ನವದೆಹಲಿ: ವಾಯುಮಾರ್ಗ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಸೇರಿದ ಸರಕು ವಿಮಾನವನ್ನು ಭಾರತೀಯ ವಾಯುಸೇನೆ ಬಲವಂತವಾಗಿ ಜೈಪುರದಲ್ಲಿ ಇಳಿಸಿದ ಘಟನೆ ನಡೆದಿದೆ.
ಜಾರ್ಜಿಯಾದಿಂದ ಹೊರಟಿದ್ದ ಆ್ಯಂಟನೋವ್ ಎಎನ್-12 ಸರಕು ವಿಮಾನ ಕರಾಚಿ ಮಾರ್ಗವಾಗಿ ದೆಹಲಿ ತಲುಪಬೇಕಿತ್ತು. ಆದರೆ ಈ ನಡುವೆ ವಿಮಾನ ತನ್ನ ಪಥ ಬದಲಿಸಿದೆ. ಪರಿಣಾಮ ಗುಜರಾತ್ ಮೂಲಕ ಭಾರತದ ವಾಯುಮಾರ್ಗವನ್ನು ಪ್ರವೇಶಿಸಿತ್ತು.
-
#WATCH: Indian Air Force fighter jets force an Antonov AN-12 heavy cargo plane coming from Pakistani Air space to land at Jaipur airport. Questioning of pilots on. pic.twitter.com/esuGbtu9Tl
— ANI (@ANI) May 10, 2019 " class="align-text-top noRightClick twitterSection" data="
">#WATCH: Indian Air Force fighter jets force an Antonov AN-12 heavy cargo plane coming from Pakistani Air space to land at Jaipur airport. Questioning of pilots on. pic.twitter.com/esuGbtu9Tl
— ANI (@ANI) May 10, 2019#WATCH: Indian Air Force fighter jets force an Antonov AN-12 heavy cargo plane coming from Pakistani Air space to land at Jaipur airport. Questioning of pilots on. pic.twitter.com/esuGbtu9Tl
— ANI (@ANI) May 10, 2019
ತಕ್ಷಣವೇ ಎಚ್ಚೆತ್ತ ವಾಯುಸೇನೆ, ಎರಡು ಸುಖೋಯ್ ಎಸ್ಯು-30 ಮೂಲಕ ಪಾಕ್ ವಿಮಾನವನ್ನು ಜೈಪುರ ಏರ್ಪೋರ್ಟ್ನಲ್ಲಿ ಬಲವಂತವಾಗಿ ಇಳಿಸಿದೆ. ನಂತರ ಪೈಲಟ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಮುಂಬೈ-ಅಹಮದಾಬಾದ್ ವಾಯುಮಾರ್ಗದಲ್ಲಿ ತೆರಳಬೇಕಿದ್ದ ವಿಮಾನ, ಮುಚ್ಚಲಾಗಿದ್ದ ವಾಯುಮಾರ್ಗದಲ್ಲಿ ಭಾರತವನ್ನು ಪ್ರವೇಶಿಸಿತ್ತು. ಜೊತೆಗೆ ತನ್ನ ಮಾರ್ಗದ ಕುರಿತಾದ ಎಲ್ಲ ಸಂಪರ್ಕವನ್ನೂ ಕಳೆದುಕೊಂಡಿತ್ತು.
ಅನುಮಾನಾಸ್ಪದವಾಗಿ ಭಾರತದ ವಾಯುಮಾರ್ಗವನ್ನು ಪ್ರವೇಶಿಸಿ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಬಲವಂತವಾಗಿ ಇಳಿಸಲಾಗಿದೆ ಎಂದು ವಾಯುಸೇನೆ ಸ್ಪಷ್ಟನೆ ನೀಡಿದೆ.