ವಿಜಯಪುರ: ಸಾಲಬಾಧೆಯಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂದಗಿ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ನಡೆದಿದೆ.
ಗಂಗಪ್ಪ ಅಪ್ಪಣ ಶಿರಶ್ಶಾಡ (30) ಮೃತರೈತ. ಇವರು ತಮ್ಮ ಮನೆ ಪಕ್ಕದ ಹೊಲದ ಬದುವಿನಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡಿದ್ದು ಪತ್ನಿ, ಪುತ್ರ, ತಾಯಿಯನ್ನು ಅಗಲಿದ್ದಾರೆ.
ಗಂಗಪ್ಪ ತನ್ನ ಕುಟುಂಬದ ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ. 3 ಎಕರೆ 15 ಗುಂಟೆ ಜಮೀನು ಹೊಂದಿರುವ ಇವರು ಬೆಳೆಗಾಗಿ ಗುಬ್ಬೇವಾಡ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಶಾಂಕ್ ಶಾಖೆಯಲ್ಲಿ 1.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎಂಬ ಮಾಹಿತಿ ದೊರೆತಿದೆ.
ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.