ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯನ್ನು ಐದು ತಿಂಗಳವರೆಗೆ ವಿಸ್ತರಿಸುವುದು ಮತ್ತು ವಯಸ್ಕ ಭಾರತೀಯರಿಗೆ ಸರ್ಕಾರಿ ಸೌಲಭ್ಯಗಳಲ್ಲಿ ಉಚಿತ ಲಸಿಕೆಗಳನ್ನು ನೀಡುವ ನಿರ್ಧಾರವು, ಕೇಂದ್ರ ಸರ್ಕಾರದ 2021-22ರ ಹಣಕಾಸು ವರ್ಷದ ಬಜೆಟ್ ವೆಚ್ಚಕ್ಕಿಂತ 1,05,000 ಕೋಟಿ ರೂ. ಹೆಚ್ಚು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವರದಿ ತಿಳಿಸಿದೆ.
"ಪಿಎಂ ಗರಿಬ್ ಕಲ್ಯಾಣ್ ಅಣ್ಣಾ ಯೋಜನೆ ಜುಲೈನಿಂದ 2021ರ ನವೆಂಬರ್ ಅಂತ್ಯದವರೆಗೆ 91,000 ಕೋಟಿ ರೂ. ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು 13,851 ಕೋಟಿ ರೂ.ಗಳ ಹೆಚ್ಚುವರಿ ಹಣ ಬೇಕಾಗುತ್ತದೆ" ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯಾ ಕಾಂತಿ ಘೋಷ್ ಹೇಳಿದರು.
ಕೋವಿಡ್ ಲಸಿಕೆಗಳನ್ನು ನೀಡಲು ಕೇಂದ್ರ ಸಚಿವೆ ನಿರ್ಮಾಲ ಸೀತಾರಾಮನ್ 35,000 ಕೋಟಿ ರೂ. ಘೋಷಿಸಿದ್ದಾರೆ. ಆದಾಗ್ಯೂ, 18-44 ವರ್ಷ ವಯಸ್ಸಿನವರಿಗೆ ಲಸಿಕೆ ನೀಡುವ ನಿಯಮಗಳ ನಿಧಾನಗತಿಯು ದೇಶದ ಸರ್ವೋಚ್ಛ ನ್ಯಾಯಾಲಯ ಮತ್ತು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ.
ಈ ತಿಂಗಳ ಆರಂಭದಲ್ಲಿ, ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದರು. ಈ ವೇಳೆ, ಎಲ್ಲಾ ವಯಸ್ಕ ಭಾರತೀಯರಿಗೆ ಸರ್ಕಾರಿ ಸೌಲಭ್ಯಗಳಲ್ಲಿ ಉಚಿತ ಲಸಿಕೆಗಳನ್ನು ನೀಡುವ ಸರ್ಕಾರದ ನಿರ್ಧಾರವನ್ನು ಘೋಷಿಸಿದರು.
ಜೂನ್ 21ರಿಂದ ಉಚಿತ ವ್ಯಾಕ್ಸಿನೇಷನ್: ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಹೊಸ ಲಸಿಕೆ ನೀತಿ ಜಾರಿಗೆ ಬರಲಿದೆ ಎಂದು ಪಿಎಂ ಮೋದಿ ಹೇಳಿದರು. ಪ್ರತಿ ವಯಸ್ಕ ಭಾರತೀಯರಿಗೆ ಸರ್ಕಾರಿ ಸೌಲಭ್ಯದಲ್ಲಿ ಉಚಿತ ಕೋವಿಡ್ ಲಸಿಕೆ ಪಡೆಯಲು ಅರ್ಹತೆ ಇರುತ್ತದೆ.
ಕೋವಿಡ್ ಪ್ರಚೋದಿತ ಕಷ್ಟದ ಅವಧಿಯಲ್ಲಿ ಸಹಾಯ ಮಾಡಲು ದೇಶದ ಜನಸಂಖ್ಯೆಯ ಮೂರನೇ ಎರಡರಷ್ಟು ಅಂದರೆ 800 ಮಿಲಿಯನ್ ಭಾರತೀಯರಿಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಹೆಚ್ಚುವರಿ ಹೊರೆ: ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುಭವಿಸಬೇಕಾದ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ವರದಿಗಳ ಪ್ರಕಾರ, ಹೆಚ್ಚುವರಿ ಹೊರೆ 80,000 ಕೋಟಿಗಳಿಂದ 1,50,000 ಕೋಟಿ ರೂ.ಆಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವಿಭಾಗವು ಈ ಎರಡು ಕ್ರಮಗಳ ವೆಚ್ಚವನ್ನು ಸುಮಾರು 1,05,000 ಕೋಟಿ ರೂ. ಎಂದು ಅಂದಾಜಿಸಿದೆ. ಭಾರತವು ವಿದೇಶಿ ಕಂಪನಿಗಳೊಂದಿಗೆ ಲಸಿಕೆ ಖರೀದಿ ಒಪ್ಪಂದ ಮಾಡಿಕೊಂಡರೆ ಈ ವೆಚ್ಚ ಹೆಚ್ಚಾಗಬಹುದು ಎಂದು ಘೋಷ್ ಎಚ್ಚರಿಸಿದ್ದಾರೆ.
ವಿದೇಶಿ ಲಸಿಕೆಗಳಿಗೆ ತ್ವರಿತ ಅನುಮೋದನೆ: ದೇಶದಲ್ಲಿ ಲಸಿಕೆಗಳ ಕೊರತೆಯನ್ನು ನೀಗಿಸುವ ಸಲುವಾಗಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಅಮೆರಿಕ ಮತ್ತು ಯುರೋಪಿಯನ್ ನಿಯಂತ್ರಕರು ಅನುಮೋದಿಸಿದ ಕೋವಿಡ್ ಲಸಿಕೆಗಳಿಗೆ ಸರ್ಕಾರವು ತ್ವರಿತ ಅನುಮೋದನೆ ಘೋಷಿಸಿದೆ. ರಷ್ಯಾ ಮತ್ತು ಜಪಾನ್‌ನಲ್ಲಿ ಅನುಮೋದಿಸಲಾದ ಕೋವಿಡ್ ಲಸಿಕೆಗಳು ಕೂಡ ತ್ವರಿತ ಅನುಮೋದನೆಗೆ ಅರ್ಹವಾಗುತ್ತವೆ ಎಂದು ಸರ್ಕಾರ ಹೇಳಿದೆ.
ಜುಲೈನಿಂದ 5,00,00,000 ಕೋಟಿ ಡೋಸ್‌ಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಫೈಜರ್‌ನೊಂದಿಗೆ ತ್ವರಿತವಾಗಿ ಖರೀದಿ ಮಾಡಲು ಕೇಂದ್ರವು ಈಗಾಗಲೇ ಅಮೆರಿಕ ಲಸಿಕೆ ತಯಾರಕರಾದ ಫೈಜರ್, ಮಾಡರ್ನಾ ಮತ್ತು ಜೆ & ಜೆ ಅನ್ನು ಸಂಪರ್ಕಿಸಿದೆ.