ETV Bharat / briefs

ಭಾರತೀಯ ರಾಯಭಾರ ಕಚೇರಿಯಲ್ಲಿ ಇಫ್ತಾರ್‌: ಪಾಕ್​​ ಸೇನೆ ತಡೆ,ಪ್ರತೀಕಾರದ ಶಂಕೆ! - ಭದ್ರತಾ ಸಿಬ್ಬಂದಿ

ಭಾರತೀಯ ಹೈಕಮೀಷನರ್​​ ಅಜಯ್ ಬಿಸಾರಿಯಾ ಆಯೋಜನೆ ಮಾಡಿದ್ದ ಈ ಇಫ್ತಾರ್ ಕೂಟಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಧ್ಯಕ್ಷ ಅರಿಫ್​ ಅಲ್ವಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿತ್ತು. ಪಾಕ್ ಪ್ರಧಾನಿ ಹಾಗೂ ಅಧ್ಯಕ್ಷರು ಇಫ್ತಾರ್ ಕೂಟದಲ್ಲಿ ಭಾಗವಹಿಸಿರಲಿಲ್ಲ.

ಇಫ್ತಾರ್ ಕೂಟ
author img

By

Published : Jun 2, 2019, 1:41 PM IST

ಇಸ್ಲಾಮಾಬಾದ್: ರಂಜಾನ್ ಹಬ್ಬದ ಪ್ರಯುಕ್ತ ಶನಿವಾರ ಸಂಜೆ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮೀಷನರ್​​​ ಆಯೋಜನೆ ಮಾಡಿದ್ದ ಇಫ್ತಾರ್ ಕೂಟವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

ಪಾಕಿಸ್ತಾನ ಸೇನಾ ಪಡೆ ಭಾರತೀಯ ರಾಯಭಾರ ಅಧಿಕಾರಿಗಳನ್ನು ಗೇಟ್ ಬಳಿಯೇ ತಡೆದು ಇಫ್ತಾರ್ ಕೂಟಕ್ಕೆ ತೆರಳದಂತೆ ತಡೆಯೊಡ್ಡಿದ್ದಾರೆ. ಇದಲ್ಲದೇ ಪಾಕಿಸ್ತಾನದ ಕೆಲ ಅಧಿಕಾರಿಗಳಿಗೂ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ.

ಭಾರತೀಯ ಹೈಕಮೀಷನರ್​​ ಅಜಯ್ ಬಿಸಾರಿಯಾ ಆಯೋಜನೆ ಮಾಡಿದ್ದ ಈ ಇಫ್ತಾರ್ ಕೂಟಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಧ್ಯಕ್ಷ ಅರಿಫ್​ ಅಲ್ವಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿತ್ತು. ಪಾಕ್ ಪ್ರಧಾನಿ ಹಾಗೂ ಅಧ್ಯಕ್ಷರು ಇಫ್ತಾರ್ ಕೂಟದಲ್ಲಿ ಭಾಗವಹಿಸಿರಲಿಲ್ಲ.

ಇಫ್ತಾರ್​ ಕೂಟದಲ್ಲಿ ಭಾಗವಹಿಸಲು ನಾನು ಬಂದಿದ್ದೆ. ಹೊಟೇಲ್​​ನಲ್ಲಿ ಬ್ಯಾರಿಕೇಡ್ ಹಾಕಿರುವುದನ್ನು ಗಮನಿಸಿದೆ. ಇಫ್ತಾರ್ ಕೂಟ ರದ್ದುಗೊಂಡಿದೆ ಎಂದು ಮಾಹಿತಿ ನೀಡಿದರು. ಮತ್ತೊಂದು ಗೇಟ್ ಮೂಲಕ ಒಳಪ್ರವೇಶಿಸಲು ಹೇಳಿದರು. ಆ ಗೇಟ್ ಬಳಿ ಹೋದಾಗ ಅದು ಮುಚ್ಚಲ್ಪಟ್ಟಿತ್ತು. ಏನಾಗುತ್ತಿದೆ ಎಂದು ನನಗೆ ತಿಳಿಯಲಿಲ್ಲ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕ ಫರ್ಹತುಲ್ಲಾ ಬಾಬರ್​ ಟ್ವೀಟ್ ಮಾಡಿದ್ದಾರೆ.

  • Came to Serena for iftar hosted by Indian HC. Hotel seems barricaded. Told that iftar cancelled. When insisted, I was told to use other gate. Other gate also closed and told to go back to front gate again. What’s going on, something fishy.

