ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಪೋಸ್ಟರ್ಗಳನ್ನು ಹಾಕಿದ್ದ ಪ್ರಕರಣದಲ್ಲಿ ಒಟ್ಟು 25 ಮಂದಿಯನ್ನು ವಿವಿಧ ಪ್ರದೇಶಗಳಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ 25 ಎಫ್ಐಆರ್ಗಳನ್ನು ಸಹ ಪೊಲೀಸರು ದಾಖಲಿಸಿದ್ದಾರೆ.
ವ್ಯಾಕ್ಸಿನೇಷನ್ ಬಗೆಗಿರುವ ಎಲ್ಲಾ ಪೋಸ್ಟರ್ಗಳು ಪ್ರಧಾನಿ ವಿರುದ್ಧವೇ ಹಾಕಲಾಗಿದೆ. ಈ ಪೋಸ್ಟರ್ಗಳಲ್ಲಿ 'ಮೋದಿ ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳುಹಿಸಿದರು ಎಂದು ಬರೆಯಲಾಗಿದೆ. ಇಂತಹ ಪೋಸ್ಟರ್ಗಳನ್ನು ರಾಜಧಾನಿ ದೆಹಲಿಯ ಅನೇಕ ಸ್ಥಳಗಳಲ್ಲಿ ಅಳವಡಿಸಲಾಗಿದೆ.
ದೆಹಲಿಯ ವಿವಿಧ ಪ್ರದೇಶಗಳಲ್ಲಿ ಹಚ್ಚಲಾದ ಈ ಪೋಸ್ಟರ್ಗಳ ಬಗ್ಗೆ ಗುರುವಾರ ಪೊಲೀಸರಿಗೆ ವರದಿಯಾಗುತ್ತಿದ್ದಂತೆ, ದೆಹಲಿಯ ಹಲವಾರು ಜಿಲ್ಲೆಗಳಲ್ಲಿ ಸಾರ್ವಜನಿಕ ಆಸ್ತಿ ಹಾಳುಗೆಡವಿಕೆ ಮತ್ತು ಸಾರ್ವಜನಿಕ ಆಸ್ತಿ ವಿರೂಪಕರಣ ಕಾಯ್ದೆಯಡಿ ಒಟ್ಟು 25 ಪ್ರಕರಣಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ 25 ಜನರನ್ನು ಬಂಧಿಸಲಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ವ್ಯಕ್ತಿಯೊಬ್ಬರು ಪೋಸ್ಟರ್ ಹಾಕಿದ್ದಕ್ಕಾಗಿ 500 ರೂಪಾಯಿಗಳನ್ನು ಪಡೆದಿರುವುದಾಗಿ ಎಂದು ಹೇಳಿದ್ದಾರೆ.
ಬಂಧಿತರಲ್ಲಿ ಆಟೋ ಚಾಲಕರು, ಬಡಗಿಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಬೇರೆ ಯಾರು ಭಾಗಿಯಾಗಿದ್ದಾರೆಂದು ಕಂಡುಹಿಡಿಯಲು ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ನಿರ್ವಹಣಾ ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿ ಕೈಬಿಡುವ ಸಾಧ್ಯತೆ