ETV Bharat / briefs

ಆತನ ಆ ಇನಿಂಗ್ಸ್​ ನನ್ನ ಕ್ರಿಕೆಟ್​ ಜೀವನವನ್ನೇ ಬದಲಿಸಿತು... ರಾಹುಲ್​ಗೆ​ ಸ್ಪೂರ್ತಿಯಾದ ಆಟಗಾರ ಯಾರು ಗೊತ್ತಾ?

2008 ರ ಮೊದಲ ಆವೃತ್ತಿಯ ಮೊದಲ ಪಂದ್ಯದಲ್ಲಿ ಬ್ರೆಂಡಮ್​ ಮೆಕಲಮ್​ ಆರ್​ಸಿಬಿ ಬೌಲರ್​ಗಳನ್ನು ಮನಬಂದಂತೆ ಥಳಿಸಿದ್ದರು. ಕೇವಲ 73 ಎಸೆತಗಳಲ್ಲಿ ಬರೋಬ್ಬರಿ 158 ರನ್​ಗಳನ್ನು ಸೂರೆಗೈದಿದ್ದರು. 13 ಸಿಕ್ಸರ್​ ಹಾಗೂ 10 ಬೌಂಡರಿ ಸಿಡಿಸಿದ್ದರು. ಈ ಪಂದ್ಯದಲ್ಲಿ ಕೋಲ್ಕತ್ತಾ 20 ಓವರ್​ಗಳಲ್ಲಿ 223 ರನ್​ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಆರ್​ಸಿಬಿ 82 ರನ್​ಗಳಿಗೆ ಆಲೌಟ್​ ಆಗುವ ಮೂಲಕ 140 ರನ್​ಗಳ ಹೀನಾಯ ಸೋಲನುಭವಿಸಿತ್ತು.

kl-rahul
author img

By

Published : Mar 20, 2019, 2:28 PM IST

ಮುಂಬೈ: ಐಪಿಎಲ್​ನ ಆವೃತ್ತಿಯಲ್ಲಿ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ನ ಬ್ರೆಂಡನ್​ ಮೆಕಲಮ್​ ಆರ್​ಸಿಬಿ ವಿರುದ್ಧ ಬಾರಿಸಿದ ಸ್ಫೋಟಕ ಶತಕವೇ(158) ನನ್ನ ಕ್ರಿಕೆಟ್​ ಜೀವನಕ್ಕೆ ದಾರಿ ಮಾಡಿಕೊಟ್ಟಿತು ಎಂದು ಕನ್ನಡಿಗ ಕೆ.ಎಲ್​.ರಾಹುಲ್​ ತಿಳಿಸಿದ್ದಾರೆ.

2008 ರ ಮೊದಲ ಆವೃತ್ತಿಯ ಮೊದಲ ಪಂದ್ಯದಲ್ಲಿ ಬ್ರೆಂಡಮ್​ ಮೆಕಲಮ್​ ಆರ್​ಸಿಬಿ ಬೌಲರ್​ಗಳನ್ನು ಮನಬಂದಂತೆ ಥಳಿಸಿದ್ದರು. ಕೇವಲ 73 ಎಸೆತಗಳಲ್ಲಿ ಬರೋಬ್ಬರಿ 158 ರನ್​ಗಳನ್ನು ಸೂರೆಗೈದಿದ್ದರು. 13 ಸಿಕ್ಸರ್​ ಹಾಗೂ 10 ಬೌಂಡರಿ ಸಿಡಿಸಿದ್ದರು. ಈ ಪಂದ್ಯದಲ್ಲಿ ಕೋಲ್ಕತ್ತಾ 20 ಓವರ್​ಗಳಲ್ಲಿ 223 ರನ್​ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಆರ್​ಸಿಬಿ 82 ರನ್​ಗಳಿಗೆ ಆಲೌಟ್​ ಆಗುವ ಮೂಲಕ 140 ರನ್​ಗಳ ಹೀನಾಯ ಸೋಲನುಭವಿಸಿತ್ತು.

