ETV Bharat / briefs

ಆಸೀಸ್​ ವಿರುದ್ಧ ಗಬ್ಬರ್​ಸಿಂಗ್​ ಶತಕ! ಪಾಂಟಿಂಗ್​,ಸಂಗಕ್ಕಾರ ದಾಖಲೆ ಸರಿಗಟ್ಟಿದ ಧವನ್​

ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ ಶಿಖರ್‌ ಧವನ್​ ಆಕರ್ಷಕ ಶತಕ ಸಿಡಿಸುವ ಮೂಲಕ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಈ ಮೂಲಕ ಐಸಿಸಿ ಆಯೋಜನೆಯ ಟೂರ್ನಿಗಳಲ್ಲಿ ಅತೀ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

dhawan
author img

By

Published : Jun 9, 2019, 5:58 PM IST

ಲಂಡನ್​: ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸುತ್ತಿರುವ ಗಬ್ಬರ್​ಸಿಂಗ್​ ಖ್ಯಾತಿಯ ಶಿಖರ್​ ಧವನ್​ ಆಕರ್ಷಕ ಶತಕ ದಾಖಲು ಮಾಡಿ ಭಾರತ ತಂಡ ಬೃಹತ್​ ಮೊತ್ತದತ್ತ ದಾಪುಗಾಲು ಹಾಕಲು ನೆರವಾಗಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಮಾಡುತ್ತಿರುವ ಭಾರತ ತಂಡಕ್ಕೆ ಶಿಖರ್‌ ಧವನ್​ ಹಾಗೂ ರೋಹಿತ್ ಶರ್ಮಾ​ ಮೊದಲ ವಿಕೆಟ್​ಗೆ 127 ರನ್​ಗಳ ಜೊತೆಯಾಟ ನೀಡಿದರು. 57 ರನ್ ​ಗಳಿಸಿದ್ದ ರೋಹಿತ್​ ಔಟಾದರು.

  • Most centuries in ICC ODI tournaments:

    7 Ganguly (32 inns)
    7 Tendulkar (58)
    6 DHAWAN (20)
    6 Sangakkara (56)
    6 Ponting (60)#INDvAUS #CWC19

    — Bharath Seervi (@SeerviBharath) June 9, 2019 " class="align-text-top noRightClick twitterSection" data=" ">

ಇತ್ತ ತಮ್ಮ ಆಟ ಮುಂದುವರಿಸಿದ ಶಿಖರ್​ 95 ಎಸೆತಗಳಲ್ಲಿ ತಮ್ಮ 17ನೇ ಶತಕ ಪೂರ್ಣಗೊಳಿಸಿದರು. ಒಟ್ಟಾರೆ 106 ಎಸೆತಗಳಲ್ಲಿ 117 ರನ್​ಗಳಿಸಿದ ಶಿಖರ್‌ ಔಟಾದರು. ಇವರ ಇನ್ನಿಂಗ್ಸ್​ನಲ್ಲಿ 16 ಬೌಂಡರಿ ಸೇರಿತ್ತು. ಈ ಶತಕದ ಮೂಲಕ ಧವನ್​ ಐಸಿಸಿ ಆಯೋಜಿಸಿರುವ ಟೂರ್ನಿಗಳಲ್ಲಿ 6ನೇ ಶತಕ ದಾಖಲಿಸಿ ರಿಕಿ ಪಾಂಟಿಂಗ್​, ಕುಮಾರ್​ ಸಂಗಕ್ಕಾರ ದಾಖಲೆ ಸರಿಗಟ್ಟಿದರು.

ಶಿಖರ್​ ಧವನ್​ ಓವೆಲ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಕಳೆದ 5 ಇನ್ನಿಂಗ್ಸ್​ನಲ್ಲಿ 450 ಕ್ಕೂ ಹೆಚ್ಚಿನ ರನ್​ ದಾಖಲಿಸಿದ್ದಾರೆ.ಧವನ್​ ಕಳೆದ 5 ಇನ್ನಿಂಗ್ಸ್​ನಲ್ಲಿ 125, 78, 21, 100 ಹಾಗೂ ಇಂದು ಕೂಡ ಶತಕ ದಾಖಲಿಸಿದ್ದಾರೆ.

  • Shikhar Dhawan in ICC ODI tournaments:

    2013 CT: Scored Century
    2015 WC: Scored Century
    2017 CT: Scored Century
    2019 WC: Scored Century

    — Broken Cricket (@BrokenCricket) June 9, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.