ಬಾರಾಬಂಕಿ(ಯುಪಿ): ವಿಷಯುಕ್ತ ಮದ್ಯ ಸೇವನೆ ಮಾಡಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ 12 ಮಂದಿ ಸಾವನ್ನಪ್ಪಿರುವ ಘಟನೆ ರಾಣಿಗಂಜ್ ಪ್ರದೇಶದಲ್ಲಿ ನಡೆದಿದೆ.
ಮದ್ಯ ಸೇವನೆ ಮಾಡುತ್ತಿದ್ದಂತೆ ಅನೇಕರು ಅಸ್ವಸ್ಥಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ 10ಕ್ಕೂ ಹೆಚ್ಚಿನವರ ಸ್ಥಿತಿ ಈಗಲೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಒಂದೇ ಕುಟುಂಬದಲ್ಲಿ ವಾಸವಾಗಿದ್ದ ನಾಲ್ವರು ಸಾವನ್ನಪ್ಪಿರುವುದರಿಂದ ಅವರ ಮೃತದೇಹಗಳ ಅಂತ್ಯಕ್ರಿಯೆ ನಡೆಸಲು ಬಂಧುಗಳೇ ಇಲ್ಲದಂತಾಗಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ವಿಷಯುಕ್ತ ಮದ್ಯ ಸೇವನೆ ಮಾಡಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ ದುರಂತ ನಡೆದಿತ್ತು.
ಕಳೆದ ಕೆಲ ದಿನಗಳ ಹಿಂದೆ ಆಸ್ಸೋಂನಲ್ಲಿ ಇಂತಹ ಪ್ರಕರಣ ನಡೆದಿತ್ತು. ಘಟನೆಯಲ್ಲಿ 143 ಮಂದಿ ಸಾವನ್ನಪ್ಪಿದ್ದರು.