ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನಸ್ಸಿಟ್ಟು ಕೆಲಸ ಮಾಡಿದ್ದರೆ ನನಗೆ ಸೋಲಾಗುತ್ತಿರಲಿಲ್ಲ ಎಂದು ದೋಸ್ತಿ ಪರಾಜಿತ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.
ಕ್ಷೇತ್ರದಲ್ಲಿ ನನಗೆ ಮೊದಲೇ ಟಿಕೆಟ್ ನೀಡಬೇಕಿತ್ತು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಗಟ್ಟಿಯಾಗಿ ನನ್ನ ಪರ ಪ್ರಚಾರ ಮಾಡದ ಕಾರಣ ಚುನಾವಣೆಯಲ್ಲಿ ಕಷ್ಟವಾಯ್ತು. ಇನ್ನು ಮಂಡ್ಯ, ತುಮಕೂರಿನಲ್ಲಿ ಜೆಡಿಎಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ದೇವೇಗೌಡರು ಹಾಗೂ ನಿಖಿಲ್ ಸೋಲುತ್ತಿರಲಿಲ್ಲ. ಮೈತ್ರಿ ಮಾಡಿಕೊಂಡ ಹಿನ್ನೆಲೆ ಹಿನ್ನಡೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.