ನಾಟಿಂಗ್ಹ್ಯಾಮ್: ಮೊದಲ ಪಂದ್ಯದಲ್ಲಿ ಗೆದ್ದಿರುವ ಇಂಗ್ಲೆಂಡ್ ಹಾಗೂ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲುಕಂಡಿರುವ ಪಾಕಿಸ್ತಾನ ತಂಡಗಳ ಮುಖಾಮುಖಿಯಲ್ಲಿ ಟಾಸ್ಗೆದ್ದ ಇಂಗ್ಲೆಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡಡಿದೆ.
ಬಲಿಷ್ಠ ಬ್ಯಾಟಿಂಗ್ ಹೊಂದಿರುವ ಇಂಗ್ಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 104 ರನ್ಗಳ ಭರ್ಜರಿ ಜಯಸಾಧಿಸಿದೆ. ಜಾಸನ್ ರಾಯ್, ರೂಟ್, ಮಾರ್ಗನ್, ಬೆನ್ಸ್ಟೋಕ್ಸ್ ಅದ್ಭುತ ಫಾರ್ಮ್ನಲ್ಲಿರುವುದರಿಂದ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಆಲೋಚನೆಯಲ್ಲಿ ಇಂಗ್ಲೆಂಡ್ ತಂಡವಿದೆ.
-
England bring in Mark Wood in place of Liam Plunkett, while Pakistan replace Imad Wasim and Haris Sohail with Asif Ali and Shoaib Malik. #EngvPak#CWC19 pic.twitter.com/1CgcN3Cuhq
— Cricket World Cup (@cricketworldcup) June 3, 2019 " class="align-text-top noRightClick twitterSection" data="
">England bring in Mark Wood in place of Liam Plunkett, while Pakistan replace Imad Wasim and Haris Sohail with Asif Ali and Shoaib Malik. #EngvPak#CWC19 pic.twitter.com/1CgcN3Cuhq
— Cricket World Cup (@cricketworldcup) June 3, 2019England bring in Mark Wood in place of Liam Plunkett, while Pakistan replace Imad Wasim and Haris Sohail with Asif Ali and Shoaib Malik. #EngvPak#CWC19 pic.twitter.com/1CgcN3Cuhq
— Cricket World Cup (@cricketworldcup) June 3, 2019
ಇತ್ತ ಮೊದಲ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಕೇವಲ 105 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲುಕಂಡಿರುವ ಪಾಕಿಸ್ತಾನ ಈ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ಇಂಗ್ಲೆಂಡ್ ವಿರುದ್ಧ ಹೊಸ ಆಲೋಚನೆಗಳಿಂದ ಕಣಕ್ಕಿಳಿಯುತ್ತಿದೆ. ಆಸಿಪ್ ಅಲಿ, ಶದಾಬ್ ಖಾನ್, ಮಲಿಕ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಇಂಗ್ಲೆಂಡ್:
ಇಯಾನ್ ಮಾರ್ಗನ್(ನಾಯಕ), ಜಾಸನ್ ರಾಯ್, ಜಾನಿ ಬೈರ್ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ವುಡ್, ಜೋಫ್ರಾ ಆರ್ಚರ್, ಆದಿಲ್ ರಶೀದ್
ಪಾಕಿಸ್ತಾನ:
ಸರ್ಫರಾಜ್ ಅಹ್ಮದ್(ನಾಯಕ), ಫಾಖರ್ ಝಮಾನ್, ಆಸಿಫ್ ಅಲಿ, ಹಸನ್ ಅಲಿ, ಇಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಬಾಬರ್ ಅಜಂ, ಮೊಹ್ಮದ್ ಆಮಿರ್, ವಹಾಬ್ ರಿಯಾಜ್, ಶದಾಬ್ ಖಾನ್