ETV Bharat / briefs

ತಗ್ಗುತ್ತಿದೆ ಕೊರೊನಾ ಅಬ್ಬರ, ಅನ್ ಲಾಕ್ ಬಗ್ಗೆ ವ್ಯಾಪಕ ಚರ್ಚೆ: ಸರ್ಕಾರದ ಮುಂದಿರುವ ಪ್ಲಾನ್​ಗಳೇನು? - ಕರ್ನಾಟಕದಲ್ಲಿ ಕೊರೊನಾ

ಕೊರೊನಾ ಮೂರನೇ ಅಲೆ ಆತಂಕ ಈಗಾಗಲೇ ಶುರುವಾಗಿದ್ದು, ಹೀಗಾಗಿ ಕಠಿಣ ನಿಯಮಗಳೊಂದಿಗೆ, ವೈಜ್ಞಾನಿಕ ಮಾರ್ಗಸೂಚಿಗಳೊಂದಿಗೆ ಅನ್ ಲಾಕ್ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

 Extensive talk about Unlock in karnataka

author img

By

Published : Jun 8, 2021, 7:30 PM IST

ಬೆಂಗಳೂರು: ರಾಜಧಾನಿ ಸೇರಿದಂತೆ ಹಲವೆಡೆ ಕೊರೊನಾ ಸೋಂಕಿನ ಅಬ್ಬರ ತಗ್ಗುತ್ತಿರುವ ಬೆನ್ನಲ್ಲೇ ಇದೀಗ ಅನ್ ಲಾಕ್ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೊರೊನಾ ಮೊದಲನೇ ಅಲೆ ವೇಳೆ ಎಡವಿದ್ದಂತೆ ಈ ಬಾರಿ ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿರುವ ಸರ್ಕಾರ, ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳದೆ ಕಾದು, ಅಧ್ಯಯನ ನಡೆಸಿ ನಂತರ ಅಂತಿಮ ನಿರ್ಣಯ ಕೈಗೊಳ್ಳಲು ನಿರ್ಧರಿಸಿದೆ.

ಸರ್ಕಾರದ ನಿರ್ಣಯಗಳನ್ನು ಸೂಕ್ಷ್ಮವಾಗಿ ಗಮಿಸಿದರೆ, ಈ ಬಾರಿ ಅನ್ ಲಾಕ್ ಪ್ರಕ್ರಿಯೆಯಲ್ಲಿ ಚಿತ್ರಮಂದಿರಗಳು ಹಾಗೂ ಮಾಲ್ ತೆರೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇನ್ನು ಮದುವೆ ಸಮಾರಂಭಗಳಿಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಮೊದಲ ಅಲೆ ವೇಳೆ ಆದ ತಪ್ಪುಗಳು ಮರುಕಳಿಸದಂತೆ ಮಾಡಲು ಸರ್ಕಾರ ಹಾಗೂ ಅಧಿಕಾರಿಗಳು ಅಧಿಕ ಅವಧಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ಕುರಿತು ಕೆಲಸ ಮಾಡುತ್ತಿದ್ದಾರೆ.

ಕೊರೊನಾ ಮೂರನೇ ಅಲೆ ಆತಂಕ ಈಗಾಗಲೇ ಶುರುವಾಗಿದ್ದು, ಹೀಗಾಗಿ ಕಠಿಣ ನಿಯಮಗಳೊಂದಿಗೆ, ವೈಜ್ಞಾನಿಕ ಮಾರ್ಗಸೂಚಿಗಳೊಂದಿಗೆ ಅನ್​​ಲಾಕ್ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ದೇಶದ ಇತರ ರಾಜ್ಯಗಳ ಕ್ರಮ ಹಾಗೂ ನಿಯಮಗಳು, ಅಮೆರಿಕ, ಬ್ರಿಟನ್, ಆಸ್ಪ್ರೇಲಿಯಾ, ಬ್ಯಾಂಕಾಕ್ , ಹಾಂಕಾಂಗ್​ ರಾಷ್ಟ್ರಗಳ ಮಾದರಿಗಳನ್ನೂ ಸರ್ಕಾರದ ಅಧಿಕಾರಿಗಳು, ತಜ್ಞರು, ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಡರಾತ್ರಿವರೆಗೂ ಸರಣಿ ಸಭೆ:

