ಲಂಡನ್: ಅಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಆಫ್ಘಾನ್ 38.4 ಓವರ್ಗಳಲ್ಲಿ 160 ರನ್ಗಳಿಗೆ ಆಲೌಟ್ ಆಯಿತು. ನೂರ್ ಅಲಿ ಜಾರ್ಡನ್ 30 ಹಾಗೂ ಮೊಹಮ್ಮದ್ ನಬಿ 44 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿದರು.
ಇಂಗ್ಲೆಂಡ್ ಪರ ಉದಯೋನ್ಮುಕ ಬೌಲರ್ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರೆ, ಜೋ ರೂಟ್ 3, ಮೊಯಿನ್ ಅಲಿ ಹಾಗೂ ಬೆನ್ಸ್ಟೋಕ್ಸ್ ತಲಾ ಒಂದು ವಿಕೆಟ್ಪಡೆದರು.
161 ರನ್ಗಳ ಸುಲಭ ಗುರಿ ಬೆನ್ನೆತ್ತಿದ ಇಂಗ್ಲೆಂಡ್ ಜಾಸನ್ ರಾಯ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 17.3 ಓವರ್ಗಳಲ್ಲಿ ಗುರಿ ತಲುಪಿತು. 46 ಎಸೆತಗಳನ್ನು ಎದುರಿಸಿದ 11 ಬೌಂಡರಿ 4 ಸಿಕ್ಸರ್ ಸಹಿತ 89 ರನ್ಗಳಿಸಿ ಔಟಾಗದೆ ಉಳಿದರು. ಇವರಿಗೆ ಸಾಥ್ ನೀಡಿದ ಬೈರ್ಸ್ಟೋವ್ 39 ರನ್ಗಳಿಸಿ ಔಟಾದರು. ಜೂ ರೂಟ್ 29 ರನ್ಗಳಿಸಿ ಔಟಾಗದೆ ಉಳಿದರು.
ಇಂಗ್ಲೆಂಡ್ ಮೇ 30 ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.