ಹಾಸನ: ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಮಧ್ಯೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೂಡ ನಡೆಸುತ್ತಿದ್ದಾರೆ. ಇನ್ನು ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ವ್ಯಕ್ತಿಯೋರ್ವ ಅವಾಂತರ ಸೃಷ್ಠಿ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಬಿಜೆಪಿ ಅಭಿಮಾನಿವೋರ್ವ ಇಲ್ಲಿನ ಬಿ.ಎಂ.ರಸ್ತೆ ನಡುವೆ ನಿಂತು ಮೋದಿ, ಮೋದಿ ಎಂದು ವಾಹನಗಳನ್ನ ಅಡ್ಡಗಟ್ಟಿ ಅವಾಂತರ ಸೃಷ್ಟಿಸಿದ್ದಾನೆ. ಕುಡಿದ ಮತ್ತಿನಲ್ಲಿ ರಸ್ತೆ ನಡುವೆ ನಿಂತು ವಾಹನಗಳನ್ನು ಅಡ್ಡಗಟ್ಟಿ ಮೋದಿಗೆ ಮತ ಹಾಕಬೇಕು.ದೇಶಕ್ಕೆ ಮೋದಿ ಬೇಕು ಎಂದು ಸುಮಾರು 15 ನಿಮಿಷಗಳ ಕಾಲ ರಂಪಾಟ ನಡೆಸಿದ್ದಾನೆ.
![Drunken man created scene](https://etvbharatimages.akamaized.net/etvbharat/images/vlcsnap-2019-03-26-01h03m21s641_2603newsroom_00000_493.png)
ಇದೇ ವೇಳೆ ಪೊಲೀಸ್ ವಾಹನವನ್ನ ಈತ ಅಡ್ಡಗಟ್ಟಿದ್ದರೂ ಅದರಲ್ಲಿದ್ದ ಸಿಬ್ಬಂದಿ ನಮಗೇಕೆ ಎಂದು ಸುಮ್ಮನೆ ಹೋಗಿದ್ದಾರೆ. ಈತ ವಾಹನ ಸವಾರರು ಕೆಲ ಸಮಯ ಕಿರಿಕಿರಿ ಅನುಭವಿಸಿದರೆ, ಕೆಲವರು ಪುಕ್ಕಟೆ ಮನರಂಜನೆ ಪಡೆದುಕೊಂಡರು. ಕೊನೆಯದಾಗಿ ಆತನ ಸ್ನೇಹಿತರು ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.