ಮೈಸೂರು: ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಹಿನ್ನೆಲೆಯಲ್ಲಿ ತೆರವಾಗಿದ್ದ ಮೇಯರ್ ಸ್ಥಾನಕ್ಕೆ ಜೂನ್ 11ರಂದು ಚುನಾವಣೆ ಫಿಕ್ಸ್ ಆಗಿದೆ.
ಕಳೆದ ರಾತ್ರಿ ನಮಗೆ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದು ಆದೇಶ ಬಂದಿದೆ. ಮೇಯರ್ ಚುನಾವಣೆ ನಡೆಯುವವರೆಗೂ ಉಪಮೇಯರ್ ಅಧಿಕಾರ ಚಲಾಯಿಸಲಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಜೊತೆ ಚರ್ಚೆ ಬಳಿಕ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾಹಿತಿ ನೀಡಿದ್ದಾರೆ.
ತಕ್ಷಣ ನಾವು ಪ್ರದೇಶ ಆಯುಕ್ತರಿಗೆ ಪತ್ರ ಬರೆದಿದ್ದೆವು. ಇಂದು ಚರ್ಚೆಗೆ ಪ್ರಾದೇಶಿಕ ಆಯುಕ್ತರು ಕರೆದಿದ್ದರು. ಜೂನ್ 11ರಂದು ಚುನಾವಣೆಗೆ ದಿನಾಂಕ ನಿಗದಿ ಮಾಡಿದ್ದೇವೆ. ಕಾಯ್ದೆಯಲ್ಲಿ ಮತ್ತೆ ಚುನಾವಣೆಗೆ ಅವಕಾಶ ಇದೆ ಎಂಬುದನ್ನ ಪರಿಶೀಲಿಸಿ ತೀರ್ಮಾನ ಮಾಡಲಾಗಿದೆ. ಕೊರೊನಾ ನಿಯಮಗಳನ್ನ ಪಾಲಿಸುತ್ತೇವೆ. ಎಲ್ಲರಿಗೂ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ ಚುನಾವಣೆ ನಡೆಸುತ್ತೇವೆ ಎಂದಿದ್ದಾರೆ.