ಗುಂಡ್ಲುಪೇಟೆ(ಚಾಮರಾಜನಗರ): ಹೋಂ ಕ್ವಾರಂಟೈನ್ ಸೀಲ್ ಹಾಕಿದ್ದರೂ ಇಬ್ಬರು ಶಂಕಿತರು ಕೆಎಸ್ಆರ್ ಟಿಸಿ ಬಸ್ನಲ್ಲಿ ಪ್ರಯಾಣಿಸುವ ಮೂಲಕ ಜನರಿಗೆ ಭೀತಿ ಹುಟ್ಟಿಸಿದ್ದಾರೆ.
ವೈನಾಡಿಗೆ ಉದ್ಯೋಗಕ್ಕಾಗಿ ಹೋಗಿ ಮರಳಿದ್ದ ಕೌದಹಳ್ಳಿ ಗ್ರಾಮದ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಹೋಂ ಕ್ವಾರಂಟೈನ್ ಸೀಲ್ ಹಾಕಿದ್ದರೂ ಕೂಡ 25 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ನಲ್ಲಿ ಚಾಮರಾಜನರಕ್ಕೆ ಪ್ರಯಾಣಿಸುತ್ತಿದ್ದರು.
ಇದನ್ನು ಗಮನಿಸಿದ ನಿರ್ವಾಹಕ ಅವರನ್ನು ಟೆಸ್ಟ್ ಮಾಡಿದರು. ನಂತರ ಆ ಇಬ್ಬರನ್ನು ಬಸ್ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡರು. ಅದೇ ಬಸ್ ನಲ್ಲಿ ಸಂಚರಿಸುತ್ತಿದ್ದ ಸಾಮಾಜಿಕ ಹೋರಾಟಗಾರ ನಗರ್ಲೆ ಎಂ. ವಿಜಯಕುಮಾರ್ ದೂರವಾಣಿ ಕರೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಹಿನ್ನೆಲೆ ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ವ್ಯವಸ್ಥೆ ಮಾಡಿ ಚಾಮರಾಜನಗರಕ್ಕೆ ಕಳುಹಿಸಲಾಯಿತು. ನಂತರ ಇಬ್ಬರು ಶಂಕಿತರನ್ನು ತಾಲೂಕು ಆಸ್ಪತ್ರೆಗೆ ಕಳುಹಿಸಲಾಯಿತು. ಚಿಕಿತ್ಸೆಗೆ ಒಳಪಡಿಸಿ ಖಾಸಗಿ ವಾಹನದಲ್ಲಿ ಕೌದಹಳ್ಳಿ ಗ್ರಾಮದ ಅವರ ಮನೆಗೆ ಕ್ವಾರಂಟೈನ್ ಗಾಗಿ ಕಳುಹಿಸಿದ್ದಾರೆ.
ಹೋಂ ಕ್ವಾರಂಟೈನ್ ಸೀಲ್ ಹಾಕಿದ ಮೇಲೆ ಅವರನ್ನು ಹೇಗೆ ಸಾರ್ವಜನಿಕ ವಾಹನದಲ್ಲಿ ಓಡಾಡಲು ಬಿಟ್ಟಿದ್ದರು. ಇದಕ್ಕೆ ಆರೋಗ್ಯ ಇಲಾಖೆ ಮತ್ತು ಕೆಎಸ್ಆರ್ ಟಿಸಿ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವೆಂದು ಸಾಮಾಜಿಕ ಹೋರಾಟಗಾರ ನಗರ್ಲೆ ವಿಜಯ್ ಕುಮಾರ್ ಆರೋಪಿಸಿದ್ದಾರೆ.
ಕ್ವಾರಂಟೈನ್ ಮಾಡಿದ್ದರೂ ಕೆಎಸ್ಆರ್ಟಿಸಿ ಬಸ್ನಲ್ಲಿ ಇಬ್ಬರು ಪ್ರಯಾಣ: ಆತಂಕದಲ್ಲಿ ಗುಂಡ್ಲುಪೇಟೆ ಜನ - Chamarajanagar Sealed man travel
ಇಬ್ಬರು ಕೊರೊನಾ ಶಂಕಿತರು ಹೋಂ ಕ್ವಾರಂಟೈನ್ ಸೀಲ್ ಹಾಕಿದ್ದರೂ ಕೂಡ ಕೆಎಸ್ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುವ ಮೂಲಕ ಆತಂಕ ಸೃಷ್ಟಿಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.