ಕೇದಾರನಾಥ: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕೇದಾರನಾಥನ ಸನ್ನಿಧಿಯಲ್ಲಿದ್ದಾರೆ. ಇಂದು ಬೆಳಗ್ಗೆ ಕೂಡ ವಿಶೇಷ ಪೂಜೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮದವರೊಂದಿಗೆ ಮಾತನಾಡಿದರು.
ದೇವರ ಹತ್ತಿರ ನಾನು ಏನು ಬೇಡಿಕೊಂಡಿಲ್ಲ... ಎಲ್ಲ ಸಾಮರ್ಥ್ಯವನ್ನ ಆತ ನನಗೆ ನೀಡಿದ್ದಾನೆಂದು ಆಧ್ಯಾತ್ಮಿಕವಾಗಿ ನುಡಿದರು. ಇಂತಹ ಪುಣ್ಯ ಕ್ಷೇತ್ರಗಳಲ್ಲಿ ಬಂದು ಅದು ಬೇಕು, ಇದು ಬೇಕು ಎಂದು ಕೇಳುವ ಬದಲು, ನಮ್ಮಿಂದ ಕೈಲಾದಷ್ಟು ಸಹಾಯ ಮಾಡುವ ಮನೋಭಾವ ಬೆಳಿಸಿಕೊಳ್ಳಬೇಕು ಎಂದ ಮೋದಿ, ಬರೋಬ್ಬರಿ ಒಂದು ವರ್ಷದ ಬಳಿಕ ನಾನು ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಕೇದಾರನಾಥನ ಅಭಿವೃದ್ಧಿಗಾಗಿ ವಿಶೇಷ ರೂಪರೇಷ ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಧಾನಿ ಧನ್ಯವಾದ ಸಲ್ಲಿಕೆ ಮಾಡಿದರು. ದೇಶದಲ್ಲಿ ಶಾಂತಿಯುತ ಮತದಾನ ನಡೆಯುವುದಕ್ಕೆ ಅವರು ಎಲ್ಲ ರೀತಿಯಿಂದಲೂ ಶ್ರಮಿಸುತ್ತಿದ್ದಾರೆ ಎಂದರು. ಇದೇ ವೇಳೆ ಬದ್ರಿನಾಥ್ಗೂ ಭೇಟಿ ನೀಡಿ ಪೂಜೆ ಸಲ್ಲಿಸುವುದಾಗಿ ಮೋದಿ ಹೇಳಿದ್ದಾರೆ.
ಇದೇ ವೇಳೆ ಮಾಧ್ಯಮ ಮಿತ್ರರಿಗೆ ವಿಶೇಷ ಧನ್ಯವಾದ ಹೇಳಿದ ಮೋದಿ, ಇಷ್ಟೊಂದು ಕಠಿಣ ಪರಿಸ್ಥಿತಿಗಳಲ್ಲೂ ನಿಮ್ಮ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.