ನವದೆಹಲಿ: ಎರಡು ಕೋವಿಶೀಲ್ಡ್ ಡೋಸ್ಗಳ ನಡುವಿನ ಅಂತರವನ್ನು 4-6 ವಾರಗಳಿಂದ 12-16 ವಾರಗಳಿಗೆ ಹೆಚ್ಚಿಸುವ ನಿರ್ಧಾರ "ಮೂಲಭೂತ ವೈಜ್ಞಾನಿಕ ಕಾರಣಗಳನ್ನು" ಆಧರಿಸಿದೆ ಎಂದು ರೋಗ ನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮೂಹದ (ಎನ್‌ಟಿಎಜಿ) ಭಾರತದ ಕೋವಿಡ್ -19 ಕಾರ್ಯನಿರತ ತಂಡದ ಅಧ್ಯಕ್ಷ ಡಾ.ಎನ್.ಕೆ.ಅರೋರಾ ಹೇಳಿದ್ದಾರೆ.
"ಏಪ್ರಿಲ್ ಕೊನೆಯ ವಾರದಲ್ಲಿ, ಯುನೈಟೆಡ್ ಕಿಂಗ್‌ಡಂನ ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಏಜೆನ್ಸಿಯಾದ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಬಿಡುಗಡೆ ಮಾಡಿದ ಮಾಹಿತಿಯು ಅಂತರ 12 ವಾರಗಳಿದ್ದಾಗ ಲಸಿಕೆ ಪರಿಣಾಮಕಾರಿತ್ವವು ಶೇಕಡಾ 65 ರಿಂದ 88ರವರೆಗೆ ಬದಲಾಗುತ್ತದೆ ಎಂದು ತೋರಿಸಿದೆ" ಎಂದರು.
ಈ ಕಾರಣದಿಂದಾಗಿ ಅವರು ಸಾಂಕ್ರಾಮಿಕದಿಂದ ಹೊರಬಂದರು. ಆದ್ದರಿಂದ ಭಾರತದಲ್ಲಿಯೂ ಅಂತರವನ್ನು 12 - 16 ವಾರಗಳಿಗೆ ಹೆಚ್ಚಿಸಲು ಮೇ 13ರಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅರೋರಾ ಹೇಳಿದರು.