ETV Bharat / briefs

ದೀದಿ ನಾಡಲ್ಲಿ ಕಮಲ ಘರ್ಜನೆ: ಸಿಎಂ ಕುರ್ಚಿ ಬಿಡಲು ಮುಂದಾದ ಮಮತಾ!

ಲೋಕಸಭಾ ಚುನಾವಣೆಯಲ್ಲಿ ದೀದಿ ನಾಡಿಗೆ ನುಗ್ಗಿದ ಬಿಜೆಪಿ, ಟಿಎಂಸಿ ಭದ್ರಕೋಟೆ ಪುಡಿಗಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಮುಂದಾಗಿದ್ದಾರೆ.

ಮಮತಾ ಬ್ಯಾನರ್ಜಿ
author img

By

Published : May 25, 2019, 8:56 PM IST

ಕೋಲ್ಕತ್ತಾ: ಲೋಕಸಭಾ ಚುನಾವಣೆಯ ಫಲಿತಾಂಶ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೂ ಶಾಕ್​ ನೀಡಿದೆ. 42 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಈ ಫಲಿತಾಂಶದ ಪರಿಣಾಮ ಇದೀಗ ದೀದಿ ಮೇಲಾಗಿದೆ.

ಲೋಕಸಮರದ ರಿಸಲ್ಟ್‌ನಿಂದ ಆಘಾತಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಚುನಾವಣೆಯಲ್ಲಿ ಸೋಲುಂಡ ಬಳಿಕ ಇದೇ ಮೊದಲ ಬಾರಿಗೆ ದೀದಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು. ಈ ವೇಳೆ ತೃಣಮೂಲ ಕಾಂಗ್ರೆಸ್​ ಭಾರೀ ಹಿನ್ನೆಡೆ ಅನುಭವಿಸಿದ್ದರಿಂದ ನೈತಿಕ ಹೊಣೆ ಹೊತ್ತು ತಾವು ಸಿಎಂ ಸ್ಥಾನ ತ್ಯಜಿಸುವುದಾಗಿ ತಿಳಿಸಿದ್ದರು. ಆದರೆ ತೃಣಮೂಲ ಕಾಂಗ್ರೆಸ್​ ಇದನ್ನು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

ಮುಂದಿನ ಆರು ತಿಂಗಳ ಕಾಲ ನಾನು ಸಿಎಂ ಆಗಿ ಮುಂದುವರೆಯಲು ಸಾಧ್ಯವಿಲ್ಲ. ನಾನು ಪವರ್​ಲೆಸ್​ ಸಿಎಂ ಆಗಿದ್ದು, ಈ ಕುರ್ಚಿ ನನಗೇನೂ ಅಲ್ಲ. ಪಕ್ಷದ ಚಿಹ್ನೆ ನನಗೆ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮಮತಾ, ರಾಜಸ್ಥಾನ,ಗುಜರಾತ್​ ಹಾಗೂ ಹರಿಯಾಣದಲ್ಲಿ ಬಿಜೆಪಿ ಅಷ್ಟೊಂದು ಸ್ಥಾನ ಗೆಲ್ಲುವುದಕ್ಕೆ ಹೇಗೆ ಸಾಧ್ಯ? ಜನರು ಇದರ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ. ಆದರೆ ನಾನು ಹೆದರಲ್ಲ ಎಂದರು.

2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಕೇವಲ 2 ಸ್ಥಾನಗಳಲ್ಲಿ ಗೆದ್ದಿತ್ತು.ಆದರೀಗ ಬರೋಬ್ಬರಿ 18 ಕ್ಷೇತ್ರಗಳಲ್ಲಿ ಗೆದ್ದು ತನ್ನ ಅಸ್ತಿತ್ವವನ್ನ ಮತ್ತಷ್ಟು ಭದ್ರವಾಗಿಸಿಕೊಂಡಿದೆ.

Intro:Body:

ದೀದಿ ನಾಡಲ್ಲಿ ಕಮಲದ ಘರ್ಜನೆ: ಸಿಎಂ ಸ್ಥಾನಕ್ಕೆ ರಿಸೈನ್​ ಮಾಡಲು ಮುಂದಾಗಿದ್ದ ಮಮತಾ! 

ಕೋಲ್ಕತ್ತಾ: ಲೋಕಸಭಾ ಚುನಾವಣೆಯ ಫಲಿತಾಂಶ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೂ ಶಾಕ್​ ನೀಡಿದೆ.  42 ಲೋಕಸಭೆ ಕ್ಷೇತ್ರಗಳಲ್ಲಿ ಬಿಜಿಪಿ 18 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಹೊಸ ಇತಿಹಾಸ ರಚನೆ ಮಾಡಿದೆ. 

ಇದರಿಂದ ಶಾಕ್​​ಗೆ ಒಳಗಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಚುನಾವಣೆಯಲ್ಲಿ ಸೋಲುಂಡ ಬಳಿಕ ಇದೇ ಮೊದಲ ಬಾರಿಗೆ ದೀದಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು. ಈ ವೇಳೆ ತೃಣಮೂಲ ಕಾಂಗ್ರೆಸ್​ ಹಿನ್ನಡೆ ಅನುಭವಿಸಿದ್ದರಿಂದ ನೈತಕ ಹೊಣೆ ಹೊತ್ತು ತಾವು ಸಿಎಂ ಸ್ಥಾನ ತ್ಯಜಿಸುವುದಾಗಿ ತಿಳಿಸಿದ್ದರು. ಆದರೆ ತೃಣಮೂಲ ಕಾಂಗ್ರೆಸ್​ ಇದನ್ನ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. 

ಮುಂದಿನ ಆರು ತಿಂಗಳ ಕಾಲ ನಾನು ಸಿಎಂ ಆಗಿ ಮುಂದುವರೆಯಲು ಸಾಧ್ಯವಿಲ್ಲ. ನಾನು ಪವರ್​ಲೆಸ್​ ಸಿಎಂ ಆಗಿದ್ದು, ಈ ಕುರ್ಚಿ ನನಗೇನೂ ಅಲ್ಲ. ಪಕ್ಷದ ಚಿಹ್ನೆ ನನಗೆ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮಮತಾ, ರಾಜಸ್ಥಾನ,ಗುಜರಾತ್​ ಹಾಗೂ ಹರಿಯಾಣದಲ್ಲಿ ಬಿಜೆಪಿ ಅಷ್ಟೊಂದು ಸ್ಥಾನ ಗೆಲ್ಲುವುದಕ್ಕೆ ಹೇಗೆ ಸಾಧ್ಯ. ಜನರು ಇದರ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ. ಆದರೆ ನಾನು ಹೆದರಲ್ಲ ಎಂದರು. 

2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಕೇವಲ 2 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿತ್ತು. ಆದರೆ ಇದೀಗ ಬರೋಬ್ಬರಿ 18 ಕ್ಷೇತ್ರಗಳಲ್ಲಿ ಗೆದ್ದು ತನ್ನ ಅಸ್ತಿತ್ವವನ್ನ ಮತ್ತಷ್ಟು ಭದ್ರವಾಗಿಸಿಕೊಂಡಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.