ಮಂಡ್ಯ: ಫೈನಾನ್ಸ್ ಕಂಪನಿಯೊಂದು ಬಡ್ಡಿ ಹೆಚ್ಚಳ ಮಾಡಿದ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಕಂಪನಿಯ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಡ್ಯದಲ್ಲಿ ಬುಧವಾರ ನಡೆದಿದೆ.
ಹೆಚ್ಚಿನ ಬಡ್ಡಿ ದರದಿಂದ ರೈತರು ಸಂಕಷ್ಟ ಅನುಭವಿಸವಂತಾಗಿದೆ. ಹೆಚ್ಚಿನ ಬಡ್ಡಿ ದರ ವಿಧಿಸಿರುವುದನ್ನು ಗಮನಕ್ಕೆ ತಂದರು ಕಂಪನಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಬಡ್ಡಿ ದರ ಕಡಿಮೆಗೊಳಿಸಿ ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುಂಚೆ ಕಚೇರಿಗೆ ಬೀಗ ಹಾಕಲು ಸಹಕರಿಸದ ಬ್ಯಾಂಕ್ ಸಿಬ್ಬಂದಿಯನ್ನ ರೈತ ಸಂಘದ ಮುಖಂಡರು ತರಾಟೆಗೆ ತೆಗೆದುಕೊಂಡರು.