ಅನ್ ಲಾಕ್ ಪ್ರಕ್ರಿಯೆ ಕುರಿತು ಸರ್ಕಾರದ ಅಧಿಕಾರಿಗಳು ತಡ ರಾತ್ರಿವರೆಗೂ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಉದ್ಯಾನವನಗಳು, ಆರಂಭಿಕ ಹಂತದಲ್ಲಿ ಆಟದ ಮೈದಾನಗಳ ತೆರೆಯಲು ನಿರ್ಧರಿಸಿದ್ದೇವೆ. ಇದರಿಂದ ಜನರು ವ್ಯಾಯಾಮ ಮಾಡಲು, ವಾಕಿಂಗ್ ಮಾಡಲು ಸಹಾಯವಾಗುತ್ತದೆ. ಇದಲ್ಲದೇ ಆರ್ಥಿಕ ಚಟುವಟಿಕೆ ಸುಧಾರಿಸುವ ಸಲುವಾಗಿ ಕೆಲವು ಕಚೇರಿಗಳನ್ನು ತೆರೆಯಲು ನಿರ್ಧರಿಸಿದ್ದೇವೆ. ಯಾವುದೇ ಜಾತ್ರೆ, ದೊಡ್ಡ ಮಟ್ಟದ ಸಭೆ ಸಮಾರಂಭಗಳಿಗೆ ಈ ಬಾರಿ ಅವಕಾಶ ನೀಡಲಾಗುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಚಿತ್ರಮಂದಿರ - ​ ಮಾಲ್​ಗಳಿಗಿಲ್ಲ ಅವಕಾಶ

ನಿರ್ಬಂಧಿತ ಚಟುವಟಿಕೆಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಆದರೆ, ಸಭೆ, ಸಮಾರಂಭಗಳಿಗೆ ಅವಕಾಶ ನೀಡಲಾಗುವುದಿಲ್ಲ. ಸೋಂಕಿತರ ಸಂಖ್ಯೆ ಕಡಿಮೆ ಇರುವಂತೆ ನೋಡಿಕೊಳ್ಳಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದಕ್ಕಾಗಿ ಕಠಿಣ ಕ್ರಮಗಳ ಅಗತ್ಯವೂ ಇದೆ. ಹೀಗಾಗಿ ಮಾಲ್, ಚಿತ್ರಮಂದಿರ, ರೆಸ್ಟೋರೆಂಟ್ ಗಳನ್ನು ತೆರೆಯದಿರಲು ನಿರ್ಧರಿಸಿದ್ದೇವೆ. ಇಂತಹ ಪ್ರದೇಶಗಳಿಂದಲೇ ಹೆಚ್ಚೆಚ್ಚು ಸೋಂಕು ಪತ್ತೆಯಾಗಿತ್ತು. ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಸಲೂನ್ ಗಳ ಆರಂಭ ಕುರಿತು ಚರ್ಚೆಗಳು ನಡೆಯುತ್ತಿವೆ. ಪರ್ಯಾಯ ದಿನಗಳಲ್ಲಿ ಮಾರುಕಟ್ಟೆ ತೆರೆಯುವ ಕುರಿತಂತೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅನ್ ಲಾಕ್ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವ ನಡುವಲ್ಲೇ ಜೂನ್.14 ರವರೆಗೂ ಅನ್ ಲಾಕ್ ಕುರಿತು ಸರ್ಕಾರ ಯಾವುದೇ ಘೋಷಣೆಗಳನ್ನೂ ಮಾಡಬಾರದು ಎಂದು ತಜ್ಞರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಕೊರೊನಾ ಮೂರನೇ ಅಲೆ ಎದುರಿಸಲು ಸರ್ಕಾರ ಮತ್ತಷ್ಟು ಕಾಲಾವಕಾಶ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.