ETV Bharat / briefs

ಬರಿದಾದ ಜಿಲ್ಲೆಯ ಜೀವನದಿ... ನದಿ ಪಾತ್ರದ ರೈತರು ಕಂಗಾಲು - undefined

ಕಾವೇರಿಯ ಉಪನದಿಗಳಲ್ಲಿ ಒಂದಾದ ಹೇಮಾವತಿ ನದಿಗೆ ಅಡ್ಡಲಾಗಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಜಲಾಶಯ ನಿರ್ಮಿಸಲಾಗಿದೆ. ಪ್ರತಿ ವರ್ಷದಂತೆ ಈ ವೇಳೆಗೆ 17-20 ಟಿಎಂಸಿ ನೀರು ಸಂಗ್ರಹಣೆಯಾಗಬೇಕಾಗಿತ್ತು. ಆದರೆ, ಈ ಬಾರಿ ಬರಗಾಲದಿಂದಾಗಿ ಕೇವಲ 10 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ.

ಬರಿದಾದ ಹಾಸನ ಜಿಲ್ಲೆಯ ಜೀವನದಿಯ ಒಡಲು..
author img

By

Published : Jul 15, 2019, 2:36 AM IST

ಹಾಸನ: ಸರಿಯಾದ ಸಮಯಕ್ಕೆ ಮಳೆ ಬಾರದೆ, ಜಿಲ್ಲೆಯ ಜೀವನದಿಯ ಒಡಲು ಬರಿದಾಗಿದೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ವರುಣ ಕೈ ಕೊಟ್ಟಿದ್ರಿಂದ ಜಿಲ್ಲೆಯ ಜನ ಚಿಂತೆಗೀಡಾಗಿದ್ದಾರೆ.

ಜಲಾಶಯದ ಕುರಿತು ಮಾಹಿತಿ :

  • ಜಲಾಶಯದ ಒಟ್ಟು ನೀರಿನ ಮಟ್ಟ 37.103 ಟಿಎಂಸಿ
  • ಇಂದು ಶೇಖರಣೆಯಾಗಿರುವ ನೀರಿನ ಸಂಗ್ರಹ 12.21 ಟಿಎಂಸಿ
  • ಜಲಾಶಯ ನಂಬಿರುವ ರೈತರಿಗೆ ವಾರ್ಷಿಕವಾಗಿ ಬೇಕಾಗಿರುವ ನೀರಿನ ಪ್ರಮಾಣ 58 ಟಿಎಂಸಿ
  • ಜೂನ್ 1 ರಿಂದ ಇಲ್ಲಿಯ ತನಕ 7.5 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ
  • ನದಿ ಮೂಲಕ ಪ್ರತಿನಿತ್ಯ 200ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ

ಜಲಾಶಯದ ನೀರು ಉಪಯೋಗದ ವಿವರ :

  • ಕಾಲುವೆಗಳ ಮೂಲಕ ನೀರಾವರಿಗೆ 43.67 ಟಿಎಂಸಿ ನೀರು ಬೇಕಾಗುತ್ತೆ
  • ಮೈಸೂರು ಮಹಾರಾಜರು ಕಟ್ಟಿಸಿದ್ದ ಶ್ರೀ ರಾಮ ದೇವರ ಅಣೆಕಟ್ಟೆಗೆ 5 ಟಿಎಂಸಿ ನೀರು
  • ಮಂದಗೆರೆ ಅಣೆಕಟ್ಟೆಗೆ 3.13 ಟಿಎಂಸಿ ನೀರು
  • ಏತ ನೀರಾವರಿ ಯೋಜನೆಗಳಾದ ಅಡಿಕೆಬೊಮ್ಮನಹಳ್ಳಿ, ಕಾಮಸಮುದ್ರ, ಹುಚ್ಚನಕೊಪ್ಪಲು, ಹಳ್ಳಿಮೈಸೂರು, ಕಾಚೇನಹಳ್ಳಿ, ಬಾಗೂರು-ನವಿಲೆಗೆ 3 ಟಿಎಂಸಿ ನೀರು
    ಬರಿದಾದ ಹಾಸನ ಜಿಲ್ಲೆಯ ಜೀವನದಿಯ ಒಡಲು..

