ETV Bharat / briefs

ಮಾಲೀಕರು ಮತ್ತು ಗ್ರಾಹಕರ ಮಧ್ಯೆ ಹೊಡೆದಾಟ: ದೂರು ದಾಖಲು

ಉಜಿರೆಯ ಹಳ್ಳಿಮನೆ ರೆಸಾರ್ಟ್‌ನಲ್ಲಿ ಮಾಲೀಕರು ಮತ್ತು ಗ್ರಾಹಕರ ಮಧ್ಯೆ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ವಿರುದ್ಧ ದೂರು ದಾಖಲಾಗಿದೆ.

Arrest
Arrest
author img

By

Published : Jul 15, 2020, 3:17 PM IST

ಬೆಳ್ತಂಗಡಿ: ಉಜಿರೆ ಗ್ರಾಮದ ಹಳ್ಳಿಮನೆ ರೆಸಾರ್ಟ್‌ನಲ್ಲಿ ಸೋಮವಾರ ಮಾಲೀಕರು ಮತ್ತು ಗ್ರಾಹಕರ ಮಧ್ಯೆ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಳ್ಳಿಮನೆ ರೆಸಾರ್ಟ್‌ ಮಾಲೀಕ ಪ್ರವೀಣ್‌ ಹಾಗೂ ಜತೆಗಾರರಾದ ಮನೋಜ್‌ ಕುಂಜರ್ಪ, ರಂಜನ್‌ ಕಡಂಬು, ಪ್ರಜ್ವಲ್‌, ಗಣೇಶ್‌ ಕುಂಟಿನಿ, ಶರತ್‌ ಕುಂಜರ್ಪ ಮತ್ತು ಇತರರು ನಿಡ್ಲೆ ಗ್ರಾಮದ ಕೊಡಂಗೆ ಮನೆ ನಿವಾಸಿ ಗಿರೀಶ್‌ ಹಾಗೂ ಸ್ನೇಹಿತರ ಮೇಲೆ ಹಲ್ಲೆ ನಡೆಸಿರುವ ಕುರಿತು ದೂರು ನೀಡಲಾಗಿದೆ.

ಪ್ರಕರಣದ ವಿವರ:
ಗಿರೀಶ್‌ ತನ್ನ ಸ್ನೇಹಿತ ಸಂದೇಶ್‌ ಮತ್ತು ಬಾಲಕೃಷ್ಣ ಶೆಟ್ಟಿ ಅವರೊಂದಿಗೆ ಸೋಮವಾರ ಉಜಿರೆ ಹಳ್ಳಿಮನೆ ರೆಸಾರ್ಟ್‌ಗೆ ಹೋಗಿ ಆಹಾರ ಸೇವಿಸಿ, ಬಿಲ್​ ಕೊಟ್ಟು ಹೊರ ಬರುತ್ತಿದ್ದರು. ಈ ವೇಳೆ ಬಾರ್ ಮಾಲೀಕ ಪ್ರವೀಣ್‌ ಹಾಗೂ ಜತೆಗಾರರು ಅನವಶ್ಯಕವಾಗಿ ಮಾತಿಗೆ ಮಾತು ಬೆಳೆಸಿ ಗಿರೀಶ್‌, ಸಂದೇಶ್‌, ಬಾಲಕೃಷ್ಣ ಶೆಟ್ಟಿ ಅವರಿಗೆ ಅಡ್ಡಗಟ್ಟಿ ಗಂಭೀರ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಜೊತೆಗೆ ಗಿರೀಶ್‌ ಜೇಬಿನಲ್ಲಿದ್ದ 1,98,000 ರೂ. ನಗದು, ಕೊರಳಲ್ಲಿದ್ದ ಸರ‌ ಹಾಗೂ ಇವರ ಜೊತೆಯಲ್ಲಿದ್ದ ಸಂದೇಶ್‌ ಅವರ ಚಿನ್ನದ ಸರವನ್ನು ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಬೆಳ್ತ‌ಂಗಡಿ ಠಾಣೆಗೆ ದೂರು ನೀಡಲಾಗಿದೆ.

ಬಾರ್ ಮಾಲೀಕರಿಂದ ಪ್ರತಿ ದೂರು:
ಹಳ್ಳಿಮನೆ ರೆಸಾರ್ಟ್‌ಗೆ ಗಿರೀಶ್‌, ಭರತ್‌, ಬಾಲಕೃಷ್ಣ, ಸಂದೇಶ್‌ ಅವರು ಬಂದಿದ್ದು, ರೆಸಾರ್ಟ್​ನಲ್ಲಿ ಮದ್ಯ ಸೇವಿಸಲು ನಿರಾಕರಿಸಿದ್ದಕ್ಕೆ ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ಉಜಿರೆ ಅಳಿಕೆ ನಿವಾಸಿ ಸವಿತಾ ಬ್ಯಾಪ್ಟಿಸ್ಟ್‌ (34) ಪ್ರತಿ ದೂರು ದಾಖಲಿಸಿದ್ದಾರೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಇತ್ತಂಡಗಳ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.