ಬೆಂಗಳೂರು: ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಕೇಂದ್ರ ಸರ್ಕಾರವು ಘೋಷಿಸಿರುವ ನೆರವನ್ನು ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಸ್ವಾಗತಿಸುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡಿದೆ.
ಈ ನೆರವಿನಡಿಯಲ್ಲಿ ಎಂ.ಎಸ್.ಎಂ.ಇ. ಪರಿಭಾಷೆಯನ್ನು ಪರಿಷ್ಕರಿಸಿದ್ದು, ಇದರ ಆಧಾರದಲ್ಲಿ ಎಂ.ಎಸ್.ಎಂ.ಇ. ಪ್ಯಾಕೇಜಿನಲ್ಲಿ ಘೋಷಿಸಿರುವ ನೆರವು ಬಹಳಷ್ಟು ಸಣ್ಣ ಕೈಗಾರಿಕೆಗಳಿಗೆ ಲಭ್ಯವಾಗುತ್ತದೆ.
ಈ ನಿರ್ಧಾರಗಳಿಂದ ಪ್ರಥಮ ಬಾರಿಗೆ ಎನ್.ಪಿ.ಎ. ಮಟ್ಟದಲ್ಲಿರುವ ಎಂ.ಎಸ್.ಎಂ.ಇ.ಗಳು ಈ ವ್ಯಾಪ್ತಿಯಿಂದ ಹೊರಬಂದು ಹೆಚ್ಚುವರಿ ಧನಸಹಾಯವನ್ನು ಪಡೆಯಲು ಅರ್ಹತೆ ಪಡೆಯುತ್ತವೆ ಎಂದು ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿ ಆರ್ ಜನಾರ್ಧನ್ ತಿಳಿಸಿದರು.
ಇದಲ್ಲದೇ, ಸಂಕಷ್ಟದಲ್ಲಿರುವ ಎಂ.ಎಸ್.ಎಂ.ಇ. ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆಗಾಗಿ ಸುಮಾರು ರೂ.20,000 ಕೋಟಿಗಳಷ್ಟು, ಅಧೀನ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದು, ಸುಮಾರು 2,00,000 ಸಂಕಷ್ಟದಲ್ಲಿರುವ ಘಟಕಗಳಿಗೆ ನೆರವಾಗಲಿದೆ.
ಇದರ ಜೊತೆಗೆ ಎಂ.ಎಸ್.ಎಂ.ಇ. ಘಟಕಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ರೂ.50,000 ಕೋಟಿಗಳ ಫಂಡ್ ಆಫ್ ಪಂಡ್ಸ್ ಸ್ಥಾಪನೆ ಮಾಡುವುದರಿಂದ ಡೆಟ್ ಇಕ್ವಿಟಿ ಪ್ರಮಾಣವನ್ನು ಸರಿದೂಗಿಸುವಲ್ಲಿ ಸಹಾಯವಾಗುತ್ತದೆ.
ಎಂ.ಎಸ್.ಎಂ.ಇ. ಚಾಂಪಿಯನ್ ವೆಬ್ ಸೈಟ್ ಪ್ರಾರಂಭಿಸಿ ಪ್ರತಿಯೊಂದು ಡಿಐಗಳಲ್ಲಿ ಚಾಂಪಿಯನ್ ಕಂಟ್ರೋಲ್ ರೂಂ ಸ್ಥಾಪಿಸಿದ್ದು, ಇದರಿಂದ ಹಲವಾರು ಅತೀ ಸಣ್ಣ ಮತ್ತು ಸಣ್ಣ ಉದ್ದಿಮೆಗಳು ಚಾಂಪಿಯನ್ ಉದ್ದಿಮೆಗಳಾಗಿ ಮಾರ್ಪಾಡಾಗಲು ಅವಕಾಶ ಕಲ್ಪಿಸಲಾಗಿದೆ.