ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ಲಾಕ್‌ಡೌನ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದ ಜುಮಾ ನಮಾಜ್ ಪ್ರಯುಕ್ತ ಮಸೀದಿಯಲ್ಲಿ ಸಾಮೂಹಿಕವಾಗಿ ಸೇರುವುದನ್ನು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ನಿರ್ಬಂಧಿಸಿದ್ದಾರೆ. ಹೀಗಾಗಿ ಇಂದು ಮುಸ್ಲಿಮರು ಮನೆಯಲ್ಲಿಯೇ ನಮಾಜ್ ಮಾಡಿದರು.
ಲಾಕ್ ಡೌನ್‌ನಿಂದಾಗಿ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆದ್ದರಿಂದ ಜುಲೈ 22 ರವರೆಗೆ ಯಾರಿಗೂ ಮಸೀದಿ ಪ್ರವೇಶ ಮಾಡಲು ಅವಕಾಶ ಇಲ್ಲ. ಎಲ್ಲರೂ ಮನೆಯಲ್ಲಿಯೇ ನಮಾಜ್ ನೆರವೇರಿಸುವಂತೆ ತಿಳಿಸಿದ್ದಾರೆ.
ಅನ್‌ಲಾಕ್ 1.0 ಬಳಿಕ ಕೆಲವರಿಗೆ ಮಾತ್ರ ಆಯಾಯ ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಯಮ ಪಾಲಿಸಿ ನಮಾಜ್ ನೆರವೇರಿಸಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೊಳಿಸಿ ಮಸೀದಿಗಳಲ್ಲಿ ನಮಾಜ್ ನೆರವೇರಿಸುವುದನ್ನು ನಿರ್ಬಂಧಿಸಲಾಗಿದೆ.