ETV Bharat / briefs

ಇನ್ನೂ ಗ್ಯಾರಂಟಿ, ಮೈತ್ರಿ ಸರ್ಕಾರ ಪತನವಾಗಲ್ಲ ಅಂತಾರೆ ಬಿಜೆಪಿ ಲೀಡರ್‌ ಬಿ. ಶ್ರೀರಾಮುಲು

ಮೈತ್ರಿ ಸರ್ಕಾರಕ್ಕೆ ಏನೂ ಆಗೋಲ್ಲ. ಅದಕ್ಕೆ ನಾವಂತೂ ಏನೂ ಮಾಡಲ್ಲ. ಇದು ಹೈಕಮಾಂಡ್ ಕಟ್ಟಪ್ಪಣೆಯಾಗಿದೆ. ಹೀಗಾಗಿ, ಸರ್ಕಾರ ಪತನಗೊಳಿಸುವ ಕಾರ್ಯಕ್ಕೆ ನಾವು ಮುಂದಾಗೋದಿಲ್ಲ ಎಂದು ಮೂಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ತಿಳಿಸಿದ್ದಾರೆ.

author img

By

Published : Jun 3, 2019, 8:33 PM IST

Updated : Jun 3, 2019, 9:11 PM IST

ಶ್ರೀರಾಮುಲು

ಬಳ್ಳಾರಿ: ಮೈತ್ರಿ ಸರ್ಕಾರಕ್ಕೆ ಏನೂ ಆಗೋದಿಲ್ಲ. ಅದಕ್ಕೆ ನಾವಂತೂ ಏನೂ ಮಾಡಲ್ಲ. ಇದು ಹೈಕಮಾಂಡ್ ಕಟ್ಟಪ್ಪಣೆಯಾಗಿದೆ. ಹೀಗಾಗಿ ಸರ್ಕಾರ ಪತನಗೊಳಿಸುವ ಕಾರ್ಯಕ್ಕೆ ನಾವು ಮುಂದಾಗೋದಿಲ್ಲ ಎಂದು ಮುಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ನಗರದ ಡಿಸಿ ಕಚೇರಿಯ ಆವರಣದಲ್ಲಿ ನೂತನ ಸಂಸದರ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಪಷ್ಟ ಜನಾದೇಶ ಇರೋದು ಬಿಜೆಪಿಗೆ. ವಿಧಾನಸಭಾ ಉಪಚುನಾವಣೆಯಲ್ಲಿ 105 ಬಿಜೆಪಿ ಶಾಸಕರು ಗೆದ್ದಿದ್ದಾರೆ. ಸರಳ ಬಹುಮತ ಸಾಬೀತು ಪಡಿಸಲು ಒಂದಿಷ್ಟು ಶಾಸಕರ ಸಂಖ್ಯೆ ಕಡಿಮೆಯಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ಈ ಸರ್ಕಾರ ರಚನೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲ ಅತೃಪ್ತ ಶಾಸಕರಿರಬಹುದು. ಅವರು ಯಾರ ಸಂಪರ್ಕದಲ್ಲಿದ್ದಾರೆಂದು ನನಗಂತೂ ಗೊತ್ತಿಲ್ಲ. ಆದರೆ, ನಮ್ಮ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಹೇಳುತ್ತಿದ್ದಾರೆ. ಧಮ್ಮಿದ್ದರೆ ಶಾಸಕರ ಹೆಸರು ಹೇಳಲಿ ನೋಡೋಣ ಎಂದು ಸವಾಲೆಸೆದರು.

ದೋಸ್ತಿ ಸರ್ಕಾರ ಪತನವಾಗಲ್ಲ..

ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ:

ಜಿಂದಾಲ್ ಉಕ್ಕು ಕಾರ್ಖಾನೆಗೆ ರೈತರು ಸಾವಿರಾರು ಎಕರೆ ಭೂಮಿ ಪರಭಾರೆ ಮಾಡುವ ಬಗ್ಗೆ ಸಚಿವ ಸಂಪುಟದ ಅನುಮೋದನೆ ಪಡೆದಿರುವು ತಪ್ಪು. ಈ ರೀತಿಯಾಗಿ ಆತುರದ ನಿರ್ಧಾರ ತೆಗೆದು ಕೊಳ್ಳಬಾರದಿತ್ತು. ಪರ ಮತ್ತು ವಿರೋಧಿ ಹೋರಾಟಗಳು ಮುಂದುವರೆದಿವೆ. ಆ ಕುರಿತು ಕಾನೂನು ತಜ್ಞರಿಂದ ಮಾಹಿತಿ ಪಡೆಯಲಾಗುತ್ತಿದೆ. ಈ ಸಂಬಂಧ ಪಕ್ಷ ಮುಂದಿನ ಹೋರಾಟದ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಿದೆ. ಹೀಗಾಗಿ, ನಾನು ಏನೂ ಪ್ರತಿಕ್ರಿಯಿಸಲಾರೆ ಎಂದರು.

