ETV Bharat / briefs

ಹಟ್ಟಿ ಚಿನ್ನದ ಗಣಿಯ ನೌಕರರಿಗೆ ಮೇ 17ರ ವರೆಗೆ ಕರ್ತವ್ಯದಿಂದ ವಿನಾಯ್ತಿ

author img

By

Published : May 12, 2021, 4:36 PM IST

ವಿನಾಯಿತಿ ನೀಡಲಾದ ಈ ಸಂದರ್ಭದಲ್ಲಿ ನೌಕರರು ಕೇಂದ್ರಸ್ಥಾನ ಬಿಟ್ಟು ಹೋಗುವಂತಿಲ್ಲ. ಮನೆಯಲ್ಲಿದ್ದು, ಕೊರೊನಾ ಹರಡದಂತೆ ನಿಯಮಗಳನ್ನು ಪಾಲಿಸಬೇಕು. ಕರ್ತವ್ಯಕ್ಕೆ ಕರೆದಾಗ ಅನಗತ್ಯ ಕಾರಣ ಮುಂದಿಟ್ಟರೆ ಅಂತಹವರನ್ನು ಗೈರು ಹಾಜರಿ ಎಂದು ಪರಿಗಣಿಸಲಾಗುವುದು.

Hattie Gold Mine
Hattie Gold Mine

ಲಿಂಗಸೂಗೂರು(ರಾಯಚೂರು): ಕೋವಿಡ್ ಎರಡನೇ ಅಲೆ ಸೋಂಕು ಹೆಚ್ಚುತ್ತಿರುವ ನಿಮಿತ್ತ ಹಟ್ಟಿ ಚಿನ್ನದ ಗಣಿ ಕಂಪನಿ ನೌಕರರಿಗೆ ಮೇ 11 ರಿಂದ 17ರ ವರೆಗೆ ಕರ್ತವ್ಯದಿಂದ ವಿನಾಯ್ತಿ ನೀಡಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಅವಶ್ಯಕ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲ ನೌಕರರಿಗೆ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ಅವಶ್ಯಕ ನೌಕರರಾದ ಆಸ್ಪತ್ರೆ, ಭದ್ರತಾ, ಎಸ್ಟೇಟ್ ವಿಭಾಗದ ನೌಕರರು ಕೋವಿಡ್ ನಿಯಮಗಳನ್ನು ಪಾಲಿಸಿ ಕೆಲಸ ನಿರ್ವಹಿಸಬೇಕು. ಅವಶ್ಯಕ ಎಂದು ಕಂಡುಬಂದಲ್ಲಿ ಆಯಾ ವಿಭಾಗದ ಮುಖ್ಯಸ್ಥರು ಕೆಲಸಕ್ಕೆ ಹಾಜರಾಗಬೇಕು.

ವಿನಾಯಿತಿ ನೀಡಲಾದ ಈ ಸಂದರ್ಭದಲ್ಲಿ ನೌಕರರು ಕೇಂದ್ರಸ್ಥಾನ ಬಿಟ್ಟು ಹೋಗುವಂತಿಲ್ಲ. ಮನೆಯಲ್ಲಿದ್ದು ಕೊರೊನಾ ಹರಡದಂತೆ ನಿಯಮಗಳನ್ನು ಪಾಲಿಸಬೇಕು. ಕೇಂದ್ರಸ್ಥಾನ ಬಿಟ್ಟು ಹೋಗುವ ಸಂದರ್ಭ ಬಂದರೆ ಇಲಾಖೆಯ ಮುಖ್ಯಸ್ಥರ ಅನುಮತಿ ಪಡೆದು ತೆರಳಬೇಕು. ಒಂದು ವೇಳೆ ಮಾಹಿತಿ ನೀಡದೇ ತೆರಳಿದ ವಿಷಯ ಗಮನಕ್ಕೆ ಬಂದರೆ ಅಥವಾ ಕರ್ತವ್ಯಕ್ಕೆ ಕರೆದಾಗ ಅನಗತ್ಯ ಕಾರಣ ಮುಂದಿಟ್ಟರೆ ಅಂಥವರನ್ನು ಗೈರು ಹಾಜರಿ ಎಂದು ಪರಿಗಣಿಸಲಾಗುವುದೆಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.