ETV Bharat / briefs

ನಿತ್ಯ 1 ಕೋಟಿ ಜನರಿಗೆ ಉಚಿತ ಲಸಿಕೆ ನೀಡಬೇಕು: ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ರಾಜ್ಯ ಕಾಂಗ್ರೆಸ್ ಮನವಿ - Karnataka kpcc news

ಸರ್ಕಾರ ಪರಿಹಾರ ನೀಡುವುದು ಬೇರೆ ವಿಚಾರ. ಲಸಿಕೆ ಕೊಟ್ಟು ಜನರ ಜೀವ ಉಳಿಸಿ ಅಂತಾ ನಾವು ರಾಷ್ಟ್ರಪತಿಗಳ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದ್ದಾರೆ.

  give Free vaccination for 1 crore people daily

author img

By

Published : Jun 4, 2021, 10:07 PM IST

Updated : Jun 4, 2021, 10:55 PM IST

ಬೆಂಗಳೂರು: ಬಿಜೆಪಿ ಸರ್ಕಾರದ ಲಸಿಕಾ ನೀತಿ ಜನವಿರೋಧಿಯಾಗಿದ್ದು, ನಿತ್ಯ ಕನಿಷ್ಠ 1 ಕೋಟಿ ಜನರಿಗೆ ಉಚಿತ ಲಸಿಕೆ ನೀಡಬೇಕು. ಆಗ ಮಾತ್ರ 3 ತಿಂಗಳ ಅವಧಿಯಲ್ಲಿ ದೇಶದ ಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಸಾಧ್ಯ. ಇಲ್ಲದಿದ್ದರೆ ಮೂರು ವರ್ಷವಾದರೂ ಲಸಿಕೆ ನೀಡಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದ ನಿಯೋಗ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು. ರಾಜ್ಯಪಾಲರ ಭೇಟಿ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರನ್ನು ಇಂದು ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ನಿತ್ಯ 1 ಕೋಟಿ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂಬುದು ನಮ್ಮ ಮನವಿ. ಈ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕು. ಸರ್ಕಾರದ ಪ್ರಸ್ತುತ ಲಸಿಕಾ ನೀತಿ ಜನವಿರೋಧಿಯಾಗಿದ್ದು, ಸದ್ಯ ದಿನಕ್ಕೆ ಕೇವಲ 16 ಲಕ್ಷ ಜನರಿಗೆ ಮಾತ್ರ ನೀಡಲು ಸಾಧ್ಯವಾಗುತ್ತಿದೆ. ದಿನಕ್ಕೆ 1 ಕೋಟಿಯಂತೆ ನೀಡಿದರೆ ಮಾತ್ರ ದೇಶದ ಎಲ್ಲರಿಗೂ ಅಗತ್ಯ ಅವಧಿಯಲ್ಲಿ ಲಸಿಕೆ ನೀಡಲು ಸಾಧ್ಯ. ಇಲ್ಲವಾದರೆ ಮೂರು ವರ್ಷವಾದರೂ ಈ ಲಸಿಕೆ ಕಾರ್ಯಕ್ರಮ ಮುಗಿಯುವುದಿಲ್ಲ ಎಂದರು.

ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ರಾಜ್ಯ ಕಾಂಗ್ರೆಸ್ ಮನವಿ
ಸರ್ಕಾರ ಪರಿಹಾರ ನೀಡುವುದು ಬೇರೆ ವಿಚಾರ. ಲಸಿಕೆ ಕೊಟ್ಟು ಜನರ ಜೀವ ಉಳಿಸಿ ಅಂತಾ ನಾವು ರಾಷ್ಟ್ರಪತಿಗಳ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ, ಬೇಡುತ್ತಿದ್ದೇವೆ. ನಮ್ಮ 100 ಕೋಟಿ ರೂ. ಯೋಜನೆಗೆ ಅನುಮತಿ ನೀಡಿ ಎಂದು ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ ಎಂದರು. ರಾಜ್ಯದ ಪಾಲಿಗೆ ಐತಿಹಾಸಿಕ ದಿನ:ನಾವು ರಾಜಕಾರಣದಲ್ಲಿ ಕೆಲಸ ಮಾಡುತ್ತಿದ್ದೇವೆ. ಜೀವ ಇದ್ದರೆ ಜೀವನ ಎಂದು ಕಾಂಗ್ರೆಸ್​​​ನ ಎಲ್ಲ ಶಾಸಕರು ಸೇರಿ 100 ಕೋಟಿ ರೂ. ಲಸಿಕೆ ಯೋಜನೆ ರೂಪಿಸಿದ್ದೇವೆ. ಕೊರೋನಾ ತಡೆಗಟ್ಟಲು, ಲಸಿಕೆ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಅನೇಕರು ತಮ್ಮ ಹಣದಲ್ಲಿ ಆಹಾರ, ಆ್ಯಂಬುಲೆನ್ಸ್, ಆಕ್ಸಿಜನ್ ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಲಸಿಕಾ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಎಂದು ನಾವು ಮನವಿ ಮಾಡಿದ್ದೆವು. ಆದರೆ, ಯಡಿಯೂರಪ್ಪ ಅದಕ್ಕೆ ಆಸ್ಪದ ಕೊಡಲಿಲ್ಲ ಎಂದರು. ಅದು ನಮ್ಮ ದುಡ್ಡಲ್ಲ, ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಖರ್ಚು ಮಾಡಲು ಕೊಟ್ಟಿರುವ ದುಡ್ಡು. ಈಗ ಅಭಿವೃದ್ಧಿಗಿಂತ ಜನರ ಜೀವ ಮುಖ್ಯ. ಹೀಗಾಗಿ ನಾವು ಜನರಿಗೆ ಲಸಿಕೆ ನೀಡುತ್ತಿದ್ದೆವು. ಆದರೆ, ನಮಗೆ ಅನುಮತಿ ನೀಡಲಿಲ್ಲ. ಕೇಂದ್ರ ಸರ್ಕಾರವು ಬರೀ ಪ್ರಚಾರಕ್ಕೆ ಮಾತ್ರ ಕೇವಲ ಎರಡು ಕಂಪನಿಗಳಿಗೆ ಮಾತ್ರ ಲಸಿಕೆ ಉತ್ಪಾದನೆ ಅವಕಾಶ ನೀಡಿದೆ ಎಂದು ಕಿಡಿಕಾರಿದರು.ಇಂದು ರಾಜ್ಯದ ಹಾಗೂ ನನ್ನ ಪಾಲಿಗೆ ಅತ್ಯಂತ ಪವಿತ್ರ ದಿನ. ನಮ್ಮ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಇತರರು ತಮ್ಮ ಸ್ವಂತ ಹಣದಲ್ಲಿ ಸುಮಾರು 3 ಲಕ್ಷ ಲಸಿಕೆಯನ್ನು ಖರೀದಿಸಿ, ಜನರಿಗೆ ಕೊಡುತ್ತಿದ್ದಾರೆ. ಈಗಾಗಲೇ 60 ಸಾವಿರ ಲಸಿಕೆಗೆ ದುಡ್ಡು ಕಟ್ಟಿದ್ದು, ಅದರಲ್ಲಿ 10 ಸಾವಿರ ಲಸಿಕೆ ಬಂದಿದೆ. ಅದನ್ನು ಜನರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮವನ್ನು ನಾವು ಇವತ್ತು ಬೆಳಗ್ಗೆ ಉದ್ಘಾಟಿಸಿದ್ದೇವೆ. ನಾನು ಅಲ್ಲೇ ನನ್ನ ಎರಡನೇ ಡೋಸ್ ಲಸಿಕೆ ಕೂಡ ತೆಗೆದುಕೊಂಡು ಬಂದಿದ್ದೇನೆ ಎಂದರು.

Last Updated : Jun 4, 2021, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.