ಸಿಎಂ ಗ್ರಾಮ ವಾಸ್ತವ್ಯಕ್ಕೆ ರಾಮುಲು ಪ್ರಶಂಸೆ :

ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡುತ್ತಿರೋದು ಉತ್ತಮಕಾರ್ಯ. ಅದರಿಂದ ಆಯಾ ಗ್ರಾಮಗಳಲ್ಲಿನ ನೈಜ ಸಮಸ್ಯೆ ಹೊರಬೀಳುತ್ತದೆ. ಆದರೆ, ಅವರ ಆರೋಗ್ಯ ಚೆನ್ನಾಗಿರದ ಕಾರಣ, ಗ್ರಾಮ ವಾಸ್ತವ್ಯ ಮಾಡುವ ಮುನ್ನ ವೈದ್ಯರ ಸಲಹೆ ಪಡೆದುಕೊಂಡು ಮುಂದುವರಿಯಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಗೋವಿಂದರಾಜಲು, ಮುಖಂಡರಾದ ಮುರಹರಗೌಡ, ಕೆ ಎ ರಾಮಲಿಂಗಪ್ಪ, ಗುತ್ತಿಗನೂರು ವಿರುಪಾಕ್ಷಗೌಡ, ಜಡೇಗೌಡ, ಸುಗುಣಾ ಉಪಸ್ಥಿತರಿದ್ದರು.

Intro:ಬಳ್ಳಾರಿ ಸಂಸದರ ನೂತನ ಕಚೇರಿಗೆ ಶ್ರೀ ರಾಮುಲು ಭೇಟಿ
ಮೈತ್ರಿಕೂಟ ಸರ್ಕಾರದ ದಿಢೀರನೆ ಅನುಕಂಪ ತೋರಿದ ಶಾಸಕರು!
ಬಳ್ಳಾರಿ: ಮಾತೆತ್ತಿದರೆ ಸಾಕು. ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಈ ಮೈತ್ರಿಕೂಟದ ಸರ್ಕಾರ ಸಂಕ್ರಾಂತಿಗೆ ಬೀಳುತ್ತೆ. ಯುಗಾದಿಗೆ ಬೀಳುತ್ತೆ. ಲೋಕಸಭಾ ಸಾರ್ವತ್ರಿಕ ಚುನಾವಣೆ ಬಳಿಕ ಬೀಳುತ್ತೆ ಎಂಬ ಗಡುವು ನೀಡಿದ್ದೇ ನೀಡಿದ್ದು. ಆದರೀಗ ಅದೇ ಶ್ರೀರಾಮುಲು ತಮ್ಮ ಮಾತಿನ ವರಸೆ ಬದಲಿಸಿದ್ದಾರೆ.
ಹೌದು, ಹೀಗಂತ ಬಳ್ಳಾರಿಯ ಡಿಸಿ ಕಚೇರಿಯ ಆವರಣದಲ್ಲಿ ಬರುವ ಸ್ಪಂದನ ಕೇಂದ್ರದಲ್ಲಿನ ಕೊಠಡಿಯೊಂದರಲ್ಲಿ ಸಂಸದರ ನೂತನ ಕಚೇರಿಗೆ ಭೇಟಿ ನೀಡಿದ ಬಳಿಕ ಶಾಸಕ ಶ್ರೀರಾಮುಲು ಅವರು ಮಾತನಾಡಿ, ಈ ಮೈತ್ರಿಕೂಟ ಸರ್ಕಾರ ಪತನಗೊಳ್ಳಲ್ಲ ಎಂದು ತಿಳಿಸಿದ್ದಾರೆ.
ಶಾಸಕ ಶ್ರೀರಾಮುಲು ಹೇಳಿಕೆ ವಿರೋಧಿ ಪಾಳೆಗೆ ಒಂದು ರೀತಿಯ ಸಂತಸವಾದರೆ, ಸ್ವಪಕ್ಷದವರ ಕೆಂಗಣ್ಣಿಗೆ ಗುರಿ ಯಾಗಿದೆ ಎಂತಲೂ ಬಣ್ಣಿಸಬಹುದು. ರಾಜ್ಯದ ಮೈತ್ರಿಕೂಟ ಸರ್ಕಾರ ಪತನವಾಗೋದು ಯಾವಾಗ ಎಂದಾಗ, ಶಾಸಕ ಶ್ರೀ ರಾಮುಲು ತತ್ ಕ್ಷಣವೇ ಪ್ರತಿಕ್ರಿಯಿಸಿ, ಮೈತ್ರಿಕೂಟ ಸರ್ಕಾರ ಏನೂ ಆಗೋಲ್ಲ. ಅದಕ್ಕೆ ನಾವಂತೂ ಏನೂ ಮಾಡಲ್ಲ. ಇದು ಹೈಕಮಾಂಡ್ ಅವರ ಕಟ್ಟಪ್ಪಣೆಯಾಗಿದೆ. ಹೀಗಾಗಿ, ಸರ್ಕಾರ ಪತನಗೊಳಿಸುವ ಕಾರ್ಯಕ್ಕೆ ನಾವಂತೂ ಮುಂದಾಗೋಲ್ಲ ಎಂದರು.
ರಾಜ್ಯದಲ್ಲಿ ಸ್ಪಷ್ಟ ಜನಾದೇಶ ಇರೋದು ಬಿಜೆಪಿ ಪಕ್ಷಕ್ಕೆ. ಮೊನ್ನೆ ತಾನೆ ನಡೆದ ವಿಧಾನಸಭಾ ಉಪಚುನಾವಣೆಯಲಿ ಗೆದ್ದಿರುವ ಬಿಜೆಪಿಯ ಶಾಸಕ ಸೇರಿದಂತೆ 105 ಮಂದಿ ಶಾಸಕರಿದ್ದಾರೆ. ಸರಳ ಬಹುಮತ ಸಾಬೀತುಪಡಿಸಲು ಒಂದಿಷ್ಟು ಶಾಸಕರ ಸಂಖ್ಯೆ ನಮಗೆ ಕಡಿಮೆಯಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ಈ ಸರ್ಕಾರ ರಚನೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆಲ ಅತೃಪ್ತ ಶಾಸಕರಿರಬಹುದು. ಅವರು ಯಾರ ಸಂಪರ್ಕದಲ್ಲಿದ್ದಾರೆಂದು ನನಗಂತೂ ಗೊತ್ತಿಲ್ಲ. ಆದರೆ, ನಮ್ಮ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಹೇಳುತ್ತಿದ್ದಾರೆ ಅವರು. ದಮ್ಮಿದ್ದರೆ ಯಾವನಾದ್ರೂ ಒಬ್ಬ ಶಾಸಕನ ಹೆಸರು ಹೇಳಲಿ ನೋಡೋಣ ಎಂದು ಸವಾಲೆಸೆದರು.

