ETV Bharat / briefs

ಖುರ್ಚಿಗಾಗಿ ಹಗ್ಗ ಜಗ್ಗಾಟ: ಉಪವಾಸ ಕುಳಿತ ಮುಕ್ತ ವಿವಿ ಅಧಿಕಾರಿ - undefined

ಅಧಿಕಾರ ವಹಿಸಿಕೊಳ್ಳಲು ಮಹಿಳಾ ನಿರ್ದೇಶಕಿ ಬಿಡಲಿಲ್ಲ ಎಂದು ಆರೋಪಿಸಿ ಉಪವಾಸ ಹೋರಾಟ ನಡೆಸುತ್ತಿರುವ ಸುಧಾಕರ್​ ಹೊಸಳ್ಳಿ ನಾನು ಮಹಿಳಾ ದೌರ್ಜನ್ಯ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಉಪವಾಸ ನಡೆಸುತ್ತಿರುವ ಸುಧಾಕರ್ ಹೊಸಳ್ಳಿ
author img

By

Published : Jun 19, 2019, 4:35 PM IST

ಮಂಡ್ಯ: ಮಂಡ್ಯದ ಪ್ರಾದೇಶಿಕ ಮುಕ್ತ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಅಧಿಕಾರಿಗಳಿಬ್ಬರು ಕುರ್ಚಿಗಾಗಿ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಚೇರಿಯ ಎದುರಿಗೆ ಉಪವಾಸ ಕುಳಿತು ಹೋರಾಟ ಮಾಡುತ್ತಿದ್ದಾರೆ.

ಉಪವಾಸ ನಡೆಸುತ್ತಿರುವ ಸುಧಾಕರ್ ಹೊಸಳ್ಳಿ

ಘಟನೆ ವಿವರ: ಡಾ.ಸುಧಾಕರ್​ ಕೊಸಳ್ಳಿ ಎಂಬ ಅಧಿಕಾರಿ ಮೇ 27 ರಂದು ದಾವಣಗೆರೆಯ ಪ್ರಾದೇಶಿಕ ಕಚೇರಿಯಿಂದ ಮಂಡ್ಯಕ್ಕೆ ವರ್ಗವಾಗಿ ಬಂದು ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಕರ್ನಾಟಕ ಮುಕ್ತ ವಿವಿಯ ನೂತನ ಕುಲಪತಿಯಿಂದ ಜೂನ್ 03 ರಂದು ಈ ಹಿಂದಿನ ಕುಲಪತಿ ಮಾಡಿದ್ದ ವರ್ಗಾವಣೆ ಆದೇಶಕ್ಕೆ ತಡೆ ಹಿಡಿದು, ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ್ದರು.

ಈ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವರ್ಗಾವಣೆಗೆ ತಡೆ ನೀಡಿದ್ದ ಮುಕ್ತ ವಿವಿ ಕುಲಸಚಿವರ ಆದೇಶ ಹಿನ್ನೆಲೆಯಲ್ಲಿ ಅಧಿಕಾರಕ್ಕಾಗಿ ಹಗ್ಗ ಜಗ್ಗಾಟ ಆರಂಭವಾಗಿದೆ. ಪ್ರಾದೇಶಿಕ ನಿರ್ದೇಶಕರ ಸ್ಥಾನಕ್ಕಾಗಿ ಹೋರಾಟ ಶುರುವಾಗಿದ್ದು, ನಿರ್ದೇಶಕಿ ನಂದಕುಮಾರಿ ಮತ್ತು ಹೊಸದಾಗಿ ವರ್ಗವಾಗಿ ಬಂದಿದ್ದ ಸುಧಾಕರ ಹೊಸಳ್ಳಿ ನಡುವೆ ಕುರ್ಚಿಗಾಗಿ ಕಾದಾಟ ಆರಂಭವಾಗಿದೆ.

