ಸೌತಾಂಪ್ಟನ್: ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಕೆರಿಬಿಯನ್ ಪಡೆ ಆತಿಥೇಯ ಇಂಗ್ಲೆಂಡ್ ತಂಡವನ್ನ ಎದುರಿಸಲಿದ್ದು, ಟಾಸ್ ಗೆದ್ದಿರುವ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯವನ್ನ ಗೆದ್ದಿರುವ ಇಂಗ್ಲೆಂಡ್ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ 104 ರನ್ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ, 2ನೇ ಪಂದ್ಯದಲ್ಲಿ ಪಾಕ್ ವಿರುದ್ಧ 14 ರನ್ಗಳ ಸೋಲು ಅಭವಿಸಿದ್ದು, ಬಾಂಗ್ಲಾ ವಿರುದ್ಧ 106 ರನ್ಗಳ ಬೃಹತ್ ಜಯ ದಾಖಲಿಸಿದೆ.
ಬ್ಯಾರ್ಸ್ಟೋವ್, ಜಾಸನ್ ರಾಯ್ ಹಾಗೂ ಜೋ ರೂಟ್ ಆರಂಭದಲ್ಲಿ ಅಬ್ಬರಿಸಿದರೆ, ಮಾರ್ಗನ್, ಬೆನ್ಸ್ಟೋಕ್ಸ್ ಹಾಗೂ ಬಟ್ಲರ್ ಉತ್ತಮ ಬ್ಯಾಟಿಂಗ್ ಟಚ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ವೋಕ್ಸ್, ಮಾರ್ಕ್ವುಡ್, ಜೋಫ್ರಾ ಆರ್ಚರ್ರಂತ ಮಾರಕ ವೇಗಿಗಳ ಜೊತೆಗೆ ಮೊಯಿನ್ ಅಲಿ, ಆದಿಲ್ ರಶೀದ್ರಂತಹ ಸ್ಪಿನ್ ಬೌಲಿಂಗ್ ಶಕ್ತಿ ಕೂಡ ಆಂಗ್ಲರಿಗಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಗೆದ್ದಿದ್ದ ಕೆರಿಬಿಯನ್ನರು, ದ್ವಿತೀಯ ಪಂದ್ಯದಲ್ಲಿ ಸಣ್ಣ ಅಂತರದಿಂದ ಆಸೀಸ್ ವಿರುದ್ಧ ಸೋಲನುಭವಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದು, 3 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
-
#EoinMorgan has opted to bowl first in Southampton. 🏏
— Cricket World Cup (@cricketworldcup) June 14, 2019 " class="align-text-top noRightClick twitterSection" data="
FOLLOW #ENGvWI ▶️ https://t.co/HmtembPBxn#WeAreEngland#MeninMaroon pic.twitter.com/w55F6BP5jD
">#EoinMorgan has opted to bowl first in Southampton. 🏏
— Cricket World Cup (@cricketworldcup) June 14, 2019
FOLLOW #ENGvWI ▶️ https://t.co/HmtembPBxn#WeAreEngland#MeninMaroon pic.twitter.com/w55F6BP5jD#EoinMorgan has opted to bowl first in Southampton. 🏏
— Cricket World Cup (@cricketworldcup) June 14, 2019
FOLLOW #ENGvWI ▶️ https://t.co/HmtembPBxn#WeAreEngland#MeninMaroon pic.twitter.com/w55F6BP5jD
ಗೇಲ್, ಹೋಪ್, ಆಶ್ಲೇ ನರ್ಸ್, ನಿಕೋಲಸ್ ಪೂರನ್ ಹೇಟ್ಮಯರ್ಗಳಂತಹ ದೈತ್ಯ ಬ್ಯಾಟ್ಸ್ಗಳಿರುವ ವೆಸ್ಟ್ ಇಂಡೀಸ್ ತಂಡ ಬಲಿಷ್ಠವಾಗಿದೆ. ಬೌಲಿಂಗ್ನಲ್ಲಿ ಕಾಟ್ರೇಲ್, ಓಶಾನ್ ಥೋಮಸ್ ಅದ್ಭುತ ಫಾರ್ಮ್ನಲ್ಲಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡ ಇಲ್ಲಿಯವರೆಗೆ 6 ಬಾರಿ ಮುಖಾಮುಖಿಯಾಗಿದ್ದು ಐದು ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದಿದ್ರೆ, ಒಂದರಲ್ಲಿ ಮಾತ್ರ ವಿಂಡೀಸ್ ಗೆಲುವು ಸಾಧಿಸಿದೆ.
ವೆಸ್ಟ್ ಇಂಡೀಸ್ ಅಂಡರ್ 19 ತಂಡದಲ್ಲಿ ಆಡಿದ್ದ ಜೋಫ್ರಾ ಆರ್ಚರ್ ಈಗ ಇಂಗ್ಲೆಂಡ್ ತಂಡಪರ ಆಡುತ್ತಿದ್ದು, ಮೊದಲ ಬಾರಿಗೆ ತವರು ತಂಡದ ವಿರುದ್ಧ ಯಾವರಿತಿ ಪ್ರದರ್ಶನ ತೋರುತ್ತಾರೆ ಎಂಬ ಕುತೂಹಲ ಮೂಡಿದೆ.
ಇಂಗ್ಲೆಂಡ್ ತಂಡ: ಇಯಾನ್ ಮಾರ್ಗನ್(ನಾಯಕ), ಜಾಸನ್ ರಾಯ್, ಜಾನಿ ಬೈರ್ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್, ಲೈಮ್ ಫ್ಲಂಕೇಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್
ವೆಸ್ಟ್ ಇಂಡೀಸ್ ತಂಡ: ಕ್ರಿಸ್ ಗೇಲ್, ಶೈ ಹೋಪ್, ಎವಿನ್ ಲೆವಿಸ್, ಶಿಮ್ರೋನ್ ಹೇಟ್ಮಯರ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಕಾರ್ಲೋಸ್ ಬ್ರಾತ್ವೈಟ್, ಶಾನೊನ್ ಗೇಬ್ರಿಯಲ್, ಶೆಲ್ಡನ್ ಕಾಟ್ರೆಲ್, ಓಶಾನ್ ಥೋಮಸ್