ಬೆಂಗಳೂರು: ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆಗಿಳಿದಿದ್ದಾರೆ, ಕಳೆದ ಒಂದು ವಾರದಿಂದ ಅಕ್ರಮವಾಗಿ ಪುಟ್‌ಪಾತ್ ಒತ್ತುವರಿ ಸೇರಿದಂತೆ ಅಪಘಾತ ಪ್ರಕರಣ ಸಂಬಂಧ ಸಮಸ್ಯೆಗೆ ಕಾರಣವಾಗಿರುವ ಹಲವಾರು ಪ್ರಕರಣಗಳನ್ನ ದಾಖಲಿಸಿದ್ದಾರೆ.
ಟ್ರ್ಯಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಹಿನ್ನೆಲೆಯಲ್ಲಿ ನಗರದ ವಿವಿಧ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 3,916 ಪ್ರಕರಣಗಳು ದಾಖಲಾಗಿದೆ. ಫುಟ್ ಪಾತ್ ಮೇಲೆ ಬೈಕ್ ಚಾಲನೆಗೆ ಸಂಬಂಧಿಸಿದ 500 ಪ್ರಕರಣಗಳು, ಫುಟ್‌ಪಾತ್ ಮೇಲೆ ವಾಹನ ಪಾರ್ಕಿಂಗ್ ಸಂಬಂಧ 2,514 ಕೇಸ್‌ಗಳು, ಫುಟ್‌ಪಾತ್ ಒತ್ತುವರಿ ತೆರವು ಸಂಬಂಧ 791 ಪ್ರಕರಣಗಳು ದಾಖಲಾಗಿದೆ.