ಸಕಾಲಕ್ಕೆ ನಾಲೆಗಳಲ್ಲಿ ನೀರು ಬಾರದೆ, ಬೆಳೆ ಬೆಳಲಾಗದೆ ಕಷ್ಟ ಎದುರಿಸುತ್ತಿದ್ದಾರೆ ಇಲ್ಲಿನ ರೈತರು. ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಸಕಾಲಕ್ಕೆ ಮಳೆಯಾದ್ರೆ ಮಾತ್ರ ಜಲಾಶಯ ಭರ್ತಿಯಾಗಲು ಸಾಧ್ಯ. ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ, ಅಷ್ಟೆಯಲ್ಲದೇ ಮಲೆನಾಡ ಪ್ರದೇಶವಾದ ಸಕಲೇಶಪುರದಲ್ಲಿಯೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಕುಡಿಯುವ ನೀರಿಗಾಗಿ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಸದ್ಯ ವರುಣನ ಕೃಪೆಯಿಂದ ಕುಡಿಯುವ ನೀರಿಗೆ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ಹಾಸನ: ಸರಿಯಾದ ಸಮಯಕ್ಕೆ ಮಳೆ ಬಾರದೆ, ಜಿಲ್ಲೆಯ ಜೀವನದಿಯ ಒಡಲು ಬರಿದಾಗಿದೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ವರುಣ ಕೈ ಕೊಟ್ಟಿದ್ರಿಂದ ಜಿಲ್ಲೆಯ ಜನ ಚಿಂತೆಗೀಡಾಗಿದ್ದಾರೆ.

ಜಲಾಶಯದ ಕುರಿತು ಮಾಹಿತಿ :

  • ಜಲಾಶಯದ ಒಟ್ಟು ನೀರಿನ ಮಟ್ಟ 37.103 ಟಿಎಂಸಿ
  • ಇಂದು ಶೇಖರಣೆಯಾಗಿರುವ ನೀರಿನ ಸಂಗ್ರಹ 12.21 ಟಿಎಂಸಿ
  • ಜಲಾಶಯ ನಂಬಿರುವ ರೈತರಿಗೆ ವಾರ್ಷಿಕವಾಗಿ ಬೇಕಾಗಿರುವ ನೀರಿನ ಪ್ರಮಾಣ 58 ಟಿಎಂಸಿ
  • ಜೂನ್ 1 ರಿಂದ ಇಲ್ಲಿಯ ತನಕ 7.5 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ
  • ನದಿ ಮೂಲಕ ಪ್ರತಿನಿತ್ಯ 200ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ

ಜಲಾಶಯದ ನೀರು ಉಪಯೋಗದ ವಿವರ :

  • ಕಾಲುವೆಗಳ ಮೂಲಕ ನೀರಾವರಿಗೆ 43.67 ಟಿಎಂಸಿ ನೀರು ಬೇಕಾಗುತ್ತೆ
  • ಮೈಸೂರು ಮಹಾರಾಜರು ಕಟ್ಟಿಸಿದ್ದ ಶ್ರೀ ರಾಮ ದೇವರ ಅಣೆಕಟ್ಟೆಗೆ 5 ಟಿಎಂಸಿ ನೀರು
  • ಮಂದಗೆರೆ ಅಣೆಕಟ್ಟೆಗೆ 3.13 ಟಿಎಂಸಿ ನೀರು
  • ಏತ ನೀರಾವರಿ ಯೋಜನೆಗಳಾದ ಅಡಿಕೆಬೊಮ್ಮನಹಳ್ಳಿ, ಕಾಮಸಮುದ್ರ, ಹುಚ್ಚನಕೊಪ್ಪಲು, ಹಳ್ಳಿಮೈಸೂರು, ಕಾಚೇನಹಳ್ಳಿ, ಬಾಗೂರು-ನವಿಲೆಗೆ 3 ಟಿಎಂಸಿ ನೀರು
    ಬರಿದಾದ ಹಾಸನ ಜಿಲ್ಲೆಯ ಜೀವನದಿಯ ಒಡಲು..

