ನವದೆಹಲಿ: ಅಮಿತ್ ಮಿಶ್ರಾ ,ಇಶಾಂತ್ ಶರ್ಮಾ ಬೌಲಿಂಗ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 115 ರನ್ಗಳಿಸಿತು. 50 ರನ್ಗಳಿಸಿದ ಪರಾಗ್ ಬಿಟ್ಟರೆ ಉಳಿದ ಯಾವೊಬ್ಬ ಆಟಗಾರನು ಡೆಲ್ಲಿ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾರದೆ ಹೋದರು.
-
.@RishabPant777 finishes the game with his 5⃣th six to get to a #VIVOIPL fifty and give @DelhiCapitals a 5 wicket win over #RR 🔥#DCvRR pic.twitter.com/yrvf4sNt7B
— IndianPremierLeague (@IPL) May 4, 2019 " class="align-text-top noRightClick twitterSection" data="
">.@RishabPant777 finishes the game with his 5⃣th six to get to a #VIVOIPL fifty and give @DelhiCapitals a 5 wicket win over #RR 🔥#DCvRR pic.twitter.com/yrvf4sNt7B
— IndianPremierLeague (@IPL) May 4, 2019.@RishabPant777 finishes the game with his 5⃣th six to get to a #VIVOIPL fifty and give @DelhiCapitals a 5 wicket win over #RR 🔥#DCvRR pic.twitter.com/yrvf4sNt7B
— IndianPremierLeague (@IPL) May 4, 2019
ಡೆಲ್ಲಿ ಪರ ಇಶಾಂತ್ ಶರ್ಮಾ 3, ಅಮಿತ್ ಮಿಶ್ರಾ 3 ಹಾಗೂ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದು ರಾಜಸ್ಥಾನ ತಂಡದ ಪ್ಲೇ ಆಫ್ ಕನಸಿಗೆ ಎಳ್ಳು-ನೀರು ಬಿಟ್ಟರು. 116 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ ರಿಷಭ್ ಪಂತ್ರ ಅರ್ಧಶತಕದ ನೆರವಿನಿಂದ 16.1 ಓವರ್ಗಳಲ್ಲಿ ಗುರಿ ತಲುಪಿ ಟೂರ್ನಿಯಲ್ಲಿ 9 ನೇ ಗೆಲುವು ದಾಖಲಿಸಿತು. ಡೆಲ್ಲಿ ಪರ ರಿಷಭ್ ಪಂತ್ ಔಟಾಗದೆ 53 ರನ್ ಗಳಿಸಿದರು. ಧವನ್ 16, ಅಯ್ಯರ್ 15, ಇಂಗ್ರಾಮ್ 12, ರುದರ್ಫರ್ಡ್ 11, ಪೃಥ್ವಿ ಷಾ 8 ರನ್ ಗಳಿಸಿದರು.
ರಾಜಸ್ಥಾನ ಪರ ಶ್ರೇಯಸ್ ಗೋಪಾಲ್ 2, ಇಶ್ ಸೋಧಿ 3 ವಿಕೆಟ್ ಪಡೆದು ಡೆಲ್ಲಿಗೆ ಸೋಲಿನ ಭಯ ಹುಟ್ಟಿಸಿದರಾದರು ಸಾಧಾರಣ ಮೊತ್ತ ದಾಖಲಿಸಿದ ಕಾರಣ ಇವರಿಬ್ಬರ ಹೋರಾಟ ವ್ಯರ್ಥವಾಯಿತು.