    — Farhatullah Babar (@FarhatullahB) June 1, 2019 " class="align-text-top noRightClick twitterSection" data=" ">

ಭಾರತೀಯ ರಾಯಭಾರ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿದ್ದಲ್ಲದೆ ಹೊಟೇಲ್ ಹೊರಭಾಗದಲ್ಲಿ ಹಲ್ಲೆ ಮಾಡಲಾಗಿದೆ. ಭಾರತೀಯ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ಹೊಟೇಲ್​ನಿಂದ ಹೊರ ಕಳುಹಿಸಲಾಯಿತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

  • Indian High Commissioner to Pakistan Ajay Bisaria to ANI: We apologise to all our guests who were aggressively turned away from our Iftar yesterday. Such intimidatory tactics are deeply disappointing (file pic) 1/2 pic.twitter.com/3skZWBa0jq

    — ANI (@ANI) June 2, 2019 " class="align-text-top noRightClick twitterSection" data=" ">

ಕ್ಷಮೆ ಯಾಚಿಸಿದ ಅಜಯ್ ಬಿಸಾರಿಯಾ:

ಇಫ್ತಾರ್ ಕೂಟದಲ್ಲಿ ಉಂಟಾದ ಗೊಂದಲಕ್ಕೆ ಕ್ಷಮೆ ಇರಲಿ. ಭದ್ರತಾ ಸಿಬ್ಬಂದಿಗಳ ಈ ನಡವಳಿಕೆ ತರವಲ್ಲ. ಈ ಘಟನೆಯಿಂದ ಉಭಯ ದೇಶಗಳ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಭಾರತೀಯ ಹೈಕಮೀಷನರ್ ಅಜಯ್ ಬಿಸಾರಿಯಾ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

  • Indian High Commissioner to Pakistan Ajay Bisaria to ANI: They not only violate basic norms of diplomatic conduct and civilized behaviour, they are counter-productive for our bilateral relations. (2/2) https://t.co/P38ualSWDj

ಪ್ರತೀಕಾರ ತೀರಿಸಲಾಯಿತೇ?

ಮೇ 28ರಂದು ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್​​ನಲ್ಲಿ ಇದೇ ಮಾದರಿಯ ಇಫ್ತಾರ್ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಪೊಲೀಸರು ಗಣ್ಯರಿಗೆ ಅವಮಾನ ಮಾಡಿದ್ದರು ಎನ್ನಲಾಗಿದೆ. ಇದನ್ನೇ ಆಧಾರವಾಗಿಸಿ ಶನಿವಾರದ ಇಫ್ತಾರ್ ಕೂಟದಲ್ಲಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆಯೇ? ಎನ್ನುವ ಮಾತುಗಳೂ ಕೇಳಿಬಂದಿವೆ.

ಘಟನೆ ಖಂಡಿಸಿದ ಒಮರ್ ಅಬ್ದುಲ್ಲಾ:

ಶನಿವಾರದ ಘಟನೆಯನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್​ ಅಬ್ದುಲ್ಲಾ, ಮುಯ್ಯಿಗೆ ಮುಯ್ಯಿ ಎನ್ನುವ ಪಾಕ್ ವರ್ತನೆ ಖಂಡನೀಯ ಎಂದಿದ್ದಾರೆ. ಇಂತಹ ಅವಿವೇಕದ ನಡವಳಿಕೆಯನ್ನು ಪಾಕಿಸ್ತಾನ ನಿಲ್ಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

  • Stupid tit for tat diplomacy. It was stupid when we did it outside the Pakistani High Commission in New Delhi & it’s stupid when it’s done outside our’s in Islamabad. Now that it’s 1-1 perhaps it’s time to move on & stop this nonsense. https://t.co/DFFGXoTJkO

    — Omar Abdullah (@OmarAbdullah) June 2, 2019 " class="align-text-top noRightClick twitterSection" data=" ">

Intro:Body:

ಇಫ್ತಾರ್ ಕೂಟದಲ್ಲಿ ಪಾಕ್​​ ಸೇನೆಯಿಂದ ಮೊಂಡಾಟ... ಕೊನೇ ಕ್ಷಣದಲ್ಲಿ ರದ್ದು, ಪ್ರತೀಕಾರದ ಶಂಕೆ...!

ಇಸ್ಲಾಮಾಬಾದ್: ಶನಿವಾರ ಸಂಜೆ ಪಾಕಿಸ್ತಾನದ ಭಾರತೀಯ ಹೈಕಮೀಷನರ್​​​ ಆಯೋಜನೆ ಮಾಡಿದ್ದ ಇಫ್ತಾರ್ ಕೂಟವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

ಪಾಕಿಸ್ತಾನ ಸೇನಾ ಪಡೆ ಭಾರತೀಯ ರಾಯಭಾರ ಅಧಿಕಾರಿಗಳನ್ನು ಗೇಟ್ ಬಳಿಯೇ ತಡೆದು ಇಫ್ತಾರ್ ಕೂಟಕ್ಕೆ ತೆರಳದಂತೆ ಮಾಡಿದ್ದಾರೆ. ಇದಲ್ಲದೆ ಪಾಕಿಸ್ತಾನದ ಕೆಲ ಅಧಿಕಾರಿಗಳಿಗೂ ಭದ್ರತಾ ಸಿಬ್ಬಂದಿಗಳು ಪ್ರವೇಶ ನಿರಾಕರಿಸಿದ್ದಾರೆ.