ಸಕಾಲಕ್ಕೆ ನಾಲೆಗಳಲ್ಲಿ ನೀರು ಬಾರದೆ, ಬೆಳೆ ಬೆಳಲಾಗದೆ ಕಷ್ಟ ಎದುರಿಸುತ್ತಿದ್ದಾರೆ ಇಲ್ಲಿನ ರೈತರು. ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಸಕಾಲಕ್ಕೆ ಮಳೆಯಾದ್ರೆ ಮಾತ್ರ ಜಲಾಶಯ ಭರ್ತಿಯಾಗಲು ಸಾಧ್ಯ. ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ, ಅಷ್ಟೆಯಲ್ಲದೇ ಮಲೆನಾಡ ಪ್ರದೇಶವಾದ ಸಕಲೇಶಪುರದಲ್ಲಿಯೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಕುಡಿಯುವ ನೀರಿಗಾಗಿ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ ಸದ್ಯ ವರುಣನ ಕೃಪೆಯಿಂದ ಕುಡಿಯುವ ನೀರಿಗೆ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

Intro:
= = = ಸ್ಪೇಷಲ್ ಪ್ಯಾಕೇಜ್ = = =

ಬಹುಶಃ ಈ ದೃಶ್ಯಗಳನ್ನ ನೋಡಿದ್ರೆ ನಿಮಗೆ ಅನಿಸುತ್ತೆ. ಬರದ ಬೀಕರತೆ ಎಷ್ಟಿದೆ ಎಂಬುದು ತಿಳಿಯುತ್ತೆ. ಸರಿಯಾದ ಮಳೆ ಬಾರದ ಹಿನ್ನಲೆಯಲ್ಲಿ ಜಿಲ್ಲೆಯ ಜೀವನದಿಯ ಒಡಲು ಕೂಡಾ ಬರಿದಾಗಿದೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ವರುಣ ಕೈ ಕೊಟ್ಟಿದ್ರಿಂದ ಜಿಲ್ಲೆಯ ಜನ ಚಿಂತೆಗೀಡಾಗಿದ್ದಾನೆ. ಹಾಗಿದ್ರೆ ಯಾವುದೀ ಜಲಾಶಯ, ಸದ್ಯ ಇಲ್ಲಿರುವ ನೀರಿನ ಪ್ರಮಾಣವಾದ್ರು ಎಷ್ಟು ಎಂಬುದಕ್ಕೆ ಇಲ್ಲಿದೆ ನೋಡಿ ಒಂದು ರೀಪೊರ್ಟ...

ಕಾವೇರಿಯ ಉಪನದಿಗಳಲ್ಲಿ ಒಂದು ಈ ಹೇಮಾವತಿ. ಚಿಕ್ಕಮಗಳೂರಿನ ಜಾವಳಿ ಎಂಬ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಹುಟ್ಟುವ ನದಿ ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೆ.ಆರ್.ಎಸ್. ಹಿನ್ನಿರಿನ ಕಾವೇರಿ ನದಿಯನ್ನು ಸೇರುತ್ತೆ. ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಈ ನದಿಯು ಸುಮಾರು 245 ಕಿ.ಮೀ ಉದ್ದ ಹಾಗು 5140 ಕಿ.ಮೀ ಕಾಲುವೆ ಪ್ರದೇಶವನ್ನು ಒಳಗೊಡಿದೆ. ಅಣೆಕಟ್ಟೆಯನ್ನ ನಿರ್ಮಿಸುವ ಭರದಲ್ಲಿ ಶೆಟ್ಟಿಹಳ್ಳಿಯ ರೋಸರಿ ಚರ್ಚ್ ಪೂರ್ತಿಯಾಗಿ ಮುಚ್ಚಿಹೋಯ್ತು. ಸದ್ಯ ಆ ಚರ್ಚ್ನ ಅವಶೇಷಗಳನ್ನ ನಾವು ಬೇಸಿಗೆಯ ಸಂದರ್ಭದಲ್ಲಿ ನೋಡಬಹುದಾಗಿದೆ.

5 ಬಾರಿ ಆವರಿಸಿದ ಭೀಕರ ಬರಗಾಲ:

