ನವದೆಹಲಿ: ರಿಲಾಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಬೆನ್ನು ತಟ್ಟಿದ್ದಾರೆ. ಇದು ಭಾರತೀಯ ರಾಜಕಾರಣದ ಚುನಾವಣಾ ಇತಿಹಾಸದಲ್ಲಿ ಅಪರೂಪದ ವಿದ್ಯಮಾನವಾಗಿದೆ.
ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವ್ರಾಗೆ ಕೆಲ ದಿನಗಳ ಹಿಂದೆ ಮುಖೇಶ್ ಅಂಬಾನಿ ಬೆಂಬಲ ಸೂಚಿಸಿದ್ದರು. ಇದೀಗ ಕೈ ಅಭ್ಯರ್ಥಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉಪಾಧ್ಯಕ್ಷ ಹಾಗು ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಠಕ್ ಬೆನ್ನು ತಟ್ಟಿದ್ದಾರೆ.
ದೇಶದಲ್ಲಿರುವ ಉದ್ಯಮ ಜಗತ್ತು ಸಾಂಪ್ರದಾಯಿಕವಾಗಿ ರಾಜಕೀಯ ನಾಯಕರುಗಳ ಜೊತೆ ಕಾಣಿಸಿಕೊಳ್ಳುವುದನ್ನು ಬಯಸುತ್ತಿರಲಿಲ್ಲ. ಕೈಗಾರಿಕೋದ್ಯಮಿಗಳು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪಕ್ಷದ ಪರ ಇರುತ್ತಿದ್ದರು.
-
From small shopkeepers to large industrialists - for everyone, South Mumbai means business.
— Milind Deora (@milinddeora) April 17, 2019 " class="align-text-top noRightClick twitterSection" data="
We need to bring businesses back to Mumbai and make job creation for our youth a top priority.#MumbaiKaConnection pic.twitter.com/d4xJnvhyKr
">From small shopkeepers to large industrialists - for everyone, South Mumbai means business.
— Milind Deora (@milinddeora) April 17, 2019
We need to bring businesses back to Mumbai and make job creation for our youth a top priority.#MumbaiKaConnection pic.twitter.com/d4xJnvhyKrFrom small shopkeepers to large industrialists - for everyone, South Mumbai means business.
— Milind Deora (@milinddeora) April 17, 2019
We need to bring businesses back to Mumbai and make job creation for our youth a top priority.#MumbaiKaConnection pic.twitter.com/d4xJnvhyKr
ಅಂಬಾನಿ ಹಾಗು ಉದಯ್ ಕೋಠಕ್ ನಡೆ ಸಹಜವಾಗಿಯೇ ಬಿಜೆಪಿ ಹಾಗು ಶಿವಸೇನೆಯನ್ನು ಕೆರಳಿಸಿದೆ. ಶಿವಸೇನೆಯ ಸಾವಂತ್‌ಗೆ ಹೋಲಿಸಿದರೆ ಮಿಲಿಂದ್ ದೇವ್ರಾ, ಉದ್ಯಮ ಸ್ನೇಹಿ ಮನೋಭಾವ ಹೊಂದಿದ್ದಾರೆ ಎನ್ನಲಾಗುತ್ತಿದೆ.