ETV Bharat / briefs

ನಗರ ಸ್ವಚ್ಛ ಮಾಡೋ ಪೌರ ಕಾರ್ಮಿಕರಿಗೆ ಪಿಪಿಇ ಕಿಟ್​ ನೀಡಿದ ಇಲಕಲ್ಲ ನಗರಸಭೆ!

author img

By

Published : May 4, 2021, 3:07 PM IST

ಸುರಕ್ಷತಾ ಕ್ರಮಗಳನ್ನು ಅನುಸರಿಸಿ ದಿನ ನಿತ್ಯ ಕಾರ್ಯನಿರ್ವಹಿಸಲು ಮತ್ತು ಆರೋಗ್ಯದ ಬಗ್ಗೆ ಕಾಳಜಿವಹಿಸಲು ಕಾರ್ಮಿಕರಿಗೆ ಸೂಚನೆ..

 ilkal Municipality
ilkal Municipality

ಬಾಗಲಕೋಟೆ : ನಗರವನ್ನು ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕರು ಸಹ ಕೊರೊನಾ ವಾರಿಯರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಹಿನ್ನೆಲೆ ಇಲಕಲ್ಲ ಪಟ್ಟಣದ ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಪಿಪಿಇ ಕಿಟ್ ಮಾದರಿ ನೂತನ ಸಮವಸ್ತ್ರ ನೀಡಿ, ಸ್ವಚ್ಛತಾ ನಿರ್ವಹಣೆ ನಡೆಸಲಾಗುತ್ತಿದೆ.

ಇಲಕಲ್ಲ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರುಗಳಿಗೆ ಕೊರೊನಾ ಭೀಕರತೆಯ ಅರಿತು ಸಮವಸ್ತ್ರ ಮತ್ತು ಪ್ರೊಟೆಕ್ಟಿವ್ ಗೇರ್ ವಿತರಿಸಿ, ಕೊರೊನಾ ರೋಗ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೋವಿಡ್ ಸೋಂಕಿನ ಆತಂಕದ ನಡುವೆಯೂ ಕೂಡ ನಮ್ಮ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶೋಭಾ ಅಮದಿಹಾಳ ತಿಳಿಸಿದರು. ಪೌರಕಾರ್ಮಿಕರು ಎರಡು ಕೋವಿಡ್ ಲಸಿಕೆ ತಪ್ಪದೇ ಪಡೆಯುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಜಗದೀಶ್ ಹುಲಗೆಜ್ಜಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ (ಪರಿಸರ) ಆನಂದ್ ಬದಿ ಅವರು, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ದಿನ ನಿತ್ಯ ಕಾರ್ಯನಿರ್ವಹಿಸಲು ಮತ್ತು ಆರೋಗ್ಯದ ಬಗ್ಗೆ ಕಾಳಜಿವಹಿಸಲು ಕಾರ್ಮಿಕರಿಗೆ ಸೂಚನೆ ನೀಡಿದರು.

 ilkal Municipality
ಪೌರ ಕಾರ್ಮಿಕರಿಗೆ ಪಿಪಿಇ ಕಿಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.