ಕಾವೇರಿಯ ಉಪನದಿಗಳಲ್ಲಿ ಒಂದು ಈ ಹೇಮಾವತಿ. ಅಣೆಕಟ್ಟು ನಿರ್ಮಾಣದ ಬಳಿಕ 4 ಬಾರಿ ಜಲಕ್ಷಾಮ ಎದುರಾಗಿದೆ. 1987, 2003, 2005, ಹಾಗೂ 2017ರಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಇದಾದ ಬಳಿಕ ಈವರ್ಷ ಮತ್ತೆ ಜಲಾಶಯ ಜಲಕ್ಷಾಮವನ್ನ ಎದುರಿಸುವ ಪರಿಸ್ಥಿತಿಯಲ್ಲಿದೆ. ಪ್ರತಿವರ್ಷದಂತೆ ಇಷ್ಟೊತ್ತಿಗಾಗಲೇ 17-20 ಟಿಎಂಸಿ ನೀರು ಸಂಗ್ರಹಣೆಯಾಗಬೇಕಾಗಿತ್ತು. ಆದ್ರೆ ಈ ಬಾರಿ ಕೇವಲ ಕೇವಲ ಜಲಾಶಯಕ್ಕೆ 10 ಟಿ.ಎಂ.ಸಿ. ನೀರು ಬಂದಿದ್ದು, ಡೆಡ್ ಸ್ಟೋರೆಜ್ ಸೇರಿ ಜಲಾಶಯದಲ್ಲಿ 12.21 ಟಿ.ಎಂ.ಸಿ.ನೀರಿದೆ. ಜಲಾಶಯದಲ್ಲಿ 6 ಕ್ರಸ್ಟ್ ಗೇಟ್ ಗಳಿಗೂ ನಿಲುಕದಂತೆ ನೀರು ಕೆಳಗೆ ಇಳಿದು ಹೋಗಿದೆ. ಹೀಗಾಗಿ ನದಿಪಾತ್ರವನ್ನ ನಂಬಿರುವ ರೈತರ ಪಾಡು ಹೇಳತೀರದಾಗಿದೆ. ಹಾಸನವೇ ಇಂದು ಕುಡಿಯುವ ನೀರಿಗೆ ಪರಿತಪಿಸುತ್ತಿದೆ. ಇನ್ನು ತಮಿಳುನಾಡಿಗೆ ಬಿಡುವುದಾದ್ರು ಹೇಗೆ ಹೇಳಿ.

ಬೈಟ್: ಸಲೀಂ, ಹೇಮಾವತಿ ಉಳಿಸಿ ಸಮಿತಿಯ ಹೋರಾಟಗಾರ.

ಜಲಾಶಯದ ಕೆಲ ಮಾಹಿತಿಯನ್ನ ನೋಡೋದಾದ್ರೆ.

•         ಜಲಾಶಯದ ಒಟ್ಟು ನೀರಿನ ಮಟ್ಟ 37.103 ಟಿಎಂ.ಸಿ.
•         ಇಂದು ಶೇಖರಣೆಯಾಗಿರುವ ನೀರಿನ ಸಂಗ್ರಹ 12.21 ಟಿ.ಎಂ.ಸಿ.
•         ಜಲಾಶಯ ನಂಬಿರುವ ರೈತರಿಗೆ ವಾರ್ಷಿಕವಾಗಿ ಬೇಕಾಗಿರುವ ನೀರಿನ ಪ್ರಮಾಣ 58 ಟಿಎಂಸಿ.
•         ನೀರು ಹರಿಯುವಾಗ ನಾಲೆಗಳಿಂದ ನೀರು ಕದಿಯುವ ಬಲಾಡ್ಯರಿಗೇನು ಕಮ್ಮಿಯಿಲ್ಲ.
•         ಜಲಾಶಯದ ಒಳಭಾಗದಲ್ಲಿ ದನ- ಕರುಗಳು ಮೇವಿಗಾಗಿ ಪರದಾಡುತ್ತಿವೆ.
•         ಕಳೆದ 13 ವರ್ಷಗಳಲ್ಲಿ 8 ವರ್ಷ ಹೇಮಾವತಿ ಜಲಾಶಯ ತುಂಬಿಲ್ಲ.
•         ಜೂನ್ 1 ರಿಂದ ಇಲ್ಲಿಯ ತನಕ 7.5 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ.
•         ನದಿ ಮೂಲಕ ಪ್ರತಿನಿತ್ಯ 200ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ.
         
