಿ​ ಕಳೆದ ಒಂದೆರಡು ವರ್ಷಗಳಿಂದ ಹೇಳಿಕೊಳ್ಳುವ ಪ್ರದರ್ಶನವನ್ನೇನೂ ನೀಡಿಲ್ಲ.ಆದರೆ ಪ್ರದರ್ಶನ ನೀಡುವುದಕ್ಕೆ ಸಾಕಷ್ಟು ಅವಕಾಶಗಳೂ ಸಿಕ್ಕಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ. ಹೀಗಾಗಿ ಯುವರಾಜ್​ ಸಿಂಗ್‌ ಸಂಪೂರ್ಣವಾಗಿ ಬಿಸಿಸಿಐನಿಂದ ಹೊರಬಂದು ಬೇರೆ ದೇಶಗಳ ಟಿ20 ಲೀಗ್​ಗಳಲ್ಲಿ ಬ್ಯಾಟ್​ ಬೀಸುವ ಬಯಕೆ ಇಟ್ಟುಕೊಂಡಿದ್ದಾರೆ.

ಹಾಗಾದ್ರೆ, ಎಲ್ಲೆಲ್ಲಿ ಅವಕಾಶಗಳಿವೆ?

ಬಿಸಿಸಿಐನಿಂದ ಅವಕಾಶಕ್ಕಾಗಿ ಹಾತೊರೆಯುತ್ತಿರುವ ಯುವಿಗೆ ಈಗಾಗಲೇ ಕೆನಡಾದಲ್ಲಿ ನಡೆಯುವ ಗ್ಲೋಬಲ್​ ಟಿ20 ಲೀಗ್​, ಐರ್ಲೆಂಡ್​ನ ಯೂರೋ ಟಿ20 ಸ್ಲಾಮ್​ನಲ್ಲಿ ಆಡಲು ಚಾನ್ಸ್‌ ಸಿಕ್ಕಿದೆ ಎನ್ನಲಾಗುತ್ತಿದ್ದು, ಯುವಿ ಈ ವರ್ಷದ ಲೀಗ್​ನಲ್ಲಿ ಬ್ಯಾಟ್ ಬೀಸಿದ್ರೂ ಅಚ್ಚರಿಯಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯುವಿ ಆಟ ಮಿಸ್​ ಮಾಡಿಕೊಳ್ಳುತ್ತಿರುವ ಅಭಿಮಾನಿಗಳಿಗೆ ಶೀಘ್ರದಲ್ಲಿ ಯುವಿಯ ಸಿಕ್ಸರ್​ಗಳ ಅಬ್ಬರ ನೋಡುವ ಅವಕಾಶ ಸಿಗಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.