ಅಧಿಕಾರ ವಹಿಸಿಕೊಳ್ಳಲು ಮಹಿಳಾ ನಿರ್ದೇಶಕಿ ಬಿಡಲಿಲ್ಲ ಎಂದು ಆರೋಪಿಸಿ ಧರಣಿ ಕುಳಿತಿರುವ ಸುಧಾಕರ್​ ಹೊಸಳ್ಳಿ ಘಟನೆಯನ್ನು ವಿವರಿಸಿ ವಿಶ್ವವಿದ್ಯಾಲಯ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇವರಿಬ್ಬರ ಜಗಳದಲ್ಲಿ ಮಂಡ್ಯದ ಪ್ರಾದೇಶಿಕ ಮುಕ್ತ ವಿವಿಯಲ್ಲಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

Intro:ಮಂಡ್ಯ: ಒಂದೇ ಕುರ್ಚಿಗಾಗಿ ಅಧಿಕಾರಿಗಳಿಬ್ಬರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಅಧಿಕಾರಿಯೊಬ್ಬರು ಕಚೇರಿ ಎದುರೇ ಉಪವಾಸ ಕುಳಿತು ಹೋರಾಟ ಮಾಡುತ್ತಿರುವ ಘಟನೆ ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರಾದೇಶಿಕ ಕಚೇರಿಯಲ್ಲಿ ನಡೆದಿದೆ.
ಪ್ರಾದೇಶಿಕ ನಿರ್ದೇಶಕರ ಸ್ಥಾನಕ್ಕಾಗಿ ಹೋರಾಟ ಶುರುವಾಗಿದ್ದು, ನಿರ್ದೇಶಕಿ ನಂದಕುಮಾರಿ ಮತ್ತು ಹೊಸದಾಗಿ ವರ್ಗವಾಗಿ ಬಂದಿದ್ದ ಸುಧಾಕರ ಹೊಸಳ್ಳಿ ನಡುವೆ ಕುರ್ಚಿಗಾಗಿ ಹಗ್ಗ ಜಗ್ಗಾಟ ಶುರುವಾಗಿದೆ. ಖುರ್ಚಿಗಾಗಿ ಸುಧಾಕರ್ ಹೊಸಹಳ್ಳಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭ ಮಾಡಿದ್ದಾರೆ.
ಅಧಿಕಾರ ವಹಿಸಿಕೊಳ್ಳಲು ಮಹಿಳಾ ನಿರ್ದೇಶಕಿ ಬಿಡಲಿಲ್ಲ ಎಂದು ಆರೋಪಿಸಿ ಧರಣಿ ಕುಳಿತಿದ್ದು, ಮೇ 27 ರಂದು ದಾವಣಗೆರೆಯ ಪ್ರಾದೇಶಿಕ ಕಚೇರಿಯಿಂದ ಮಂಡ್ಯಕ್ಕೆ ವರ್ಗವಾಗಿ ಬಂದು ಅಧಿಕಾರ ವಹಿಸಿಕೊಂಡಿದ್ದರು. ಆದರೆ ಕರ್ನಾಟಕ ಮುಕ್ತ ವಿವಿಯ ನೂತನ ಕುಲಪತಿಯಿಂದ ಜೂನ್ 03 ರಂದು ಈ ಹಿಂದಿನ ಕುಲಪತಿ ಮಾಡಿದ್ದ ವರ್ಗಾವಣೆ ಆದೇಶಕ್ಕೆ ತಡೆ ಹಿಡಿದು, ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದ್ದರು.
ಈ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವರ್ಗಾವಣೆಗೆ ತಡೆ ನೀಡಿದ್ದ ಮುಕ್ತ ವಿವಿಯ ಕುಲಸಚಿವರ ಆದೇಶ ಹಿನ್ನಲೆಯಲ್ಲಿ ಅಧಿಕಾರಕ್ಕಾಗಿ ಹಗ್ಗ ಜಗ್ಗಾಟ ಆರಂಭವಾಗಿದ್ದು, ಮಂಡ್ಯದ ಪ್ರಾದೇಶಿಕ ಮುಕ್ತ ವಿವಿಯಲ್ಲಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ತಲುಪಿದ್ದಾರೆ‌.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.