ಹೇಮಾವತಿಯ ಜಲಾಶಯವನ್ನ ಕಟ್ಟಿ ಸದ್ಯ ನಾಲ್ಕುವರೆ ದಶಕಗಳೇ ಕಳೆದಿದೆ. ಆ ಸಂದರ್ಭದಲ್ಲಿ ನೂರಾರು ಗ್ರಾಮಗಳು ಮುಳುಗಡೆಯಾಗಿದ್ರಿಂದ 37.103 ಸಾಮಾರ್ಥ್ಯದ ನೀರು ಸಂಗ್ರಹ ಮಾಡೋ ಹೇಮಾವತಿ ಜಲಾಶಯ ಲೋಕಾರ್ಪಣೆಯಾಯ್ತು. ಹೇಮಾವತಿ ಜಲಾಶಯ ಒಟ್ಟು 6.55 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿದೆ. ಇನ್ನು ಹಾಸನ ನಗರಕ್ಕೆ ಪ್ರತಿವರ್ಷ ಕುಡಿಯುವ ನೀರಿಗಾಗಿ 4 ಟಿ.ಎಂ.ಸಿ.ನೀರು ಬೇಕಾಗುತ್ತದೆ. ಇಷ್ಟೆಯಲ್ಲದೇ ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕೂಡಾ ಕುಡಿಯುವ ನೀರಿಗಾಗಿ ಜಲಾಶಯವನ್ನ ನಂಬಿಕೊಂಡಿವೆ.

1979 ರಿಂದ 2019ರ ತನಕ 5 ಬಾರಿ ಬೀಕರ ಬರಗಾಲದಿಂದ ಜಲಾಶಯ ತತ್ತರಿಸಿದ್ರೆ, ಉಳಿದಂತೆ ಡ್ಯಾಂಗೆ ನೀರು ಬಂದ್ರು ಕ್ರೆಸ್ಟ್ ಗೇಟ್ ಮೂಲಕ ನೀರು ಹರಿಯಲಿಲ್ಲ. ಕಾರಣ ಭರ್ತಿಯಾಗದ ಜಲಾಶಯ. ಯಾವ್ಯಾವ ವರ್ಷ ಜಲಾಶಯ ತುಂಬಿಲ್ಲ ಎಂಬುದನ್ನ ನೋಡುವುದಾದ್ರೆ, 1987, 2001, 2002, 2003, 2004, 2005, 2016, ಹಾಗೂ 2017, ಮತ್ತು ಈ ಬಾರಿಯೂ ಜಲಾಶಯ ತುಂಬದೇ ಖಾಲಿ ಖಾಲಿಯಾಗಿದೆ. ಒಳಹರಿವು ಕಡಿಮೆಯಾದಂತೆ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಜಲಾಶಯದಿಂದ ಸರಬರಾಜ ಅಗುವ ಕುಡಿಯುವ ನೀರನ್ನು ನಂಬಿರುವ ಪಟ್ಟಣ ಮತ್ತು ನಗರ ಪ್ರದೇಶಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ವರ್ಷಗಳಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಸಕಾಲಕ್ಕೆ ನಾಲೆಗಳಲ್ಲಿ ನೀರು ಬರದೇ, ಬೆಳೆ ಬೆಳಲಾಗದೆ ಕಷ್ಟ ಎದುರಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ, ಚಿಕ್ಕಮಗಳೂರಿನ ಮೂಡಿಗೆರೆ ಭಾಗದಲ್ಲಿ ಸಕಾಲಕ್ಕೆ ಮಳೆಯಾದ್ರೆ ಮಾತ್ರ ಜಲಾಶಯ ಭರ್ತಿಯಾಗಲು ಸಾಧ್ಯ.

ಜಿಲ್ಲೆಯಲ್ಲಿ ಗುಡುಕು ನೀರಿಗೂ ಪ್ರಾಣಿ, ಪಕ್ಷಿಗಳು, ಜಾನುವಾರುಗಳು, ಜಲಚರಗಳು ಅಷ್ಟೆಯಲ್ಲದೇ ಜಿಲ್ಲೆಯ ಜನ ಕೂಡಾ ಪರಿತಪಿಸುತ್ತಿದ್ದಾನೆ. ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ, ಅಷ್ಟೆಯಲ್ಲದೇ ಮಲೆನಾಡ ಪ್ರದೇಶವಾದ ಸಕಲೇಶಪುರದಲ್ಲಿಯೂ ಟ್ಯಾಂಕರ್ ಮೂಲಕ ನೀರನ್ನ ಪೂರೈಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದ್ರೆ ಸದ್ಯ ವರುಣ ಅಲ್ಪ ಪ್ರಮಾಣದಲ್ಲಿ ಧರೆಗಿಳಿದ್ರಿಂದ ಕುಡಿಯುವ ನೀರಿಗೆ ಕೊಂಚ ಮಟ್ಟಿಗೆ ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ. ಆದ್ರೆ ರೈತರು ತಲೆಯ ಮೇಲೊಂದು ಟವಲ್ ಹಾಕ್ಕೊಂಡು ಆಕಾಶ ನೋಡುವ ಪರಿಸ್ಥಿತಿ ಮಾತ್ರ ಮುಂದುವರೆದಿದೆ.

