ETV Bharat / briefs

ರಾಜ್ಯಾದ್ಯಂತ ರಾಜ್​ಕುಮಾರ್​ ಹುಟ್ಟುಹಬ್ಬದ ಸಂಭ್ರಮ... ವಿವಿಧೆಡೆ ವಿಭಿನ್ನವಾಗಿ ಆಚರಿಸಿದ ಅಣ್ಣಾವ್ರ ಅಭಿಮಾನಿಗಳು!

ರಾಜ್ಯಾದ್ಯಂತ ವರನಟ, ಕನ್ನಡಿಗರ ಕಣ್ಮಣಿ ಡಾ.ರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ರಾಜ್ಯದ ವಿವಿಧೆಡೆ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.

ರಾಜ್​ಕುಮಾರ್
author img

By

Published : Apr 25, 2019, 5:55 AM IST

ಬೆಂಗಳೂರು: ಏಪ್ರಿಲ್​​ 24ರಂದು ರಾಜ್ಯಾದ್ಯಂತ ವರನಟ, ಕನ್ನಡಿಗರ ಕಣ್ಮಣಿ ಡಾ.ರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ರಾಜ್ಯದ ವಿವಿಧೆಡೆ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.

ತುಮಕೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಡಾ.ರಾಜಕುಮಾರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಡಾ. ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಮಾತನಾಡಿ, ಡಾಕ್ಟರ್ ರಾಜಕುಮಾರ್ ನಾಡು ಕಂಡ ಶ್ರೇಷ್ಠ ನಟ, ನಾಯಕ ಮತ್ತು ಖಳ ನಾಯಕನ ಪಾತ್ರ ಮಾಡುವುದಲ್ಲಿ ನಿಸ್ಸೀಮ. ಒಬ್ಬ ನಟ ಎಂದರೆ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟ ಶ್ರೇಷ್ಠ ವ್ಯಕ್ತಿ. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮ್ಮ ಜೀವಿತಾವಧಿಯಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಬೇರೆಯವರಿಗೂ ಮಾದರಿ ಎನಿಸಿದರು ಎಂದು ರಾಜ್​ಕುಮಾರ್​ ಗುಣಗಾನ ಮಾಡಿದರು. ಅಪಾರ ಜಿಲ್ಲಾಧಿಕಾರಿ ಚನ್ನಬಸಪ್ಪ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

ಹಾಗೆಯೇ ತುಮಕೂರಿನ ರಾಜ್​ಕುಮಾರ್ ಅಭಿಮಾನಿ ಹೊರಪೇಟೆ ಹರಳೂರು ಕುಮಾರ್ ಅವರು, ರಾಜ್ ಹೆಸರಿನಲ್ಲಿ ಅನ್ನಸಂತರ್ಪಣೆ ಮಾಡುವ ಮೂಲಕ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಂಸದ ಜಿ. ಎಸ್. ಬಸವರಾಜು ರಾಜ್ ಕುಮಾರ್ ನಮಗೆಲ್ಲ ದಾರಿದೀಪ, ಸರಳ ಸಜ್ಜನಿಕೆಗೆ ಹೆಸರಾಗಿದ್ದವರು. ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಸಕ್ಕರೆ ನಗರಿ ಮಂಡ್ಯ ಜಿಲ್ಲೆಯೆಲ್ಲೆಡೆ ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಕನ್ನಡ ಪರ ಸಂಘಟನೆಗಳು, ಜಿಲ್ಲಾಡಳಿತ ಹಾಗೂ ಅಭಿಮಾನಿಗಳು ನಗರದಲ್ಲಿ ಸಿಹಿ ಹಂಚಿದರು. ಇನ್ನು ಕನ್ನಡ ಪರ ಸಂಘಟನೆಗಳು ನಗರದ ಕೆ ಆರ್ ವೃತ್ತ ದಲ್ಲಿರುವ ಡಾ. ರಾಜ್ ಪುತ್ಥಳಿಗೆ ಹೂ ಮಾಲೆ ಹಾಕುವ ಮೂಲಕ ಗೌರವ ಸಲ್ಲಿಸಿದರು. ಜಯ ಕರ್ನಾಟಕ, ರಕ್ಷಣಾ ವೇದಿಕೆ, ಕಾರ್ಮಿಕರ ವೇದಿಕೆ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹುಟ್ಟುಹಬ್ಬ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮಂಡ್ಯ ಜಿಲ್ಲಾಡಳಿತದ ವತಿಯಿಂದ ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜ್ ರವರ ಫೋಟೋಗೆ ಗೌರವ ಸಲ್ಲಿಸಲಾಯಿತು.