Body:ಜಿಂದಾಲ್ ಕಂಪನಿಗೆ ಭೂಮಿ ಪರೌಭಾರೆ: ಜಿಂದಾಲ್ ಉಕ್ಕು ಕಾರ್ಖಾನೆಗೆ ರೈತರ ಸಾವಿರ ಭೂಮಿ ಪರಭಾರೆ ಮಾಡುವ ಬಗ್ಗೆ ಸಚಿವ ಸಂಪುಟದ ಅನುಮೋದನೆ ಪಡೆದಿರೋದು ತಪ್ಪು. ಈ ರೀತಿಯಾಗಿ ಮೈತ್ರಿಕೂಟ ಸರ್ಕಾರ ಆತುರದ ನಿರ್ಧಾರ ತೆಗೆದು ಕೊಳ್ಳಬಾರದಿತ್ತು. ಪರ ಮತ್ತು ವಿರೋಧಿ ಹೋರಾಟಗಳೂ ಕೂಡ ಮುಂದುವರಿದಿವೆ. ಆ ಕುರಿತು ಕಾನೂನು ತಜ್ಞರಿಂದ ಮಾಹಿತಿ ಪಡೆಯಲಾಗುತ್ತಿದೆ. ಈ ಸಂಬಂಧ ಪಕ್ಷ ಮುಂದಿನ ಹೋರಾಟದ ರೂಪುರೇಷೆಗಳ ಕುರಿತ ಕೂಲಂಕಷವಾಗಿ ಪರಿ ಶೀಲಿಸಿ ಮುಂದಿನ ಹೆಜ್ಜೆ ಇಡಲಿದೆ. ಹೀಗಾಗಿ, ಆ ಕುರಿತು ನಾನು ಏನೂ ಪ್ರತಿಕ್ರಿಯಿಸಲಾರೆ ಎಂದರು.
ಸಿಎಂ ಗ್ರಾಮವಾಸ್ತವ್ಯಕ್ಕೆ ರಾಮುಲು ಪ್ರಶಂಸೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡುತ್ತಿ ರೋದು ಉತ್ತಮಕಾರ್ಯ. ಅದರಿಂದ ಆಯಾ ಗ್ರಾಮಗಳಲ್ಲಿನ ನೈಜ ಸಮಸ್ಯೆ ಹೊರಬೀಳುತ್ತದೆ. ಆದರೆ, ಅವರ ಆರೋಗ್ಯ ಚೆನ್ನಾಗಿರದ ಕಾರಣ, ಗ್ರಾಮ ವಾಸ್ತವ್ಯ ಮಾಡುವ ಮುನ್ನ ವೈದ್ಯರ ಸಲಹೆ ಪಡೆದುಕೊಂಡೇ ಮುಂದುವರಿಯಬೇಕು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಮಲ್ಲನಗೌಡ, ಗೋವಿಂದರಾಜಲು, ಮುಖಂಡ ರಾದ ಮುರಹರಗೌಡ, ಕೆ.ಎ.ರಾಮಲಿಂಗಪ್ಪ, ಗುತ್ತಿಗನೂರು ವಿರುಪಾಕ್ಷಗೌಡ, ಜಡೇಗೌಡ, ಸುಗುಣಾ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_03_MLA_SREE_RAMULU_BYTE_7203310

KN_BLY_03b_03_MLA_SREE_RAMULU_BYTE_7203310

KN_BLY_03c_03_MLA_SREE_RAMULU_BYTE_7203310
Last Updated : Jun 3, 2019, 9:11 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.