ಜಲಾಶಯದ ನೀರು ಉಪಯೋಗದ ವಿವರ ಇಂತಿದೆ.
•         ಕಾಲುವೆಗಳ ಮೂಲಕ ನೀರಾವರಿಗೆ 43.67 ಟಿಎಂಸಿ ನೀರು ಬೇಕಾಗುತ್ತೆ.
•         ಮೈಸೂರು ಮಹಾರಾಜರು ಕಟ್ಟಿಸಿದ್ದ ಶ್ರೀ ರಾಮ ದೇವರ ಅಣೆಕಟ್ಟೆಗೆ 5 ಟಿಎಂಸಿ. ನೀರು.
•         ಮಂದಗೆರೆ ಅಣೆಕಟ್ಟೆಗೆ 3.13 ಟಿಎಂಸಿ ನೀರು,
•         ಏತ ನೀರಾವರಿ ಯೋಜನೆಗಳಾದ ಅಡಿಕೆಬೊಮ್ಮನಹಳ್ಳಿ, ಕಾಮಸಮುದ್ರ, ಹುಚ್ಚನಕೊಪ್ಪಲು, ಹಳ್ಳಿಮೈಸೂರು,          ಕಾಚೇನಹಳ್ಳಿ, ಬಾಗೂರು-ನವಿಲೆಗೆ 3 ಟಿಎಂಸಿ ನೀರು.

ಸಕಾಲಕ್ಕೆ ಮಳೆ ಬರದೇ ಸಮಸ್ಯೆ ಆದ್ರೆ ಈ ಎಲ್ಲಾ ಯೋಜನೆಗಳಗೂ ಸದ್ಯದ ನೀರಿನ ಲಭ್ಯತೆ ಆದರಿಸಿ ಸಮ ಪ್ರಮಾಣದಲ್ಲಿ ನೀರು ಹರಿಸಲಾಗುತ್ತದೆ. ನಾಲೆಗಳ ಮೂಲಕ ನೀರು ಹರಿಯುವಾಗ ಬಲಾಡ್ಯ ರೈತರು ನಾಲೆಗಳಿಗೆ ಪಂಪ್ ಸೆಟ್ ಹಾಕಿ ತಮಗೆ ಬೇಕಾದಷ್ಟು ನೀರು ಕದಿಯುತ್ತಾರೆ. ಇವರಲ್ಲಿ ರಾಜಕೀಯ ಪಕ್ಷಗಳ ಪುಡಾರಿಗಳೇ ಹೆಚ್ಚು.

