ಗಂಗಾವತಿ: 2ಬಿ ವರ್ಗಕ್ಕೆ ಮಾತ್ರ ಪೂರ್ಣ ಪ್ರಮಾಣದ ಪರೀಕ್ಷಾ ಶುಲ್ಕ ಪಾವತಿಗೆ ಆದೇಶಿಸಿರುವ ತಾರತಮ್ಯ ನೀತಿ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಪ್ರಮುಖರು ನಗರದ ಸರ್ಕಾರಿ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಆನೆಗೊಂದಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿದ ಸಂಘಟನೆ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷ ಚಾಂದ್ ಸಲ್ಮಾನ್ ನೇತೃತ್ವದಲ್ಲಿ ಕಾಲೇಜಿಗೆ ಮುತ್ತಿಗೆ ಹಾಕಿದರು.
ಕೂಡಲೇ ಇತರ ಸಮುದಾಯದ ವಿದ್ಯಾರ್ಥಿಗಳಂತೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ನೀಡಬೇಕು. ಇದನ್ನು ಬಳ್ಳಾರಿ ವಿವಿ ಗಮನಕ್ಕೆ ತಂದು ಇದರ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸಂಘಟಕರು ಒತ್ತಾಯಿಸಿ ಕಾಲೇಜಿನ ಪ್ರಾಚಾರ್ಯ ಜಿ.ಎನ್.ಹೆಬ್ಸೂರು ಅವರಿಗೆ ಮನವಿ ಸಲ್ಲಿಸಿದರು.