ನಾಟಿಂಗ್ಹ್ಯಾಮ್: ಸ್ಫೋಟಕ ಆಟಗಾರರ ದಂಡನ್ನೇ ಹೊಂದಿರುವ ವಿಂಡೀಸ್ ಹಾಗೂ ಐದು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡ ಇಂದು ತಮ್ಮ ಎರಡನೇ ಜಯಕ್ಕಾಗಿ ಕಾದಾಡಲಿವೆ.
ಮೊದಲ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ಪಾಕಿಸ್ತಾನವನ್ನು ಕೇವಲ 105 ರನ್ಗಳಿಗೆ ಕೆಡವಿದ್ದ ವಿಂಡೀಸ್ ಕೇವಲ 13.4 ಓವರ್ಗಳಲ್ಲಿ ಗುರಿ ತಲುಪಿತ್ತು. ಕ್ರಿಸ್ ಗೇಲ್ 34 ಎಸೆತಗಳಲ್ಲಿ 50 ರನ್ ಸಿಡಿಸಿದರೆ, ಬೌಲಿಂಗ್ನಲ್ಲಿ ಥಾಮಸ್ 4, ಹೋಲ್ಡರ್ 3, ರಸೆಲ್ 2 ವಿಕೆಟ್ ಪಡೆದು ಮಿಂಚಿದ್ದರು.
ಇಂದು ಕೂಡ ಅದೇ ಕ್ರೀಡಾಂಗಣದಲ್ಲಿ ಆಸೀಸ್ ವಿರುದ್ಧ ಗೆಲುವು ಪಡೆದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ತವಕದಲ್ಲಿದೆ. ಇನ್ನೂ ಐಪಿಎಲ್ ಮೂಡಿನಲ್ಲಿರುವ ಗೇಲ್, ರಸೆಲ್, ಪೂರನ್ ಜೊತೆಗೆ ಶೈ ಹೋಪ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಕಾಟ್ರೆಲ್, ಒಸಾನೆ ಥಾಮಸ್, ಹೋಲ್ಡರ್ ಉತ್ತಮ ಪ್ರದರ್ಶನ ತೋರುತ್ತಿರುವುರಿಂದ ಆಸೀಸ್ಗೆ ಪ್ರಬಲ ಪೈಪೋಟಿ ನೀಡಲು ವಿಂಡೀಸ್ ಸಜ್ಜಾಗಿದೆ.
ಇತ್ತ ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗೆಲವು ಸಾಧಿಸಿದ್ದು ಈ ಪಂದ್ಯದಲ್ಲೂ ಗೆಲುವು ಪಡೆಯುವ ಆತ್ಮವಿಶ್ವಾಸದಲ್ಲಿದೆ. ವಾರ್ನರ್, ಫಿಂಚ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಜೊತೆಗೆ ಸ್ಮಿತ್, ಖವಾಜ ಜೊತೆಗೆ ಮ್ಯಾಕ್ಸ್ವೆಲ್ರಂತಹ ಸ್ಫೋಟಕ ಆಟಗಾರರು ಕೂಡ ಪಂದ್ಯವನ್ನು ಬದಲಾಯಿಸಬಲ್ಲ ತಾಕತ್ತು ಹೊಂದಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಕೇನ್ ರಿಚರ್ಡ್ಸ್ನ್, ಕಾರ್ಟರ್ ಲೈನ್ ಹಾಗೂ ಜಂಪಾ ಉತ್ತಮ ಲಯದಲ್ಲಿರುವುದರಿಂದ ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಮುಖಾಮುಖಿ:
ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಒಟ್ಟು 139 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 73 ಹಾಗೂ ವೆಸ್ಟ್ ಇಂಡೀಸ್ 60 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. 3 ಪಂದ್ಯಗಳು ಟೈ ಆಗಿವೆ.
ಇನ್ನು ವಿಶ್ವಕಪ್ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು, ವಿಂಡೀಸ್ 5 ಹಾಗೂ ಆಸೀಸ್ 4 ಗೆಲುವು ಸಾಧಿಸಿದೆ.
ವೆಸ್ಟ್ ಇಂಡೀಸ್:
ಜಾಸನ್ ಹೋಲ್ಡರ್( ನಾಯಕ), ಡೆರಾನ್ ಬ್ರಾವೋ, ಶಿಮ್ರಾನ್ ಹೆಟ್ಮೈರ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಶೆಲ್ಡನ್ ಕಾಟ್ರೆಲ್, ಕ್ರಿಸ್ ಗೇಲ್, ಶೈ ಹೋಪ್, ಆಶ್ಲೇ ನರ್ಸ್, ಒಶೇನ್ ಥಾಮಸ್, ಕಾರ್ಲೋಸ್ ಬ್ರಾತ್ವೈಟ್
ಆಸ್ಟ್ರೇಲಿಯಾ:
ಆ್ಯರೋನ್ ಫಿಂಚ್(ನಾಯಕ), ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಕಾಲ್ಟರ್-ನೇಲ್, ಪ್ಯಾಟ್ ಕಮ್ಮಿನ್ಸ್, ಉಸ್ಮಾನ್ ಖವಾಜ, ನಥನ್ ಲಯನ್, ಶಾನ್ ಮಾರ್ಶ್, ಗ್ಲೇನ್ ಮ್ಯಾಕ್ಸ್ವೆಲ್, ರಿಚರ್ಡ್ಸನ್, ಸ್ಟಿವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಡೇವಿಡ್ ವಾರ್ನರ್, ಆ್ಯಡಮ್ ಜಂಪಾ.