kl-rahul
ಕನ್ನಡಿಗ ಕೆಎಲ್​ ರಾಹುಲ್​

ಈ ಪಂದ್ಯ ನಡೆಯುವಾಗ ರಾಹುಲ್​ಗೆ 16ರ ಹರೆಯ. ಅಂದು ಮೆಕಲಮ್​ ಆಟ ನೋಡಿದ ರಾಹುಲ್​ ತಮ್ಮ ಭವಿಷ್ಯದ ಕನಸನ್ನು ಅಲ್ಲಿಂದಲೇ ಕಟ್ಟಲು ಶುರು ಮಾಡಿದರಂತೆ. ಅಂದು ಮೆಕಲಮ್​ ಬ್ಯಾಟಿಂಗ್​ ​ ಶೈಲಿಯನ್ನು, ಕೌಶಲ್ಯವನ್ನು ಹಾಗೂ ತಂತ್ರಗಾರಿಕೆಯನ್ನು ನೋಡಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದೆ. ಆ ಆಟ ನೋಡಿದ ಮೇಲೆ ಸಿಕ್ಸರ್, ಸ್ಕೂಪ್​ ಶಾಟ್ ಹಾಗೂ ರಿವರ್ಸ್​ ಸ್ವೀಪ್​​ ಶಾಟ್​ಗಳನ್ನು ಕರಗತ ಮಾಡಿಕೊಳ್ಳಲು ಕಠಿಣ ಅಭ್ಯಾಸ ನಡೆಸಿದೆ ಎಂದು ತಮ್ಮ ಮೊದಲ ಐಪಿಎಲ್​ ಅನುಭವಗಳನ್ನು ರಾಹುಲ್​ ಹಂಚಿಕೊಂಡಿದ್ದಾರೆ.

2013 ರಲ್ಲಿ ಆರ್​ಸಿಬಿಯಲ್ಲಿ ಆಡಿದ ರಾಹುಲ್​ ನಂತರ 2014 - 2015 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಪರ ಆಡಿದ್ದರು. ಆದರೆ, ಈ ಮೂರು ವರ್ಷಗಳಲ್ಲಿ ತುಂಬಾ ಕಷ್ಟಪಟ್ಟಿದ್ದರು​. 2016ರಲ್ಲಿ ಎಸ್​ ಆರ್​ಎಚ್​ನಿಂದ ಆರ್​ಸಿಬಿ ರಾಹುಲ್​ರನ್ನು ಟ್ರಾನ್ಸ್​ಫರ್​ ಮಾಡಲಾಗಿತ್ತು. ಮತ್ತೆ ತವರು ತಂಡವಾದ ಆರ್​ಸಿಬಿಗೆ ಬಂದ ನಂತರ ರಾಹುಲ್,​ ಟಿ-20 ಮಾದರಿಯಲ್ಲಿ ರನ್​ಗಳಿಸುವುದನ್ನು ಕರಗತ ಮಾಡಿಕೊಂಡಿದ್ದರು. ಆ ಸೀಸನ್​ನಲ್ಲಿ 44ರ ಸರಾಸರಿ ಹಾಗೂ146.49ರ ಸ್ಟ್ರೈಕ್​ರೇಟ್​ನಲ್ಲಿ 397 ರನ್​ ಸಿಡಿಸಿದ್ದರು. ಇದರಲ್ಲಿ 4 ಸತತ ಅರ್ಧಶತಕವೂ ಸೇರಿತ್ತು.

2017ರಲ್ಲಿ ಭುಜದ ಗಾಯಕ್ಕೆ ತುತ್ತಾಗಿ ಆ ಸೀಸನ್​ನಿಂದ ಹೊರಗುಳಿದಿದ್ದರು. ನಂತರ 2018ರಲ್ಲಿ ಭಾರಿ ಬೇಡಿಕೆ ಸೃಷ್ಟಿಸಿ 11 ಕೋಟಿಗೆ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಸೇರಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದರು. ಈ ಸೀಸನ್​ನಲ್ಲಿ 659 ರನ್​ ಸಿಡಿಸಿದ ರಾಹುಲ್​ ಎರಡು ಬಾರಿ 90 ಪ್ಲಸ್​ ಸೇರಿದಂತೆ 6 ಅರ್ಧಶತಕ ಸಿಡಿಸಿ ಮೂರನೇ ಗರಿಷ್ಠ ಸ್ಕೋರರ್​ ಆದರು.

ಒಟ್ಟಾರೆ ಟೆಸ್ಟ್​ಗೆ ಸೀಮಿತವಾಗಿದ್ದ ರಾಹುಲ್​ ಇಂದು ಸ್ಫೋಟಕ ಆಟಗಾರನಾಗಲು ಮೆಕಲಮ್​ ಆಟ ಸ್ಪೂರ್ತಿಯಾದರೆ, ಆರ್​ಸಿಬಿ ಆತನನ್ನು ಒಬ್ಬರ ಸ್ಫೋಟಕ ಆಟಗಾರನನ್ನಾಗಿ ತಯಾರು ಮಾಡಿತು ಎಂಬುದನ್ನು ಕೆಎಲ್​ ರಾಹುಲ್​ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ತಮಗೆ ನೆರವಾದ ಕೊಹ್ಲಿ, ಗೇಲ್​ ಹಾಗೂ ಎಬಿ ಡಿ ವಿಲಿಯರ್ಸ್​ ಅವರನ್ನು ಕೂಡ ನೆನೆಪಿಸಿಕೊಂಡು ಧನ್ಯವಾದ ತಿಳಿಸಿದ್ದಾರೆ.

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.