ಇಸ್ಲಾಮಾಬಾದ್: ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ಸರ್ಕಾರ ನಡೆಸಲು ಒದ್ದಾಡುತ್ತಿರುವ ಪಾಕಿಸ್ತಾನದ ನೆರವಿಗೆ ಐಎಂಎಫ್ ಧಾವಿಸಿದೆ.
ಪಾಕಿಸ್ತಾನ ಹಾಗೂ ಐಎಂಎಫ್ ನಡುವೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ ಆರು ಬಿಲಿಯನ್ ಅಮೆರಿಕನ್ ಡಾಲರ್ ಮುಂದಿನ ಮೂರು ವರ್ಷ ನೀಡಲಿದೆ. ನಾವು ವಾರ್ಷಿಕ ಪಾವತಿಯಲ್ಲಿ 12 ಬಿಲಿಯನ್ ಡಾಲರ್ ಹಣದ ಕೊರತೆ ಎದುರಿಸುತ್ತಿದ್ದೇವೆ. ಅದನ್ನು ಭರಿಸುವುದು ನಮ್ಮಿಂದ ಅಸಾಧ್ಯ. ಸದ್ಯದ ಐಎಂಎಫ್ ಜೊತೆಗಿನ ಒಪ್ಪಂದ ಈ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ಪಾಕಿಸ್ತಾನದ ಹಣಕಾಸು ಸಲಹೆಗಾರ ಅಬ್ದುಲ್ ಹಫೀಜ್ ಹೇಳಿದ್ದಾರೆ.
ಈ ಒಪ್ಪಂದ ಸರ್ಕಾರಿ ಆಡಳಿತವನ್ನು ಮತ್ತಷ್ಟು ಉತ್ತಮಗೊಳಿಸಲಿದೆ. ದೇಶೀಯ ಹಾಗೂ ವಿದೇಶಿ ಹರಿವಿನ ಅಸಮತೋಲನವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಐಎಂಎಫ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.