ಕೋಟೆನಾಡು ಚಿತ್ರದುರ್ಗದಲ್ಲೂ ಜಿಲ್ಲಾಡಳಿತದ ವತಿಯಿಂದ ಕರ್ನಾಟಕದ ನಟ ಸಾರ್ವಭೌಮ ಡಾ, ರಾಜಕುಮಾರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿ ವಿನೋತ್ ಪ್ರಿಯಾರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕಧಿಕಾರಿ ಸತ್ಯಭಾಮರವರು ಕೂಡ ಪುಷ್ಪಾರ್ಚನೆ ಮಾಡಿ ಅವರ ಚಿತ್ರಗಳ ಸರಮಾಲೆಯನ್ನು ನೆನಪಿಸಿದರು. ಇದೇ ಸಮಯದಲ್ಲಿ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಮತ್ತಿತರರು ಭಾಗಿಯಾಗಿದ್ದರು.

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲೂ ವರನಟನ ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇರು ನಟನ ಭಾವಚಿತ್ರಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ವಿ.ಎಂ. ಹೆಗಡೆ ಪುಷ್ಪನಮನ ಸಲ್ಲಿಸಿದರು. ರಾಜ್​ಕುಮಾರ್​​ ಹುಟ್ಟುಹಬ್ಬವನ್ನು ರಾಜ್ಯ ಸರ್ಕಾರ ಕಳೆದ ವರ್ಷದಿಂದ ಅಧಿಕೃತವಾಗಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡಿದ್ದು, ಜಿಲ್ಲಾಡಳಿತವು ಇಂದು ಎರಡನೇ ವರ್ಷದ ಜಯಂತಿಯನ್ನು ಚುನಾವಣಾ ಪ್ರಕ್ರಿಯೆ ನಡುವೆಯೂ ಸರಳವಾಗಿ ಆಚರಿಸಿತು. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಪುರುಷೋತ್ತಮ, ವಾರ್ತಾ ಮತ್ತು ಸಂಪರ್ಕ ಇಲಾಖೆ ಹಿಮಂತರಾಜು ಇದ್ದರು.

ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಹಾಗೂ‌ ಮಾಲೀಕರು ಡಾ. ರಾಜಕುಮಾರ ಅವರ 91 ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದರು. ನಗರದ ಚನ್ನಮ್ಮ ವೃತ್ತದಲ್ಲಿ ವರನಟ ರಾಜ್​ಕುಮಾರ ಪರ ಘೋಷಣೆ ಕೂಗಿದರು.

ಹಾಸನದಲ್ಲೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತದಿಂದ ಡಾ. ರಾಜ್ ಕುಮಾರ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ರಾಜ್ ಕುಮಾರ್ ಕೇವಲ ಸಿನಿಮಾದಲ್ಲಿ ನಟ ಮಾತ್ರರಲ್ಲ, ಒಬ್ಬ ಒಳ್ಳೆಯ ಸರಳ ಸಜ್ಜನಿಕ್ಕೆಯ ಪ್ರತೀಕವಾಗಿದ್ದರು ಎಂದು ಸ್ಮರಿಸಿದರು. ಇದೇ ವೇಳೆ ಹಾಡುಗಾರ ಹಾಗೂ ಉಪನ್ಯಾಸಕ ಮನ್ಸೂರ್ ಪಾಷ ರಾಜ್ ಕುಮಾರ್ ಅವರ ಹಾಡುಗಳನ್ನು ಹಾಡಿ ಜನರ ಮನ ರಂಜಿಸಿದರು.

ವಿವಿಧೆಡೆ ರಾಜಕುಮಾರ್​ ಹುಟ್ಟುಹಬ್ಬದ ಸಂಭ್ರಮ

ಹಾವೇರಿಯಲ್ಲೂ ನಗರದ ವಾರ್ತಾ ಭವನದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಾ.ರಾಜ್‍ಕುಮಾರ್ ಅವರ 91ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಮಾತನಾಡಿದ ಜಿ.ಪಂ. ಸಿಇಒ ಕೆ.ಲೀಲಾವತಿ, ಡಾ.ರಾಜ್‍ಕುಮಾರ್ ಅವರು ಮೇರು ವ್ಯಕ್ತಿತ್ವದ ಸರಳ ಜೀವಿಯಾಗಿದ್ದರು. ಅವರ ನಡೆ-ನುಡಿ, ಉಡಿಗೆ ಸಹ ಸರಳ ಹಾಗೂ ಆದರ್ಶಮಯವಾಗಿತ್ತು ಎಂದರು

ಹಾಗೆಯೇ ಬಾಗಲಕೋಟೆಯಲ್ಲೂ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್​ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಡಾ.ರಾಜ್‍ಕುಮಾರ
ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ಜಿ.ಪಂ. ಸಿಇಓ ಗಂಗೂಬಾಯಿ ಮಾನಕರ, ಅಭಿನಯಿಸುವ ಪಾತ್ರಕ್ಕೆ ಜೀವ ನೀಡಿ ಆ ಪಾತ್ರದಲ್ಲಿ ತಾನೇ ತಾನಾಗಿ ಅಭಿನಯಿಸಿ ಅಭಿಮಾನಿಗಳ ಹೃದಯದಲ್ಲಿ ನೆಲೆ ನಿಂತವರು ಡಾ.ರಾಜ್‍ಕುಮಾರ್ ಎಂದು ವರನಟನ ಗುಣಗಾನ ಮಾಡಿದರು.

