ETV Bharat / briefs

ಪಾಕ್​​ನಲ್ಲಿನ ಭಾರತೀಯ ಹೈಕಮೀಷನರ್​​ಗೆ ಕಿರುಕುಳ... ಹೋದಲ್ಲೆಲ್ಲಾ ಹಿಂಬಾಲಿಸುತ್ತಿದ್ದಾರೆ ಯೋಧರು - ಹೈ ಕಮಿಷನರ್​

ಪಾಕಿಸ್ತಾನದ ಭದ್ರತಾ ಸಿಬ್ಬಂದಿ ಮಾರ್ಚ್​ 9 ಹಾಗೂ 10ರಂದು ಕಿರುಕುಳ ನೀಡಿದ್ದರು. ಮಾರ್ಚ್​ 8ರಂದು ಇದೇ ರೀತಿಯ ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಭಾರತೀಯ ಹೈ ಕಮೀಷನರ್
author img

By

Published : Mar 19, 2019, 11:28 AM IST

ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತೀಯ ಹೈ ಕಮೀಷನರ್​​, ಉಪ ಹೈ ಕಮಿಷನರ್​ ಹಾಗೂ ನೌಕಾ ದಳದ ಸಲಹೆಗಾರರಿಗೆ ಅಲ್ಲಿನ ಸೇನೆ ಕಿರುಕುಳ ಕೊಡುತ್ತಿದೆ ಎನ್ನಲಾಗುತ್ತಿದ್ದು, ಈ ಸಂಬಂಧ ತನಿಖೆ ನಡೆಸಬೇಕೆಂಬ ಕೂಗು ಕೇಳಿಬಂದಿದೆ.

ತನ್ನ ಮೇಲಿನ ಈ ಕಿರುಕುಳವನ್ನು ಮೌಖಿಕವಾಗಿ ಭಾರತೀಯ ಹೈಕಮೀಷನರ್​ ಹೇಳಿಕೊಂಡಿದ್ದಾರೆ. ಅಲ್ಲದೇ ಪಾಕ್​ ವಿದೇಶಾಂಗ ಇಲಾಖೆಗೆ ಈ ಕುರಿತು ಪತ್ರ ಕೂಡ ಬರೆದಿದ್ದಾರೆ.

ಪಾಕಿಸ್ತಾನದ ಭದ್ರತಾ ಸಿಬ್ಬಂದಿ ಮಾರ್ಚ್​ 9 ಹಾಗೂ 10ರಂದು ಕಿರುಕುಳ ನೀಡಿದ್ದರು. ಮಾರ್ಚ್​ 8ರಂದು ಇದೇ ರೀತಿಯ ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಪ್ರತಿನಿತ್ಯ ಭಾರತೀಯ ಹೈಕಮೀಷನರ್​ ಕಚೇರಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಉಪ ಹೈ ಕಮಿಷನರ್​ ಮನೆಯ ಸುತ್ತಲೂ ಓಡಾಡುತ್ತಿದ್ದಾರೆ ಹಾಗೂ ನೌಕಾದಳದ ಸಲಹೆಗಾರರ ಮೇಲೂ ಪಾಕ್​ ಭದ್ರತಾ ಸಿಬ್ಬಂದಿ ಒಂದು ಕಣ್ಣಿಟ್ಟಿದ್ದಾರೆ. ಅಲ್ಲದೇ ಹೈಕಮಿಷನರ್​ ಅವರನ್ನು ಒಂದಿಬ್ಬರು ಪಾಕ್​ ಯೋಧರು ಹಿಂಬಾಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪುಲ್ವಾಮಾ ದಾಳಿ ಹಾಗೂ ನಂತರದ ಬಾಲಕೋಟ್ ಮೇಲಿನ ಭಾರತದ ವಾಯುದಾಳಿ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಿದೆ.

Intro:Body:

ಪಾಕ್​​ನಲ್ಲಿನ ಭಾರತೀಯ ಹೈಕಮೀಷನರ್​​ಗೆ ಕಿರುಕುಳ... ಹೋದಲ್ಲೆಲ್ಲಾ ಹಿಂಬಾಲಿಸುತ್ತಿದ್ದಾರೆ ಯೋಧರು

ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತೀಯ ಹೈ ಕಮೀಷನರ್​​, ಉಪ ಹೈ ಕಮಿಷನರ್​ ಹಾಗೂ ನೌಕಾ ದಳದ ಸಲಹೆಗಾರರಿಗೆ ಅಲ್ಲಿನ ಸೇನೆ ಕಿರುಕುಳ ಕೊಡುತ್ತಿದೆ ಎನ್ನಲಾಗುತ್ತಿದ್ದು, ಈ ಸಂಬಂಧ ತನಿಖೆ ನಡೆಸಬೇಕೆಂಬ ಕೂಗು ಕೇಳಿಬಂದಿದೆ.

ತನ್ನ ಮೇಲಿನ ಈ ಕಿರುಕುಳವನ್ನು ಮೌಖಿಕವಾಗಿ ಭಾರತೀಯ ಹೈಕಮೀಷನರ್​ ಹೇಳಿಕೊಂಡಿದ್ದಾರೆ. ಅಲ್ಲದೇ ಪಾಕ್​ ವಿದೇಶಾಂಗ ಇಲಾಖೆಗೆ ಈ ಕುರಿತು ಪತ್ರ ಕೂಡ ಬರೆದಿದ್ದಾರೆ.

ಪಾಕಿಸ್ತಾನದ ಭದ್ರತಾ ಸಿಬ್ಬಂದಿ ಮಾರ್ಚ್​ 9 ಹಾಗೂ 10ರಂದು ಕಿರುಕುಳ ನೀಡಿದ್ದರು. ಮಾರ್ಚ್​ 8ರಂದು ಇದೇ ರೀತಿಯ ಘಟನೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಪ್ರತಿನಿತ್ಯ ಭಾರತೀಯ ಹೈಕಮೀಷನರ್​ ಕಚೇರಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಉಪ ಹೈ ಕಮಿಷನರ್​ ಮನೆಯ ಸುತ್ತಲೂ ಓಡಾಡುತ್ತಿದ್ದಾರೆ ಹಾಗೂ ನೌಕಾದಳದ ಸಲಹೆಗಾರರ ಮೇಲೂ ಪಾಕ್​ ಭದ್ರತಾ ಸಿಬ್ಬಂದಿ ಒಂದು ಕಣ್ಣಿಟ್ಟಿದ್ದಾರೆ. ಅಲ್ಲದೇ ಹೈಕಮಿಷನರ್​ ಅವರನ್ನು ಒಂದಿಬ್ಬರು ಪಾಕ್​ ಯೋಧರು ಹಿಂಬಾಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪುಲ್ವಾಮಾ ದಾಳಿ ಹಾಗೂ ನಂತರದ ಬಾಲಕೋಟ್ ಮೇಲಿನ ಭಾರತದ ವಾಯುದಾಳಿ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.