ಭಾರತೀಯ ಹೈಕಮೀಷನರ್​​ ಅಜಯ್ ಬಿಸಾರಿಯಾ ಆಯೋಜನೆ ಮಾಡಿದ್ದ ಈ ಇಫ್ತಾರ್ ಕೂಟಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಧ್ಯಕ್ಷ ಅರಿಫ್​ ಅಲ್ವಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿತ್ತು. ಪಾಕ್ ಪ್ರಧಾನಿ ಹಾಗೂ ಅಧ್ಯಕ್ಷರು ಇಫ್ತಾರ್ ಕೂಟದಲ್ಲಿ ಭಾಗವಹಿಸಿರಲಿಲ್ಲ.

ಇಫ್ತಾರ್​ ಕೂಟದಲ್ಲಿ ಭಾಗವಹಿಸಲು ನಾನು ಬಂದಿದ್ದೆ. ಹೋಟೆಲ್​​ನಲ್ಲಿ ಬ್ಯಾರಿಕೇಡ್ ಹಾಕಿರುವುದನ್ನು ಗಮನಿಸಿದೆ. ಇಫ್ತಾರ್ ಕೂಟ ರದ್ದುಗೊಂಡಿದೆ ಎಂದು ಮಾಹಿತಿ ನೀಡಿದರು. ಮತ್ತೊಂದು ಗೇಟ್ ಮೂಲಕ ಒಳಪ್ರವೇಶಿಸಲು ಹೇಳಿದರು. ಆ ಗೇಟ್ ಬಳಿ ಹೋದಾಗ ಅದು ಮುಚ್ಚಲ್ಪಟ್ಟಿತ್ತು. ಏನಾಗುತ್ತಿದೆ ಎಂದು ನನಗೆ ತಿಳಿಯಲಿಲ್ಲ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕ ಫರ್ಹತುಲ್ಲಾ ಬಾಬರ್​ ಟ್ವೀಟ್ ಮಾಡಿದ್ದಾರೆ.

ಭಾರತೀಯ ರಾಯಭಾರ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿದ್ದಲ್ಲದೆ ಹೋಟೆಲ್ ಹೊರಭಾಗದಲ್ಲಿ ಹಲ್ಲೆ ಮಾಡಲಾಗಿದೆ. ಭಾರತೀಯ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ಹೋಟೆಲ್​ನಿಂದ ಹೊರ ಕಳುಹಿಸಲಾಯಿತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಕ್ಷಮೆ ಯಾಚಿಸಿದ ಅಜಯ್ ಬಿಸಾರಿಯಾ:

ಇಫ್ತಾರ್ ಕೂಟದಲ್ಲಿ ಉಂಟಾದ ಗೊಂದಲಕ್ಕೆ ಕ್ಷಮೆ ಇರಲಿ. ಭದ್ರತಾ ಸಿಬ್ಬಂದಿಗಳ ಈ ನಡವಳಿಕೆ ತರವಲ್ಲ. ಈ ಘಟನೆಯಿಂದ ಉಭಯ ದೇಶಗಳ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಭಾರತೀಯ ಹೈಕಮೀಷನರ್ ಅಜಯ್ ಬಿಸಾರಿಯಾ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಪ್ರತೀಕಾರ ತೀರಿಸಲಾಯಿತೇ..?

ಮೇ 28ರಂದು ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್​​ನಲ್ಲಿ ಇದೇ ಮಾದರಿಯ ಇಫ್ತಾರ್ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಪೊಲೀಸರು ಗಣ್ಯರಿಗೆ ಅವಮಾನ ಮಾಡಿದ್ದರು ಎನ್ನಲಾಗಿದೆ. ಇದನ್ನೇ ಆಧಾರವಾಗಿಸಿ ಶನಿವಾರದ ಇಫ್ತಾರ್ ಕೂಟದಲ್ಲಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆಯಾ ಎನ್ನುವ ಮಾತುಗಳೂ ಕೇಳಿಬಂದಿವೆ.

ಘಟನೆ ಖಂಡಿಸಿದ ಒಮರ್ ಅಬ್ದುಲ್ಲಾ:

ಶನಿವಾರದ ಘಟನೆಯನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್​ ಅಬ್ದುಲ್ಲಾ, ಮುಯ್ಯಿಗೆ ಮುಯ್ಯಿ ಎನ್ನುವ ಪಾಕ್ ವರ್ತನೆ ಖಂಡನೀಯ ಎಂದಿದ್ದಾರೆ. ಇಂತಹ ಅವಿವೇಕದ ನಡವಳಿಕೆಯನ್ನು ಪಾಕಿಸ್ತಾನ ನಿಲ್ಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.