ಹಾಗೆಯೇ ಮಲೆನಾಡು ಶಿವಮೊಗ್ಗದಲ್ಲೂ ದುರ್ಗಿಗುಡಿ ಕನ್ನಡ ಸಂಘದ ವತಿಯಿಂದ ರಾಜ್​ಕುಮಾರ್​ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದುರ್ಗಿಗುಡಿ ಕನ್ನಡ ಸಂಘವು 50 ವರ್ಷ ಪೂರೈಸಿದ ಕನ್ನಡ ಸಂಘವಾಗಿದೆ. ಕನ್ನಡ ಸಂಘದ ಧ್ವಜ ಸ್ಥಂಬದ ಬಳಿ ಅಣ್ಣವ್ರಾ ಪೊಟೋ ಇಟ್ಟು ಸಂಘದ ಅಧ್ಯಕ್ಷರಾದ ಸ.ನಾ.ಮೂರ್ತಿ ರವರು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಕಲಾವಿದನಿಂದ ಕುಂಚ ನಮನ:
ಹಾಗೆಯೇ ಬಳ್ಳಾರಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕೆಂಚಪ್ಪ ಡ್ರಾಯಿಂಗ್ ಮಾಡಿ ಡಾ. ರಾಜ್​ ಅವರಿಗೆ ಜನ್ಮ ದಿನದ ಶುಭ ಕೋರಿದ್ದು ವಿಶೇಷವಾಗಿತ್ತು.

ಇನ್ನು ಮೈಸೂರು ಮಹಾರಾಜ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ. ರಾಜ್‍ಕುಮಾರ್ ಅವರು ಮಹಾರಾಜ ಜಯಚಾಮರಾಜ ಒಡೆಯರವರಿಂದ ಗೌರವಿಸಲ್ಪಡುತ್ತಿರುವ ಹಳೆಯ ಫೋಟೋವೊಂದನ್ನು ಶೇರ್​ ಮಾಡುವ ಮೂಲಕ ಡಾ.ರಾಜ್‍ಕುಮಾರ್ ಜಯಂತಿಯ ಶುಭಾಶಯ ತಿಳಿಸಿದ್ದಾರೆ.

ಒಟ್ಟಿನಲ್ಲಿ ರಾಜ್ಯಾದ್ಯಂತ ರಾಜ್​ಕುಮಾರ್​ ಜಯಂತಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

Intro:ತುಮಕೂರು: ಕನ್ನಡದ ಧೀಮಂತ ನಾಯಕರಾದ ಡಾಕ್ಟರ್ ರಾಜ್ ಕುಮಾರ್ ನಮಗೆಲ್ಲ ದಾರಿದೀಪ, ಸರಳ ಸಜ್ಜನಿಕೆಗೆ ಹೆಸರಾಗಿದ್ದವರು. ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಮಾಜಿ ಸಂಸದ ಜಿ ಎಸ್ ಬಸವರಾಜು ತಿಳಿಸಿದರು.

Body:ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಾಯಕ ನಟರಲ್ಲಿ ಡಾ. ರಾಜ್ ಕುಮಾರ್ ಮೊದಲಿಗರು ಇವರ ನಟನೆ ಅಮೋಘ, ಇವರ ಜೀವನ ಪ್ರತಿಯೊಬ್ಬರಿಗೂ ಮಾದರಿ, ಇಂತಹ ನಾಯಕನ ಜನ್ಮದಿನವನ್ನು ತುಮಕೂರು ನಗರದ ವಿವಿಧೆಡೆ ಆಚರಿಸಲಾಯಿತು.
ರಾಜ್ ಕುಮಾರ್ ಅವರ ಅಭಿಮಾನಿಗಳಾದ ಹೊರಪೇಟೆ ಹರಳೂರು ಕುಮಾರ್ ಅವರು ಜನ್ಮ ದಿನದ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಇದೇ ವೇಳೆ ಮಾಜಿ ಸಂಸದ ಜಿ ಎಸ್ ಬಸವರಾಜು ಮಾತನಾಡಿ, ಡಾಕ್ಟರ್ ರಾಜ್ ಕುಮಾರ್ ಅವರು ಒಂದು ಶಕ್ತಿ, ಅವರ ನಟನೆ, ಸಾಮಾಜಿಕ ಸಂದೇಶ ಸಾರುವ ಚಿತ್ರಗಳು ಇಂದಿಗೂ ಅಜರಾಮರ ಎಂದರು.
ನಗರದ ಸೋಮೇಶ್ವರದಲ್ಲಿಯು ರಾಜಕುಮಾರ್ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

Conclusion:ಇದೇ ವೇಳೆ ಹರಳೂರು ಕುಮಾರ್ ಅವರು ರಾಜ್ ಹೆಸರಿನಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದರು.

ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.