ಅಣೆಕಟ್ಟೆಯಲ್ಲಿ ಈಗ ಇರುವ ನೀರಿನ ಪ್ರಮಾಣ, 12.21 ಟಿಎಂಸಿ. ಇದರಲ್ಲಿ ಬಳಕೆಗೆ ಸಿಗುವುದು ಕೇವಲ 3.5ಟಿಎಂಸಿ ನೀರು ಮಾತ್ರ. ಈ ಜಲಾಶಯ ತುಂಬಿದ್ರೆ, ಹಾಸನ ಮಂಡ್ಯ, ತುಮಕೂರು, ಮೈಸೂರು ಜಿಲ್ಲೆಗಳ ಹಲವು ತಾಲ್ಲೂಕುಗಳಿಗೆ ರೈತರು ಬೆಳೆದಿರುವ ಭತ್ತ, ಕಬ್ಬು, ಜೋಳ ಇತ್ಯಾದಿ ಬೆಲೆಗಳಿಗೆ ನೀರು ಕೊಡಬೇಕು. *ಡ್ಯಾಂ ನಲ್ಲಿ ನೀರಿಲ್ಲದಿದ್ದರೂ ಕೂಡಾ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯ ಜಿ.ಎಸ್.ಬಸವರಾಜು ಜಲಾಶಯವನ್ನ ವೀಕ್ಷಣೆ ಮಾಡದೇ, ಬಾಗೂರು-ನವಿಲೆ ಸುರಂಗ ಪಾತ್ರಕ್ಕೆ ಬೇಟಿ ನೀಡಿ ನೀರಿನ ಬಗ್ಗೆ ರಾಜಕೀಯವಾಗಿ ಮಾತನಾಡಿದ್ದು, ಜಿಲ್ಲೆಯ ಜನರಿಗೆ ಬೇಸರ ಉಂಟುಮಾಡಿದೆ. ಅಲ್ಲದೆ ನದಿ ಪಾತ್ರಕ್ಕೆ ನೀರು ಬಿಡಬೇಕು ಮತ್ತು ಹಲವು ನಗರಗಳಿಗೆ ಕುಡಿಯುವ ನೀರು ಕೊಡಬೇಕು. ಇಲ್ಲವಾದ್ರೆ ನಾವು ತಮಿಳುನಾಡಿನ ರೀತಿಯಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇವೆ ಎಂದು ಹೇಳುವ ಮೊದಲು ವಾಸ್ತವಾಂಶವನ್ನ ಪರಿಶೀಲಿಸಬೇಕಿತ್ತು ಎಂಬುದು ಸಂಘಟನೆಗಳ ಒತ್ತಾಯ*.

ಬೈಟ್: ಸಲೀಂ, ಹೇಮಾವತಿ ಉಳಿಸಿ ಸಮಿತಿಯ ಹೋರಾಟಗಾರ.

ನೀರಿನ ಒಳಹರಿವು ಬಹುತೇಕ ಕಡಿಮೆಯಾಗಿದ್ದು, ಕೇವಲ 2030 ಕ್ಯೂಸೆಕ್ ಮಾತ್ರ ಬರುತ್ತಿದ್ದು, ಇನ್ನು ನದಿಗೆ 200ಕ್ಯೂಸೆಕ್ ಬಿಡಲಾಗಿದ್ದು, ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡದ ಸ್ಥಿತಿ ನಿರ್ಮಾಣವಾಗಿದೆ. ಹಾಸನ ನಗರಕ್ಕೆ 3 ದಿನಗಳಿಗೊಮ್ಮೆ ಕುಡಿಯುವ ನೀರು ಬಿಡುವ ಪರಿಸ್ಥಿತಿ ಇದ್ದು, ಕೆಲವೇ ದಿನದಲ್ಲಿ ಅದು ಬಂದಾಗಬಹುದು.

ಒಟ್ಟಾರೆ ಈ ಬಾರಿಯೂ ವರುಣ ಅಣೆಕಟ್ಟೆಗೆ ಬಾರದೇ ಮರೆಯಾಗಿದ್ದಾನೆ. ರೈತ ಕಂಗಾಲಾಗುವುದರ ಜೊತೆಗೆ ಚಿಂತಾಕ್ರಾಂತನಾಗಿದ್ದಾನೆ. ಭಿತ್ತಿದ ಬೆಳೆ ಮೊಳಕೆಯಲ್ಲಿಯೇ ಕಮರುತ್ತಿದೆ. ಹಿಂಗಾರು ಮಳೆಯೂ ಇಲ್ಲಾ... ಮುಂಗಾರು ಮಳೆಯೂ ಇಲ್ಲದೇ ಕೃಷಿ ಚಟುವಟಿಕೆ ಕೃಷಿ ಮಾಡಿರೋ ರೈತನ ಪಾಡು ಹೇಳತೀರದಾಗಿದೆ. ಸದ್ಯ ಅಲ್ಪಾವಧಿ ಸಾಲ ಮನ್ನಾ ಮಾಡಿರೋ ಸರ್ಕಾರದಿಂದ ಜನ ಕೊಂಚ ನಿರಾಳವಾಗಿದ್ದಾರೆ. ಆದ್ರೆ ಸಾಲ ಮನ್ನವೇ ಎಲ್ಲದ್ದಕ್ಕೂ ಪರಿಹಾರವಲ್ಲ. ವರುಣನ ಕೃಪೆಯಿಂದ ಮಾತ್ರ ಪರಿಹಾರ ಸಾಧ್ಯ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ಭಾರತ, ಹಾಸನ.


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.